ಕೋಲಾರ: ಸಮಾಜ ಸೇವೆಯ ಧ್ಯೇಯದ ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವೆ ಎಂದು ಅರಿಕೆರೆ ಮಂಜುನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 1995ರಲ್ಲಿ ಜಿಪಂ ಸದಸ್ಯನಾಗಿ ಪರಿಚಯ ಹೊಂದಿದ್ದೇನೆ. ಕಳೆದ 35 ವರ್ಷ ರಾಜಕಾರಣದಲ್ಲಿ ನಾನು ಅನೇಕಚುನಾವಣೆ ಎದುರಿಸಿದ್ದೇನೆ. ಬೇರೆಯವರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, ಪಕ್ಷದ ಹೈಕಮಾಂಡ್ ನೀಡಿರುವ ಸೂಚನೆ ಮೇರೆಗ ಬೂತ್ ಮಟ್ಟದಿಂದ ಕಾಂಗ್ರೆಸ್ ಸಂಘಟಿಸಲು ಮುಂದಾಗಿರುವೆ ಎಂದು ಹೇಳಿದರು.
ಬೂತ್‌ಮಟ್ಟದಿಂದ ಸದೃಢ: ಸೆ.9ರಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಮಾಡಿರುವೆ, ನಂತರ ಹೈಕಮಾಂಡ್‌ಆಶೀರ್ವಾದ ಪಡೆಯುವುದು 3 ತಿಂಗಳುತಡವಾಗಿದ್ದು, ಈಗ ಹಸಿರು ನಿಶಾನೆದೊರಕಿರುವುದರಿಂದ ಮಾಧ್ಯಮದ ಮುಂದೆಬಂದಿರುವೆ. ಕೋಲಾರ ಕ್ಷೇತ್ರದಲ್ಲಿ 22 ವರ್ಷಗಳಿಂದಯಾರೂ ಕಾಂಗ್ರೆಸ್ ಶಾಸಕರಾಗಲು ಸಾಧ್ಯವಾಗಲಿಲ್ಲ.ಹಾಗಾಗಿ ಬೂತ್‌ಮಟ್ಟದಿಂದ ಸದೃಢಪಡಿಸುವ ಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಗಾಂಧಿ ಅವರ ಗ್ರಾಮ ಸ್ವರಾಜ್ ಕನಸು ನನಸು ಮಾಡಲು ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ಪ್ರತಿಯೊಂದರಲ್ಲೂ ಹಣದ ಹೊಳೆಯೇ ಹರಿಸಬೇಕಾಗಿರುವುದು ನೋವಿನ ಸಂಗತಿ ಎಂದು ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡಬೇಕಾಗಿರುವುದು ಪಕ್ಷದ ಕಾರ್ಯಕರ್ತರ ಜವಾಬ್ದಾರಿ. ಅದೇ ರೀತಿ ನಾನು ಸಹಕರ್ಮಯೋಗಿಯಂತೆ ಕೆಲಸ ಮಾಡುವುದಷ್ಟೆ ನನ್ನ ಕರ್ತವ್ಯ ಎಂದರು.
ಆತ್ಮ ಸಾಕ್ಷಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳುವುದಿಲ್ಲ. ಸಂವಿಧಾನ ಬದ್ಧವಾಗಿ ನಡೆದುಚುನಾವಣೆ ಎದುರಿಸುತ್ತೇನೆ. ಸಮಾಜ ಸೇವೆಮಾನಸಿಕವಾಗಿ ಆತ್ಮಸ್ಥೆರ್ಯ ಇರುವವರೆಗೆಮಾಡುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ನಾನು ಯಾವುದೇ ಬಣ ಪರ ಇರುವುದಿಲ್ಲ. ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕಿನ ವಲ್ಲಬ್ಬಿ ಗ್ರಾಮದ ಕನಕರಾಜ್, ಪ್ರೊ.ಗಣೇಶ್, ಗಂಗಾಧರ್ ಉಪಸ್ಥಿತರಿದ್ದರು.