Advertisement

ಏರಿಯಾ ಹುಡುಗರಿಗೆ ಧ್ರುವ ಸರ್ಜಾ ಸಾಥ್‌

04:06 PM Mar 25, 2021 | Team Udayavani |

“ಏರಿಯಾ ಹುಡುಗರು’- ಹೀಗೊಂದು ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಧ್ರುವ ಸರ್ಜಾ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಯುವ ಚಿತ್ರತಂಡದ ಹೊಸ ಪ್ರಯತ್ನವನ್ನು ಮೆಚ್ಚಿದರು.

Advertisement

ಒಂದೇ ಏರಿಯಾದಲ್ಲಿರುವ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳನ್ನು ಈ ಚಿತ್ರದ ಮೂಲಕ ತೆರೆಮೇಲೆ ಹೇಳಹೊರಟಿದ್ದಾರೆ ಚಿತ್ರದ ನಿರ್ದೇಶಕ ಮೋಹನ್‌ ಅಪ್ಪು. ಈ ಹಿಂದೆ ನಾನೊಂಥರಾ ಚಿತ್ರದಲ್ಲಿ ಅಭಿನಯಿಸಿದ್ದ ಡಾ.ತಾರಕ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ತಮಿಳಿಗೆ ಹಾರಿದ ಕೆಜಿಎಫ್ ಗರುಡ

ಈ ಚಿತ್ರಕ್ಕೆ ನಾಗೇಶ್‌ ಉಚ್ಚಂಗಿ ಅವರು ಛಾಯಾಗ್ರಹಣ ಮಾಡುವುದರ ಜೊತೆಗೆ ನಿರ್ದೇಶನದಲ್ಲೂ ಸಹ ಸಾಥ್‌ ನೀಡಿದ್ದಾರೆ.

ಸುಮಂತ್‌ ಲವ್‌ಗುರು ಹಾಗೂ ನಾಗರಾಜುಗುಪ್ತ ಅವರು ಈ ಚಿತ್ರದ ನಿರ್ಮಾಪಕರು. ಕಲ್ಕಿ ಅಭಿಷೇಕ್‌ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next