Advertisement
ನಗರ ಪ್ರದೇಶದ ಹಕ್ಕಿಗಳು ಸಾಮಾನ್ಯವಾಗಿ ನಗರ ಪ್ರದೇಶದಿಂದ ವಲಸೆ ಹೋಗುವುದಿಲ್ಲ. ನಗರದಲ್ಲೇ ಸಿಗುವ ಆಹಾರವನ್ನು ತಿಂದು ಬದುಕುತ್ತವೆ. ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದು, ಆಹಾರ, ನೀರಿನ ಕೊರತೆಯಿಂದ ಹಕ್ಕಿಗಳು ಸಾಯುತ್ತಿರುವ ಸಾಧ್ಯತೆ ಇದೆ. ನಿಶ್ಶಕ್ತಿ ಇದ್ದಾಗ ಹಾರುವ ವೇಳೆ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತ ಬಂದಿರಬಹುದು ಎಂದು ಬಂಟ್ವಾಳದ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಹೆನ್ಸಿ ಡೊನಾಲ್ಡ್ ಲಸ್ರಾದೊ ಅಭಿಪ್ರಾಯಪಟ್ಟಿದ್ದಾರೆ.
Related Articles
Advertisement
ಹಕ್ಕಿಗಳಿಗೆ ಮೀನಿಲ್ಲಬಂದರಿನ ದಕ್ಕೆ ಪರಿಸರ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಮೀನಿನ ವ್ಯಾಪಾರ ವಹಿವಾಟು ನಡೆಯುತ್ತಿರುವ ವೇಳೆ ನೂರಾರು ಗಿಡುಗ, ಕಾಗೆಗಳು ಬಂದರು ಪ್ರದೇಶದಲ್ಲೇ ಇರುತ್ತಿದ್ದವು. ಇಲ್ಲಿನ ಮೀನುಗಳೇ ಇವುಗಳಿಗೆ ಆಹಾರ. ಈಗ ಬಂದರಿನಲ್ಲಿ ಮೀನು ಸಿಗುತ್ತಿಲ್ಲ. ಹೀಗಾಗಿ ಪಕ್ಷಿಗಳಿಗೆ ಆಹಾರ ಕೊರತೆ ಉಂಟಾಗಿದೆ ಎಂದು ಪ್ರಾಣಿ ಪ್ರೇಮಿ ತೌಸಿಫ್ ಹೇಳಿದ್ದಾರೆ. ಪ್ರದೇಶಕ್ಕೆ ಅವಲಂಬಿತ
ಲಾಕ್‌ಡೌನ್ ಪರಿಣಾಮ ಪಕ್ಷಿಗಳಿಗೆ ಆಹಾರ ಕಡಿಮೆಯಾಗಿದೆ. ಆಯಾ ಪ್ರದೇಶಗಳನ್ನೇ ಅವಲಂಬಿಸಿರುವ ಪಕ್ಷಿಗಳು ಬೇರೆ ಕಡೆಗಳಿಗೆ ಆಹಾರಕ್ಕೆಂದು ಹೋದಾಗ ಅಲ್ಲಿ ಹೊಂದಿಕೊಳ್ಳುವುದಿಲ್ಲ. ಆ ಸಮಯ ಆಹಾರ ಸಮಸ್ಯೆಯಿಂದ ಸಾವನ್ನಪ್ಪಬಹುದು.
– ಡಾ| ವಸಂತ ಕುಮಾರ್, ಪಶುವೈದ್ಯರು ಆಹಾರ ಕೊರತೆ
ನಗರವನ್ನು ಅವಲಂಬಿಸಿಯೇ ಅನೇಕ ಹಕ್ಕಿಗಳು ಇರುತ್ತವೆ. ನಗರದ ಬಂದರು, ಬೊಕ್ಕಪಟ್ಣ ಪ್ರದೇಶಗಳಲ್ಲಿ ಅಂಗಡಿ ಮಾಲಕರು ಪಕ್ಷಿಗಳಿಗೆಂದೇ ಆಹಾರ ಹಾಕುತ್ತಾರೆ. ಅದನ್ನು ತಿನ್ನಲೆಂದೇ ಹತ್ತಾರು ಪಕ್ಷಿಗಳು ಬರುತ್ತವೆ. ಲಾಕ್‌ಡೌನ್‌ನಿಂದಾಗಿ ಅಂಗಡಿ – ಮುಂಗಟ್ಟು ಬಂದ್ ಆಗಿವೆ. ಪಕ್ಷಿಗಳಿಗೆ ಆಹಾರ ಕೊರತೆ ಇದೆ. ಪಾರಿವಾಳ, ಕಾಗೆ ಹೆಚ್ಚಾಗಿ ಸಾಯತ್ತಿವೆ.
– ದಿನೇಶ್ ಹೊಳ್ಳ, ಪರಿಸರವಾದಿ ಆಹಾರದ ಕೊರತೆ ಸಂಭವವಿಲ್ಲ
ಹಕ್ಕಿಗಳು ಆಹಾರವಿಲ್ಲದೆ ಸಾವನ್ನಪ್ಪುವ ಸಾಧ್ಯತೆಗಳು ಕಡಿಮೆ. ಅಂತಹ ಯಾವ ಪ್ರಕರಣಗಳು ಇಲ್ಲಿ ತನಕ ನಮ್ಮ ಗಮನಕ್ಕೆ ಬಂದಿಲ್ಲ. ಹಕ್ಕಿಗಳಿಗೆ ನೀರು, ಆಹಾರ ಕೊರತೆ ಎದುರಾಗುವ ಸಂಭವವಿಲ್ಲ
-ತೇಜಸ್ವಿ ಎಸ್. ಮಣಿಪಾಲ ಬರ್ಡ್ಸ್ ಕ್ಲಬ್, ಸದಸ್ಯ