ದುಬಾೖ: ಭಾರತದ ಕೋಟ್ಯಂತರ ಮಂದಿ ಟೀವಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಭಾರತದ ಎಲ್ಲ ಪಂದ್ಯಗಳನ್ನೂ ರಾತ್ರಿಯೇ ಇರಿಸಿಳ್ಳಲಾಗಿದೆ. ಹಾಗೆಯೇ 5 ಲೀಗ್ ಪಂದ್ಯಗಳ ಪೈಕಿ ನಾಲ್ಕನ್ನು ದುಬಾೖಯಲ್ಲೇ ಇಟ್ಟುಕೊಳ್ಳಲಾಗಿದೆ.
ಜಾಹೀರಾತಿನ ದೃಷ್ಟಿಯಿಂದ, ಗರಿಷ್ಠ ಪ್ರೇಕ್ಷಕರಿಗೆ ಅವಕಾಶ ನೀಡುವ ದೃಷ್ಟಿಯಿಂದ ಇದು ಸರಿಯೇ ಹೌದು. ಆದರೆ ಇಲ್ಲೊಂದು ಸಮಸ್ಯೆಯಿದೆ. ಅಪರಾಹ್ನ 3.30ರಿಂದ ಆಡುವುದಾದರೆ ಇಬ್ಬನಿಯ ಪರಿಣಾಮ ಇರುವುದಿಲ್ಲ. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಲೀ, ಅನಂತರ ಮಾಡಲೀ, ಸಮಸ್ಯೆಯಾಗದು. ರಾತ್ರಿ ಪಂದ್ಯಗಳಲ್ಲಿ ಈ ಸಮಸ್ಯೆಯಾಗುತ್ತದೆ.
ಇದನ್ನೂ ಓದಿ:ದಿಟ್ಟತನದ ಕೊರತೆ ಕಾಡಿತು: ವಿರಾಟ್ ಕೊಹ್ಲಿ
ದುಬಾೖಯಲ್ಲಿ ಗರಿಷ್ಠ ಪ್ರೇಕ್ಷಕರಿಗೆ ಪ್ರವೇಶ ನೀಡಬಹುದಾದರೂ ಈ ಅಂಕಣ ಶಾರ್ಜಾದಂತೆ ಬ್ಯಾಟಿಂಗ್‌ಗೆ ಸಹಕಾರ ನೀಡುವುದಿಲ್ಲ. ಭಾರತಕ್ಕೆ ಬ್ಯಾಟಿಂಗೇ ಆಧಾರವಾಗಿರುವುದರಿಂದ ಇದು ಬಹಳ ಹೊಡೆತ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ.