Advertisement

ನೀವು ಸರ್ಕಲ್‌ ಇನ್‌ಸ್ಪೆಕ್ಟ್ರಾ?

07:46 PM Jan 06, 2020 | Sriram |

ಇದೇನು ಸ್ವಾಮೀ ಹೀಗೆ ಕೇಳ್ತೀರ? ಅಂದು ಕೊಂಡ್ರಾ? ನಿಮ್ಮ ಕಣ್ಣಿನ ಸುತ್ತ ವೃತ್ತಾಕಾರದಲ್ಲಿ ಕಪ್ಪು ಕಲೆಗಳಿದ್ದರೆ, ನಿಮ್ಮನ್ನು ಹಿಂದೆಯಿಂದ ಈ ರೀತಿ ಆಡಿಕೊಂಡರೂ ಆಶ್ಚರ್ಯಪಡಬೇಡಿ. ಕಣ್ಣಿನ ಸುತ್ತ ಕಪ್ಪು, ಕಂದು ಬಣ್ಣದ ವೃತ್ತಾಕಾರ ಶುರುವಾದರೆ, ಎಷ್ಟೇ ಸೌಂದರ್ಯವಂತನಾದರೂ ಎಲ್ಲರ ನೋಟ ಕಣ್ಣಿನ ಕಡೆಗೆ ತಿರುಗುತ್ತದೆ. ಇದೊಂಥರ ದೃಷ್ಟಿ ಚುಕ್ಕೆ ಇದ್ದಹಾಗೆ. ಹಾಗಂತ, ದೊಡ್ಡ ವಿಚಾರ ಅಲ್ಲ ಬಿಡಿ. ಆದರೆ, ಬ್ಲಾಕ್‌ ಸರ್ಕಲ್‌ ಏಕೆ ನಮ್ಮ ಕಣ್ಣ ಸುತ್ತಲೇ ಅಡ‚ರಿಕೊಳ್ಳುತ್ತದೆ ಅನ್ನೋದೇನಾದರು ಗೊತ್ತಾ?

Advertisement

ನಿದ್ದೆ ಇಲ್ಲ. ರಾತ್ರಿ ಇಡೀ ಕೆಲಸ ಮಾಡಿ, ಬೆಳಗ್ಗೆ ಎದ್ದು ಮತ್ತೆ ಕೆಲಸ ಶುರು ಮಾಡಿದರೆ ಇನ್ನೇನಾಗುತ್ತೆ? ನೈಟ್‌ಶಿಫ್ಟ್ ಮಾಡೋರಿಗೆ ಕಣ್ಣಿನ ಸುತ್ತ ಸರ್ಕಲ್‌ ಬಂದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ. ಇವರಿಗೆ ಕಣ್ಣಿನ ಮೇಲೆ ಒತ್ತಡ ಹೆಚ್ಚು. ಸದಾ ಕಂಪ್ಯೂಟರ್‌ ಮುಂದೆ ಕೂತಿರೋರಿಗೆ ಇದರ ಕಾಟ ತಪ್ಪಿದ್ದಲ್ಲ. ದೇಹ, ಮನಸ್ಸು ಆರೋಗ್ಯವಾಗಿರಲು ಕನಿಷ್ಠ 7 ಗಂಟೆ ಒತ್ತಡ ರಹಿತ ನಿದ್ದೆ ಬೇಕು. ಇದರಲ್ಲಿ ಮೂರು ಗಂಟೆ ಡೀಪ್‌ ಸ್ಲಿàಪ್‌ ಇರಬೇಕು. ನಿದ್ದೆ ಇಲ್ಲದೇ ಇದ್ದರೆ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ಶುರುವಾಗುತ್ತದೆ. ಕಣ್ಣ ಸುತ್ತ ಕಪ್ಪು ವೃತ್ತ ಶುರುವಾಗುವುದೇ ಆಗ. ನೀವು ಆಫೀಸಲ್ಲಿ ಕೆಲಸಗಳನ್ನು ಹೇಗೆ ಮ್ಯಾನೇಜ್‌ ಮಾಡುತ್ತಿರೋ ಹಾಗೆ, ಒತ್ತಡಗಳನ್ನು ನಿಭಾಯಿಸುವ ಕಲೆಯೂ ನಿಮಗೆ ತಿಳಿದಿರಬೇಕು.

ನಿದ್ದೆಗೆಟ್ಟರೆ ದೇಹದಲ್ಲಿ ಪೌಷ್ಠಿಕಾಂಶಗಳು ಕಡಿಮೆಯಾಗುತ್ತವೆ. ಸಿರಿಧಾನ್ಯಗಳನ್ನು ತಿಂದರೆ ಬ್ಯಾಲೆನ್ಸ್‌ ಆಗುತ್ತದೆ. ಆಫೀಸಲ್ಲಿ ಕೆಲಸ ಮಾಡುತ್ತಿರುವಾಗಲೇ, ಕಣ್ಣಿನ ಮೇಲೆ ಒತ್ತಡ ಎನಿಸಿತು ಅನ್ನಿ. ಆಗ ಬ್ಯಾಗಲ್ಲಿ ಸೌತೇಕಾಯಿ ಇಟ್ಟುಕೊಂಡಿರಿ. ಅದನ್ನು ಹೋಳು ಮಾಡಿ ಕಣ್ಣು ಮುಚ್ಚಿ, ಅದರ ಮೇಲೆ ಇಟ್ಟು ಹತ್ತು ನಿಮಿಷ ಸುಮ್ಮನಿರಿ. ಆಮೇಲೆ ನೋಡಿ ಕಣ್ಣು ತಂಪು ತಂಪಾಗುತ್ತದೆ. ಆಲೂಗಡ್ಡೆಯನ್ನು ಒಪ್ಪು ಮಾಡಿ ಪದೇ ಪದೇ ಹೀಗೆ ಮಾಡುವುದರಿಂದಲೂ ಕಣ್ಣಿನ ಸುತ್ತಲಿನ ಸರ್ಕಲ್‌ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next