Advertisement
ನರಸಿಂಹ ಮೂರ್ತಿ ಎನ್ ಎಂ:ಯಾವ ಲಾಕ್ ಡೌನೂ ಬೇಕಾಗಿಲ್ಲ. ಇನ್ನು ಮುಂದೆ ಏನಿದ್ದರೂ ಸ್ವಯಂ ಲಾಕ್ ಡೌನ್ ಅನೌನ್ಸ್ ಮಾಡಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಗೊಳಿಸಬೇಕು. ಸ್ವಯಂ ಲಾಕ್ ಡೌನ್ ಗೆ ಒಂದು ತಿಂಗಳ ಕಾಲಮಿತಿ ಕೊಡಬೇಕು. ಆ ದಿನಾಂಕದ ನಂತರ ಪಾಜಿಟಿವ್ ಬಂದರೆ ಅವರೇ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಪಡೆಯಬೇಕು ಎಂದು ನಿಯಮ ಮಾಡಿದರೆ ಆಗ ಎಚ್ಚೆತ್ತುಕೈಳ್ಳಬಹುದು. ಇಲ್ಲವಾದರೆ ಪುಕ್ಕಟ್ಟೆ ಚಿಕಿತ್ಸೆ ನೀಡುತ್ತಾ ಹೋದರೆ ಬೇಜವಾಬ್ದಾರಿತನ ಜಾಸ್ತಿ ಆಗಿ ಕೊರೋನಾ ಮತ್ತಷ್ಟು ಹೆಚ್ಚುತ್ತದೆ
Related Articles
Advertisement
ಚಿ. ಮ. ವಿನೋದ್ ಕುಮಾರ್: 90% ಪ್ರತಿಶತ ಜನರು ಬೀದಿಗೆ ಬೀಳುತ್ತಾರೆ.ಹಸಿವಿನಿಂದ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ.
ಸುಮ ಕಾರಂತ್: ದುಡ್ಡಿರೋರು ಲಾಕ್ಡೌನ್ ಮಾಡಿದರು ಜೀವನ ನಡೆಸುತ್ತಾರೆ ದುಡ್ಡು ಇಲ್ಲದವರು ಏನು ಮಾಡಬೇಕು, 5 ಕೆಜಿ ಅಕ್ಕಿ 1ಕೆಜಿ ಬೇರೆ ಕೊಟ್ಟರೆ ಜೀವನ ಮಾಡಲು ಆಗುತ್ತ, ಭಾನುವಾರ ಒಂದು ದಿನ ಕೋವಿಡ್-19 ಬರುವುದಿಲ್ಲವೇ, ಬೆಳಗ್ಗೆ ಒಂದು ನಿರ್ಧಾರ ಸಂಜೆ ಒಂದು ನಿರ್ಧಾರ ತೆಗೆದು ಕೊಳ್ಳುತ್ತೀರಾ, ಎಲ್ಲರಿಗೂ ದುಡ್ಡುಕೊಟ್ಟು ಲಾಕ್ಡೌನ್ ಮಾಡಿ
ಸತೀಶ್ ರಾವ್: ಊರು ಕೊಳ್ಳೇ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿ ದಂತೆ ಈ ಗಾದೆ ಸದ್ಯದ ಪರಿಸ್ಥಿತಿಯಲ್ಲಿ ಸರಿಯಾಗಿ ಅನ್ವಯಿಸಬಹುದು, ಇನ್ನುಮುಂದೆ ಯಾವುದಾದರೂ ಪವಾಡ ನಡೀಬೇಕು. ಇಲ್ಲ ಅಂದ್ರೆ ನಮ್ಮ ಜಾಗ್ರತೆಯಿಂದ ನಾವಿರಬೇಕು. ಸರ್ಕಾರ ಮಾಡಿದನ್ನ ನೋಡಿ ಸಾಕಾಗಿದೆ.