Advertisement

ಒಂದು ಕೊಲೆಯ ಸುತ್ತ..: ಹುಟ್ಟುಹಬ್ಬದ ಶುಭಾಶಯಗಳು ಚಿತ್ರ ವಿಮರ್ಶೆ

11:12 AM Jan 01, 2022 | Team Udayavani |

ಒಂದು ಕೊಲೆ, ಜೊತೆಗೆ ಸಾಗುವ ಆತಂಕ, ಕುತೂಹಲ. ಹಾಗಾದರೆ ಕೊಲೆ ಮಾಡಿದವರು ಯಾರು, ಕೊಲೆಗೆ ಕಾರಣವೇನು? ಇದು ಈ ವಾರ ತೆರೆಕಂಡಿರುವ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಮೂಲ ಅಂಶ.

Advertisement

ಇಷ್ಟು ಹೇಳಿದ ಮೇಲೆ ಇದೊಂದು ಸಸ್ಪೆ ನ್ಸ್‌-ಥ್ರಿಲ್ಲರ್‌ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕೊಲೆಯಾದ ಬಳಿಕದ ಟೆನ್ಶನ್‌, ಹೆಣ ಸಾಗಿಸಲು ಪರದಾಟ, ಪೊಲೀಸರ ಭಯ… ಹೀಗೆ ಇಡೀ ಸಿನಿಮಾ ಇಂತಹ ಥ್ರಿಲ್ಲರ್‌ ಅಂಶಗಳೊಂದಿಗೆ ಸಾಗುತ್ತದೆ.

ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳಿರಬೇಕಾದ ಮೂಲಗುಣವೆಂದರೆ ಕ್ಷಣ ಕ್ಷಣಕ್ಕೂ ಸಿನಿಮಾ ಕುತೂಹಲ ಹೆಚ್ಚಿಸುತ್ತಾ ಸಾಗ ಬೇಕು ಮತ್ತು ತರ್ಕ ಮಿಸ್‌ ಆಗಬಾರದು. ಆ ಮಟ್ಟಿಗೆ ನಿರ್ದೇಶಕರ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರವನ್ನು ತಕ್ಕಮಟ್ಟಿಗೆ ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಆದರೆ, ಒಂದಷ್ಟು ತರ್ಕ ಹಾಗೂ ಸಸ್ಪೆನ್ಸ್‌ ಅಂಶಗಳನ್ನು ಇನ್ನಷ್ಟು ಬಿಗಿಗೊಳಿಸಿಕೊಂಡು ಸಾಗಿದ್ದರೆ ಚಿತ್ರದ ತೂಕ ಇನ್ನೂ ಹೆಚ್ಚುತ್ತಿತ್ತು. ಇಲ್ಲಿ ಮುಖ್ಯವಾಗಿ ಎದ್ದು ಕಾಣೋದು ಕೊಲೆಗಾರನ ಕಳ್ಳಾಟ. ಆ ಅಂಶವನ್ನು ಹೆಚ್ಚು ಹೈಲೈಟ್‌ ಮಾಡಲಾಗಿದೆ. ಚಿತ್ರದಲ್ಲಿ ಅಲ್ಲಲ್ಲಿ ಕಾಮಿಡಿ ಅಂಶಗಳು ಕೂಡಾ ಬಂದು ಹೋಗುತ್ತವೆ. ಥ್ರಿಲ್ಲರ್‌ ಸಿನಿಮಾವನ್ನು ನೀವು ಇಷ್ಟಪಡುವವರಾಗಿದ್ದರೆ ನಿಮಗೆ “ಹುಟ್ಟುಹಬ್ಬದ ಶುಭಾಶಯಗಳು’ ಒಂದಷ್ಟು ಥ್ರಿಲ್‌ ನೀಡಬಹುದು.

ಇದನ್ನೂ ಓದಿ:‘ಅರ್ಜುನ್ ಗೌಡ’ ಚಿತ್ರ ವಿಮರ್ಶೆ: ಪ್ರೀತಿಯ ಬಲೆಯಲ್ಲಿ ಮಾಫಿಯಾ ಅಲೆ!

Advertisement

ಚಿತ್ರದಲ್ಲಿ ದಿಗಂತ್‌ ಎರಡು ಶೇಡ್‌ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪಾತ್ರದಲ್ಲಿ ಇಷ್ಟವಾಗುತ್ತಾರೆ. ನಾಯಕಿ ಕವಿತಾ ಗೌಡ, ಮಡೆನೂರು ಮನು ಸೇರಿದಂತೆ ಇತರರು ನಟಿಸಿದ್ದಾರೆ. ಪ್ರತಿಯೊಬ್ಬರೂ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಆರ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next