Advertisement
ಹಬ್ಬ ಎಂದಾಗ ಮನೆಯ ಹಿರಿಯವರೆಲ್ಲ ಆಚರಣೆಗಳ ಕಡೆಗೆ ಗಮನ ಕೊಟ್ಟರೆ ನಾವು ಯುವಕರು ಹಬ್ಬಗಳಲ್ಲಿ ಸಿಗುವಂತಹ ಆ ಮಜವಾದ ಕ್ಷಣಗಳ ಕಡೆಗೆ ಗಮನವಹಿಸುತ್ತೇವೆ.
Related Articles
Advertisement
ಹಾಗಾದ್ರೆ ಈ ಹಬ್ಬಗಳೆಲ್ಲ ಯಾಕೆ ಈಗ ಮರೆಯಾಗುತ್ತಿವೆ. ಹೀಗೆ ಹಬ್ಬಗಳೆಲ್ಲ ಕಾಣೆಯಾಗುವುದು ಪ್ರಾರಂಭವಾಗಿದ್ದು ಸಿನೆಮಾಗಳು, ಮಾಲ್‌ಗಳು, ಗೇಮ್‌ಗಳು, ಸೋಶಿಯಲ್ ಮೀಡಿಯಾಗಳು ಹಾಗೆ ಆಧುನಿಕ ಜೀವನಶೈಲಿ ಹೀಗೆ ಮನೋರಂಜನೆಗಾಗಿ ನಾನಾ ಕ್ಷೇತ್ರ ಬೆಳೆಯಲಿಕ್ಕೆ ಪ್ರಾರಂಭವಾದಾಗ ಇಲ್ಲಿ ನಮ್ಮ ಆಚರಣಗಳಲ್ಲಿ ಸಿಗುವ ಮನೋರಂಜನೆ ಏನೂ ಅಲ್ಲ ಎಂಬಂತ ಭಾವನೆ ಯುವಕರ, ಮಕ್ಕಳ ಹಾಗೂ ಜನರ ಎಲ್ಲರ ಮನಸ್ಸನ್ನು ಮೋಡಿ ಮಾಡಿತು. ಹೀಗೆ ನಮ್ಮ ಆಚರಣೆ ಬರೀ ಮನೋರಂಜನೆ ಮಾತ್ರವಲ್ಲ ವೈಜ್ಞಾನಿಕವಾಗಿ ಹಾಗೂ ದೈವಿಕವಾಗಿ ನಮಗೆ ಹಿತೈಷಿಯಾಗಿದೆ ಎಂಬುದನ್ನು ನಾವು ಮರೆತುಬಿಟ್ಟೆವು. ಇದು ಒಂದು ರೀತಿಯಲ್ಲಿ ಹಬ್ಬಗಳು ಮರೆಯಾಗಲು ಕಾರಣವಾದರೆ ಬೆಳೆಯುತ್ತಿರುವ ಆಧುನಿಕ ಸಮಾಜದಲ್ಲಿ ಮನೆಯ ಬಾಗಿಲನ್ನು ಯಾವಾಗಲೂ ಮುಚ್ಚುವುದು ಇನ್ನೊಂದು ಕಾರಣವಾಗಿದೆ. ಇದು ಹೇಗೆಂದರೆ ಮೊದಲು ಪ್ರತಿಯೊಬ್ಬ ಮನುಷ್ಯನಲ್ಲೂ ನಂಬಿಕೆ,ವಿಶ್ವಾಸ ಇದ್ದವು. ಆಚೆ ಈಚೆ ಮನೆಯಲ್ಲಿ ಆತ್ಮೀಯತೆ ಮತ್ತು ಒಡನಾಟ ಇತ್ತು.
ಈಗ ಕಾಲ ಎಲ್ಲಿವರೆಗೆ ಬಂದಿದೆ ಎಂದರೆ ಈ ಖಾಸಗಿತನಕ್ಕೆ ಒತ್ತು ಕೊಡುತ್ತಾ ಪಕ್ಕದ ಮನೆಯವರ ಹೆಸರು ಕೂಡ ಗೊತ್ತಿರದಷ್ಟು ಮೂಢರಾಗಿಬಿಟ್ಟಿದ್ದೇವೆ ನಾವು. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ಮೊಗ್ನರಾಗಿ ಮನುಷ್ಯರಿಗಿಂತ ನಾವು ಆಧುನಿಕ ರೋಬೋಟ್ ಗಳಾಗಿ ಜೀವನ ಮಾಡುತ್ತಿದ್ದೇವೆ. ಜೀವನವನ್ನು ಅನುಭವಿಸುವ ಬದಲು ಸವೆಸುತ್ತಿದ್ದೇವೆ.
ನವಯುಗದ ಭ್ರಮೆಯಿಂದ ಹೊರಬಂದು ಆತ್ಮೀಯತೆ ಹಾಗೂ ಒಡನಾಟವನ್ನು ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ, ನಮ್ಮ ಆಚರಣೆ, ನಮ್ಮ ಸಂಬಂಧ ಹಾಗೂ ನಮ್ಮೂರು ವೈಭವಿಕೃತವಾಗಿರುತ್ತದೆ. ನಮ್ಮಲ್ಲಿನ ರೋಬೋಟ್ ಮನಸ್ಥಿತಿ ಒಡೆದು ಹೋಗಿ ನಮ್ಮ ಜೀವನವನ್ನು ನೋಡುವ ರೀತಿಯೂ ಬದಲಾಗುತ್ತದೆ. ಇವೆಲ್ಲದರ ಮೊದಲ ಹೆಜ್ಜೆ ಮತ್ತೆ ನಮ್ಮ ಆಚರಣೆ ಹಬ್ಬಗಳ ಕಡೆಗೆ ಮುಖ ಮಾಡುವಮೂಲಕ ನಮ್ಮ ಮನಸ್ಥಿತಿಗೆ ಅಂಟಿದ್ದ ಸಂಕುಚಿತ ಭಾವ ಮರೆಯಾಗಲಿದೆ.
-ರಿಶಿರಾಜ್
ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ