ವಾಹನವಿರಲಿ, ಇಲ್ಲದಿರಲಿ ಬಹುತೇಕ ಎಲ್ಲರೂ ಕೂಡ ನಗರದಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ ಫುಟ್‌ಪಾತ್‌ನ್ನು ಬಳಸಲೇಬೇಕಾಗುತ್ತದೆ. ಫುಟ್‌ಪಾತ್ ಇಲ್ಲದಿರುವ ಕಡೆಗಳಲ್ಲಿ ಫುಟ್‌ಪಾತ್ ಇಲ್ಲ ಎಂಬುದು ಒಂದು ಗೋಳು. ಆದರೆ ಫುಟ್‌ಪಾತ್ ಇದ್ದರೂ ಅದು ಪಾದಚಾರಿಗಳ ಪ್ರಯೋಜನಕ್ಕೆ ಸಿಗದಿರುವುದು ದೊಡ್ಡ ದುರಂತವೇ ಸರಿ.
ಫುಟ್‌ಪಾತ್‌ಗಳ ಮೇಲೆ ವಾಹನಗಳ ಅಥವಾ ವ್ಯಾಪಾರಿಗಳ ಆಕ್ರಮಣ. ಪಾರ್ಕಿಂಗ್ ಕೊರತೆಯನ್ನು ಬಹುವಾಗಿ ಎದುರಿಸುತ್ತಿರುವ ಮಂಗಳೂರಿನಲ್ಲಿ ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್. ಈಗ ವಾಹನಗಳ ಕಣ್ಣು ಬಿದ್ದಿರುವುದು ಫುಟ್‌ಪಾತ್ ಮೇಲೆ. ಹಾಗಾಗಿ ಫುಟ್‌ಪಾತ್ ಏರಿ ಪಾರ್ಕಿಂಗ್ ಮಾಡಲಾಗುತ್ತದೆ ಇವು ಸಾಮಾನ್ಯ ಕಾರಣಗಳಾಗಿವೆ.
ನಗರದ ಹಲವೆಡೆ ರಸ್ತೆಗೆ ಸಮತಟ್ಟಾಗಿ ಫುಟ್‌ಪಾತ್ ಇರುವುದರಿಂದ ಫುಟ್‌ಪಾತ್‌ನ್ನು ರಸ್ತೆಯಂತೆಯೇ ವಾಹನಗಳು ಬಳಕೆ ಮಾಡುತ್ತಿವೆ. ವಾಹನಗಳ ಸಂಚಾರವೂ ಕೆಲವೊಮ್ಮೆ ಫುಟ್‌ಪಾತ್ ಮೇಲೆಯೇ ಇರುತ್ತದೆ. ಇದು ಪಾದಚಾರಿಗಳಿಗೆ ಭಾರೀ ಅಪಾಯ ವನ್ನು ತಂದೊಡ್ಡಿವೆ. ಇತ್ತೀಚೆಗೆ ಲಾಲ್‌ಭಾಗ್ ಸಮೀಪ ಕೆಎಸ್ಸಾರ್ಟಿಸಿ ಕಡೆಗೆ ಹೋಗುವ ಬಲ ಭಾಗದ ರಸ್ತೆ ಬದಿ ಕೂಡ ಇದೇ ರೀತಿ ಫುಟ್‌ಪಾತ್ ನಿರ್ಮಿಸಲಾಗಿದೆ. ಇದು ರಸ್ತೆಯಷ್ಟೇ ಎತ್ತರದಲ್ಲಿದೆ. ಈ ಹಿಂದೆ ನಿರ್ಮಾಣವಾದ ಪಿವಿಎಸ್‌ನಿಂದ ಲಾಲ್‌ಭಾಗ್‌ವರೆಗಿನ ರಸ್ತೆಯ ಫುಟ್‌ಪಾತ್‌ನಲ್ಲಿಯೂ ಹಲವಡೆ ಇದೇ ರೀತಿ ವಾಹನಗಳು ನುಗ್ಗಿ ಅಪಾಯ ತಂದೊಡ್ಡುತ್ತಿವೆ. ಲಾಲ್‌ಭಾಗ್‌ನಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಡೆಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ಮಾತ್ರವೇ ಫುಟ್‌ಪಾತ್ ಇದೆ. ಮುಂದೆ ರಸ್ತೆಯೇ ಫುಟ್‌ಪಾತ್ ಆಗಿದೆ. ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್‌ವರೆಗೆ ಸಾಗುವ ರಸ್ತೆಯ ಎರಡೂ ಬದಿ ಫುಟ್‌ಪಾತ್ ನಿರ್ಮಾಣ ನಡೆಯುತ್ತಿದೆ. ಆದರೆ ಆರ್‌ಟಿಒ ಕಚೇರಿ ಇರುವ ಬದಿಯಲ್ಲಿ ಫುಟ್‌ಪಾತ್ ಮೇಲೆ ಮ್ಯಾನ್‌ಹೋಲ್‌ಗಳನ್ನು ಮುಚ್ಚಲು ಇಡಲಾದ ಸ್ಲಾಬ್‌ಗಳು ಹಾಗೆಯೇ ಇವೆ. ಇದು ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ಕಾಮಗಾರಿಯನ್ನು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕಾಗಿದೆ.