Advertisement

ಅಮೆರಿಕದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದೀರಾ?

05:26 PM Apr 01, 2019 | Team Udayavani |

ಅಮೆರಿಕದ ಮಿಸ್ಸೋರಿ ರಾಜ್ಯ ವಿಶ್ವವಿದ್ಯಾನಿಲಯವು ನಾಲ್ಕು ವರ್ಷಗಳ ಸಹಕಾರ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಯೋಜನೆಗೆ (ಕೋ-ಆಪರೇಟಿವ್‌ ಎಂಜಿನಿಯರಿಂಗ್‌ ಪ್ರೋಗ್ರಾಂ) ಭಾರತೀಯ ಪದವಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಪದವಿ ಯೋಜನೆಯನ್ನು ಮಿಸ್ಸೋರಿ ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತಿದೆ. ಎಲೆಕ್ಟ್ರಿಕಲ್‌, ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಗಳಿಗೆ ಮತ್ತು ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್‌ ಓದಲಿಚ್ಚಿಸುವವರಿಗೆ ಈ ವಿದ್ಯಾರ್ಥಿವೇತನ ಅನ್ವಯವಾಗಲಿದೆ.

Advertisement

ಅತ್ಯುತ್ತಮ ಸೌಲಭ್ಯಗಳಿಗೆ ಹೆಸರಾದ ವಿದ್ಯಾರ್ಥಿಗಳಿಗೆ ತರಗತಿ ಪಾಠಗಳು, ವೃತ್ತಿನಿರತರಿಂದ ಕಲಿಯುವ ಅವಕಾಶ, ತಂಡಗಳ ಆಧಾರಿತ ಸ್ಪರ್ಧೆಗಳು ಮತ್ತು ಇಂಟರ್ನ್ಶಿಪ್‌ಗ್ಳು ಮುಂತಾದ ಸೌಲಭ್ಯಗಳು ದೊರೆಯಲಿವೆ. ಈ ವಿದ್ಯಾಭ್ಯಾಸ ಯೋಜನೆಯು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೌಶಲ್ಯ, ಬೇಡಿಕೆ, ಬೆಳವಣಿಗೆ ಮತ್ತು ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ಭೋದನೆ, ಗ666ೌರವಯುತ ವಾಸ್ತವ್ಯವನ್ನು ನೀಡಲಾಗುವುದು. ವಾರ್ಷಿಕ 5 ಲಕ್ಷದ ವರೆಗಿನ ಖರ್ಚನ್ನು ವಿದ್ಯಾರ್ಥಿವೇತನ ಭರಿಸಲಿದೆ.

ಎಂ.ಎಸ್‌. ಓದಲಿಚ್ಚಿಸುವವರು ಬ್ಯಾಚಲರ್‌ ಡಿಗ್ರಿಯಲ್ಲಿ 2.75 ಜಿ.ಪಿ.ಎ ಗಳಿಸಿರಬೇಕು, ಜಿ.ಆರ್‌.ಇ ಪರೀಕ್ಷೆಯಲ್ಲಿ 290 ಅಂಕಗಳನ್ನು ಗಳಿಸಿರಬೇಕು ಮತ್ತು TOEFEL ಇಂಗ್ಲೀಷ್‌ ಪರೀಕ್ಷೆಯಲ್ಲಿ 61 ಅಥವಾ IELTS ಇಂಗ್ಲೀಷ್‌ ಪರೀಕ್ಷೆಯಲ್ಲಿ 5.5 ಅಂಕಗಳನ್ನು ಗಳಿಸಿರಬೇಕು.

ಕೋ-ಆಪರೇಟಿವ್‌ ಎಂಜಿನಿಯರಿಂಗ್‌ ಪ್ರೋಗ್ರಾಂನ ಅಡಿ ಯು.ಜಿ ಓದಲಿಚ್ಚಿಸುವವರು ಪಿಯುಸಿನಲ್ಲಿ ಸರಾಸರಿ ಶೇ.65 ಅಂಕ ಗಳಿಸಿರಬೇಕು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಏಪ್ರಿಲ್‌ 30.

ಹೆಚ್ಚಿನ ಮಾಹಿತಿಗೆ: tinyurl.com/y4vae6gx

Advertisement
Advertisement

Udayavani is now on Telegram. Click here to join our channel and stay updated with the latest news.

Next