Advertisement

ಒಣಗುತ್ತಿರುವ ಅಡಿಕೆ ಹಿಂಗಾರ: ಕಂಗಾಲಾದ ಕೃಷಿಕ

01:48 PM May 27, 2019 | keerthan |

ಕಾರ್ಕಳ: ತಾಲೂಕಿನಲ್ಲಿ ಅಡಿಕೆ ಪ್ರಧಾನ ಕೃಷಿಗಳಲ್ಲೊಂದು. ಇದೀಗ ಬಿಸಿಲಿನ ಬೇಗೆಗೆ ಅಡಕೆ ಹಿಂಗಾರ ಒಣಗುತ್ತಿರುವುದು ಅಡಿಕೆ ಕೃಷಿಕರಲ್ಲಿ ಆತಂಕವುಂಟು ಮಾಡಿದೆ. ನೀರಿನ ಬರ ಒಂದೆಡೆಯಾದರೆ, ಅತಿಯಾದ ತಾಪ ಮಾನದಿಂದಾಗಿ ಅಡಿಕೆ ಹಿಂಗಾರ ಒಣ ಗುತ್ತಿರುವುದು ಕೃಷಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಅಡಿಕೆ ಕೃಷಿಗೆ ಕೊಳೆ ರೋಗ ಬಾ ಸಿತ್ತು. ಕಾರ್ಕಳದಲ್ಲಿ ಒಟ್ಟು 3480 ಹೆಕ್ಟೇರ್‌ನಲ್ಲಿ ಅಡಿಕೆ ಕೃಷಿಯಿದ್ದು ವರ್ಷಕ್ಕೊಂದು ಸಮಸ್ಯೆ ಅಡಕೆ ಕೃಷಿಯನ್ನು ಬಾಧಿಸುತ್ತಿದೆ.

Advertisement

ಪೆಂಟಾಟೋಮಿಡ್‌ ಹುಳದ ಬಾಧೆ ಯಿಂದಲೂ ಕಾಯಿ ಅಡಿಕೆ ಬೀಳುವ ಅಪಾಯವೂ ಇದೆ ಎನ್ನಲಾಗಿದೆ. ಇನ್ನು ಮಳೆಗಾಲ ಬಂತೆಂದರೆ ಬೋಡೋì ಸಿಂಪಡಣೆ ಮಾಡಲಾಗುತ್ತಿದೆ. ಆದರೆ, ಎಡೆಬಿಡದೇ ಮಳೆ ಸುರಿಯುವುದು, ಮಳೆ ಕಡಿಮೆಯಾದಾಗ ಸಿಂಪಡಣೆಗೆ ಪರಿಣತರು ಸಿಗದಿರುವುದು ಕೃಷಿಕರನ್ನು ಹೈರಾಣಗುಸುತ್ತಿದೆ. ಸೂಕ್ತ ಕಾಲಕ್ಕೆ ಬೋಡೋ ಸಿಂಪಡಣೆ ಮಾಡಲು ಸಾಧ್ಯ ವಾಗದೇ ಹೋದಲ್ಲಿ ಭಾರಿ ನಷ್ಟವನ್ನೇ ಅನುಭವಿಸುವಂತಾಗಲಿದೆ.

ಹಾನಿ ತಡೆ ಸಾಧ್ಯ
ಅತಿಯಾದ ತಾಪಮಾನದಿಂದ ಅಡಿಕೆ ಹಿಂಗಾರ ಒಣ ಗುವುದುಂಟು. ಕೆಲವೊಮ್ಮೆ ಪೆಂಟಾಟೋಮಿಡ್‌ ಹುಳವೂ ಹಿಂಗಾರವನ್ನು ಬಾಸುತ್ತದೆ. ಹುಳ ಬಾಧೆಯಾದಲ್ಲಿ ಹಿಂಗಾರದಲ್ಲಿ ಅದರ ಕಡಿತ ಗೋಚರಿಸಲಿದೆ. 2 ಮಿ.ಲೀ. ಡಿಮೆಥೊಯೇಟ್‌ಅನ್ನು 1 ಲೀ. ನೀರಿಗೆ ಬೆರೆಸಿ, ಹುಳ ಬಾಧೆ ಕಂಡುಬಂದ ಗಿಡ ಮತ್ತು ಅದರ ಸುತ್ತಮುತ್ತಲಿನ ಗಿಡಕ್ಕೆ ಸಿಂಪಡಿಸಿದಲ್ಲಿ ಹಾನಿ ತಡೆಯಬಹುದು.
-ಶ್ರೀನಿವಾಸ್‌, ಸಹಾಯಕ ತೋಟಗಾರಿಕಾ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next