ಸಕಲೇಶಪುರ: “ಶಾಸಕರೇ ನಮ್ಮೂರ ಸಮಸ್ಯೆಗಳ ನೋಡ ಬನ್ನಿ’ ಎಂಬ ಶೀರ್ಷಿಕೆಯಡಿ ಉದಯವಾಣಿ ಪತ್ರಿಕೆಯ ಹಾಸನ ಆವೃತ್ತಿಯಲ್ಲಿ ಆ.17ರಂದು ಪ್ರಕಟವಾಗಿದ್ದ ತಾಲೂಕಿನ ಅರೆಕೆರೆ ಗ್ರಾಮದ ಸಮಸ್ಯೆಗಳ ಕುರಿತು ಶಾಸಕರು ಹಾಗೂ ಅಧಿಕಾರಿಗಳ ಗಮ ನ ಸೆಳೆದ ಹಿನ್ನೆಲೆ ಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ತಂಡ ಅರೆಕೆರೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗ್ರಾಮದ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಿತು.
ಶಾಸಕ ಸಿಮೆಂಟ್ ಮಂಜು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಕೃಷ್ಣ, ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿ ಯಂತರ ಮುರುಗೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್‌ಮೂರ್ತಿ, ಕಂದಾಯ ನಿರೀಕ್ಷಕ ಸುರೇಶ್, ಪಿಡಿಒ ದರ್ಶನ್ ಸೇರಿದಂತೆ ಇತರ ಅಧಿಕಾರಿಗಳ ತಂಡ ಗ್ರಾಮವನ್ನು ಪರಿಶೀಲಿಸಿತು.
ಹಲವು ಸಮಸ್ಯೆ: ಈ ಸಂದಭದಲ್ಲಿ ಶಾಸಕ ಸಿಮೆಂಟ್‌ಮಂಜು ಪಿಡಿಒ ದರ್ಶನ್‌ರವರ ಕಾರ್ಯವೈಖರಿ ಕುರಿತು ಬೇಸರ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಶಾಸಕರು, ಉದಯವಾಣಿ ಪತ್ರಿಕೆಯಲ್ಲಿ ಗ್ರಾಮದ ಸಮಸ್ಯೆಗಳ ಕುರಿತು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಆಗಮಿಸಿ ಪರಿಶೀಲನೆ ಮಾಡಿದಾಗ ಹಲವು ಸಮಸ್ಯೆಗಳು ಇರುವುದು ಕಂಡು ಬಂದಿದೆ ಎಂದರು.
ಸುಣ್ಣ ಬಣ್ಣಕ್ಕೆ ಕ್ರಮ ಕೈಗೊಳ್ಳಿ: ಸಣ್ಣಪುಟ್ಟ ಕೆಲಸಗಳಿಗೆ ಗ್ರಾಮಸ್ಥರು ಸರ್ಕಾರದ ಅನುದಾನ ಕಾಯಬಾರದು, ಗ್ರಾಮಸ್ಥರೆಲ್ಲರು ಸೇರಿ ತಮ್ಮ ಸ್ವಂತ ಖರ್ಚಿನಿಂದ ಅಥವಾ ದಾನಿಗಳ ನೆರವಿನಿಂದ ಅಂಗನ ವಾಡಿ, ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸಲು ಮುಂದಾಗಬೇಕು ಎಂದರು.
ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶೌಚಾಲ ಯ ದುಸ್ಥಿತಿಯಲ್ಲಿದ್ದು, ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾ ಗುವುದು ಹಾಗೂ ದುಸ್ಥಿತಿಯಲ್ಲಿರುವ ಹಳೇ ಶಾಲಾ ಕಟ್ಟಡದ ಜಾಗವು ದಾನಿಗಳ ಹೆಸರಿನಲ್ಲಿದ್ದು, ದಾನಿಗಳಿಂದ ಶಾಲಾ ಹೆಸರಿಗೆ ಖಾತೆ ಆದ ನಂತರ ಮುಂದಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಅರೆಕೆರೆ ನಂದೀಶ್, ಜಗದೀಶ್ ಜಾನೆಕೆರೆ, ಬ್ಯಾಕರವಳ್ಳಿ ಜಯಣ್ಣ, ಬ್ಯಾಕರವಳ್ಳಿ ಭಾಸ್ಕರ್ ಮುಂತಾದವರು ಹಾಜರಿದ್ದರು.
ವಸತಿ ಯೋಜನೆಯಡಿ ಮನೆ ನೀಡಲು ಕ್ರಮ :
ನರೇಗಾ ಯೋಜನೆಯಡಿಯಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಂಗನವಾಡಿ ಹಾಗೂ ಶಾಲೆಗೆ ದಾನಿಗಳಿಂದ ಗ್ರಾಮದಲ್ಲಿರುವ ವಸತಿ ರಹಿತ ದಲಿತ ಕುಟುಂಬಗಳ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ದಾಖಲಾತಿ ಸಂಗ್ರಹಿಸಲು ಆದೇಶಿಸಿದ್ದು, ನಂತರ ವಸತಿ ಯೋಜನೆಯಡಿ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಉದಯವಾಣಿ ಪತ್ರಿಕೆಯ ವರದಿ ಬಳಿಕ ಶಾಸಕರು ತಕ್ಷಣ ಅಧಿಕಾರಿಗಳ ತಂಡದ ಜೊತೆಗೆ ಇಲ್ಲಿಗೆ ಆಗಮಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ಮಾಡಿರುವುದು ಸಂತೋಷದ ವಿಷಯವಾಗಿದೆ. ಶಾಸಕರಿಗೆ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯಲ್ಲೂ ನೆರವು ನೀಡಲಾಗುವುದು.
-ಅರೆಕೆರೆ ನರೇಶ್, ಗ್ರಾಮದ ಮುಖಂಡ
ಅರೆಕೆರೆ ಗ್ರಾಮದಲ್ಲಿ ಎರಡು ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಬೇಡಿಕೆ ಯಿದ್ದು, ಮುಂದಿನ ದಿನಗಳಲ್ಲಿ ಈ ಯೋಜ ನೆಗೆ ಅನುದಾನ ಬಿಡುಗಡೆ ಮಾಡಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಸಿಮೆಂಟ್ ಮಂಜು, ಶಾಸಕ
– ಸುಧೀರ್ ಎಸ್.ಎಲ್.