Advertisement
ಕ್ಯಾಂಪ್ಕೋ, ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಸ್ಥಿರವಾಗಿದ್ದರೆ, ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಏರು ಮುಖದತ್ತ ಸಾಗಿರುವುದು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಒಂದು ತಿಂಗಳ ಧಾರಣೆಯ ಅಂಕಿ- ಅಂಶ ಗಮನಿಸಿದರೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20 ರೂ., ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 8 ರಿಂದ 10 ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20ರಿಂದ 25 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20ರಿಂದ 23 ರೂ.ನಷ್ಟು ಹೆಚ್ಚಳ ಕಂಡಿದೆ. ಧಾರಣೆ ಏರಿಕೆ: ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಮಾ. 12ರಂದು ಹೊಸ ಅಡಿಕೆಗೆ ಹೊಸ ಅಡಿಕೆಗೆ 340-350 ರೂ., ಸಿಂಗಲ್ ಚೋಲ್‌ಗೆ 418 ರೂ.ನಿಂದ 420 ರೂ., ಡಬ್ಬಲ್ ಚೋಲ್ 430 ರೂ.ನಿಂದ 440 ರೂ. ತನಕ ಇತ್ತು. ಮಾ. 18ರಂದು ಹೊಸ ಅಡಿಕೆಗೆ 340ರಿಂದ 350 ರೂ., ಸಿಂಗಲ್ ಚೋಲ್‌ಗೆ 420ರಿಂದ 430 ರೂ., ಡಬ್ಬಲ್ ಚೋಲ್‌ಗೆ 435 ರಿಂದ 445 ರೂ. ತನಕ ಧಾರಣೆ ಇತ್ತು. ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್, ಡಬ್ಬಲ್ ಚೋಲ್‌ಗೆ ಕೆ.ಜಿ.ಗೆ ರೂ. 5ರಷ್ಟು ಧಾರಣೆ ಹೆಚ್ಚಿತ್ತು.
Related Articles
ಕೊಕ್ಕೊ ಧಾರಣೆ ಏರಿಕೆಯ ಓಟ ಮತ್ತಷ್ಟು ಮುಂದುವರಿದಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ.15ರಂದು ಹಸಿ ಕೊಕ್ಕೊ ಕೆ.ಜಿ.ಗೆ 170 ರೂ. ದರದಲ್ಲಿ ಖರೀದಿಯಾಗಿದೆ. ಒಣ ಕೊಕ್ಕೊ ಕೆ.ಜಿ.ಗೆ 500-575 ರೂ. ತನಕ ಖರೀದಿಯಾಗಿದೆ.
Advertisement