Advertisement

ಕಲಾವಿದರಿಗೆ ಅವಕಾಶ ಕೊಡಿ ಇಲ್ಲವೇ ವಿಷ ಕೊಡಿ: ಜಿಲ್ಲಾಡಳಿತದ ವಿರುದ್ಧ ಕಲಾವಿದರ ಆಕ್ರೋಶ

01:40 PM Dec 11, 2020 | sudhir |

ಅಂಕೋಲಾ: ಕೋವಿಡ್‌-19 ಕಾರಣದಿಂದ ಸ್ತಬ್ಧವಾಗಿದ್ದ ಎಲ್ಲ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾದರೂ ಕಲಾವಿದರಿಗೆ
ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡದೆ ತಾರತಮ್ಯ ಮಾಡುತ್ತಿರುವ ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದ ಕಲಾವಿದರಿಗೆ ಬದುಕಲು ಅವಕಾಶ ನೀಡಿ ಇಲ್ಲವೇ ವಿಷ ಕೊಡಿ ಎಂದು ಹೇಳಿ ಮುಂಬರುವ ಗ್ರಾ.ಪಂ ಚುನಾವಣೆ ಬಹಿಷ್ಕಾರದ ನಿರ್ಣಯ
ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Advertisement

ರಂಗಭೂಮಿ, ಯಕ್ಷಗಾನ, ಸಂಗ್ಯಾಬಾಳ್ಯ, ಜಾನಪದ ಕಲಾವಿದರು, ಲೈಟಿಂಗ್‌ ಡೆಕೊರೇಶನ, ಸೌಂಡ್‌ ಸಿಸ್ಟಂ, ಶಾಮಿಯಾನ, ಪ್ರಿಂಟಿಂಗ್‌, ರಂಗಸಜ್ಜಿಕೆ, ಪ್ರಸಾಧನ, ಮುಂತಾದ ಕಲಾಪ್ರಕಾರಗಳ ಪ್ರತಿನಿಧಿಗಳು ಗುರುವಾರ ಜೈಹಿಂದ್‌ ಮೈದಾನದಲ್ಲಿ ಕರೆದ
ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ್ದಾರೆ. ರಂಗಸಜ್ಜಿಕೆ ಮಾಲೀಕ ಮೋಹನ ನಾಯ್ಕ ಮಾತನಾಡಿ, ಲಕ್ಷಾಂತರ ರೂ ಸಾಲ ಮಾಡಿ ಹಾಕಿದ ಪರಿಕರಗಳು ಕಾರ್ಯಕ್ರಮಗಳಿಲ್ಲದೆ ಹಾಳಾಗುತ್ತಿದೆ. ಆದಯಾವಿಲ್ಲದೆ ಸಾಲ ತುಂಬಲು ಕಷ್ಟವಾಗುತ್ತಿದೆ. ಸಂಸಾರ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದರು.

ಇದನ್ನೂ ಓದಿ:ಫಿಟ್ ನೆಸ್ ಟೆಸ್ಟ್ ನಲ್ಲಿ ತೇರ್ಗಡೆಯಾದ ರೋಹಿತ್: ಆಸೀಸ್ ಗೆ ಹಾರಲಿದ್ದಾರೆ ಹಿಟ್ ಮ್ಯಾನ್

ಯಕ್ಷಗಾನ ಕಲಾವಿದ ಶಿವಾ ನಾಯ್ಕ ಮಾತನಾಡಿ ಸರಕಾರಿ ರಾಜಕಿಯ ಕಾರ್ಯಕ್ರಮಗಳಿಗ ಯಾವುದೇ ನಿರ್ಬಂಧವಿಲ್ಲದೆ
ನಡೆಯುತ್ತದೆ. ಆದರೆ ಕಲಾವಿದರನ್ನೆ ಟಾರ್ಗೆಟ್‌ ಮಾಡುತ್ತಿದ್ದಾರೆ. ಇದರಿಂದ ಕಲೆ ಮತ್ತು ಸಂಸ್ಕೃತಿಯ ನಾಶ ಮಾಡುತ್ತಿದ್ದಾರೆ ಎಂದರು.

ಜಾನಪದ ಕಲಾವಿದ ಶಿವಾನಂದ ನಾಯ್ಕ ಮಾತನಾಡಿ, ಒಂದು ವಾರದೊಳಗೆ ನಮಗೆ ಅನುಮತಿ ನೀಡದಿದ್ದರೆ ಜಿಲ್ಲಾದ್ಯಂತ ಕಲಾವಿದರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದರು. ಶಾಮೀಯಾನ ಮತ್ತು ಸೌಂಡ್‌ ಸಿಟ್ಟಮ್‌ ಮಾಲೀಕ 10 ತಿಂಗಳಿನಿಂದ ನಾವು ಉದ್ಯೋಗ ವಂಚಿತರಾಗಿದ್ದೇವೆ. ಆದಾಯವಿಲ್ಲದೆ ಎಲ್ಲಾ ಪರಿಕರಗಳು ಧೂಳು ತಿನ್ನುತ್ತಿದೆ ಎಂದರು.

Advertisement

ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಜಾಂಬಳೇಕರ ಮಾತನಾಡಿ ಕಲೆಯನ್ನೇ ನಂಬಿ ಬದುಕುವ ಅದನ್ನೇ
ವೃತ್ತಿಯನ್ನಾಗಿಸಿಕೊಂಡ ಸಾವಿರಾರು ಕುಟುಂಬಗಳು ಕಳೆದ ಹತ್ತು ತಿಂಗಳಿಂದ ನಯಾ ಪೈಸೆ ಆದಾಯವಿಲ್ಲದೆ ಸಾಯುವುದಕ್ಕಿಂತ ಬದಲಾಗಿ ಜಿಲ್ಲಾಡಳಿತವೇ ವಿಷ ಕೊಟ್ಟು ಕಲಾವಿದರನ್ನು ಕೊಂದುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ದಿನದಲ್ಲಿ ಕಲೆಗಳಿಗೆ ಅವಕಾಶ ನೀಡದಿದ್ದರೆ ಸರಕಾರಿ ಕಾರ್ಯಕ್ರಮಗಳಿಗೂ ಖುರ್ಚಿ, ಶಾಮೀಯಾನ ಸೌಂಡ್‌ ಸಿಸ್ಟಮ್‌ ಮತ್ತು ಮುಂತಾದ ಪರಿಕರಗಳನ್ನು ಸರಕಾರಿ ಮತ್ತು ರಾಜಕಿಯ ಕಾರ್ಯಕ್ರಮಗಳಿಗೆ ಕೊಡುವುದಿಲ್ಲ. ಕೊರೊನಾ ಎಂದು ಕಲೆ ಮತ್ತು ಕಲಾವಿದರಿಗೆ ತುಳಿದರೆ ಮುಂಬರುವ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾದಿತು ಎಂದರು.

ಧನಂಜಯ ನಾಯ್ಕ, ಸುಜೀತ ನಾಯ್ಕ, ಗಣಪತಿ ಗೌಡ, ರಾಮಕೃಷ್ಣ ನಾಯ್ಕ, ಅರುಣ ಗಾಂವಕರ, ಪ್ರಶಾಂತ ಕೇಣಿ,
ಗಣಪತಿ ಶೆಟ್ಟಿ, ಮೋನಪ್ಪಾ ನಾಯ್ಕ, ರಾಜು ಕರಣ, ದಿನೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next