Advertisement

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

01:08 AM Oct 11, 2024 | Team Udayavani |

ವಂಟಾ (ಫಿನ್ಲಂಡ್‌): ಭಾರತದ ಸ್ಟಾರ್‌ ಶಟ್ಲರ್‌ ಲಕ್ಷ್ಯ ಸೇನ್‌ ಅವರು ಆರ್ಕ್‌ಟಿಕ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಪ್ರಿ -ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೈನೀಸ್‌ ತೈಪೆಯ ಚೌ ತಿಯೆನ್‌ ಚೆನ್‌ ಅವರೆದರು ಕಠಿನ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ. 23ರ ಹರೆಯದ ಸೇನ್‌ ಮೊದಲ ಗೇಮ್‌ ಗೆದ್ದರೂ ಆಬಳಿಕ ಹಿಡಿತ ಕಳೆದುಕೊಂಡರು. ಅಂತಿಮವಾಗಿ 21-19, 18-21, 15-21 ಗೇಮ್‌ಗಳಿಂದ ಪಂದ್ಯ ಕಳೆದುಕೊಂಡರು.

Advertisement

ಗುರುವಾರ ಭಾರತೀಯ ಆಟಗಾರರ ಪಾಲಿಗೆ ಕೆಟ್ಟ ದಿನವಾಗಿದ್ದು ಕಣದಲ್ಲಿದ್ದ ಎಲ್ಲರೂ ದ್ವಿತೀಯ ಸುತ್ತಿನ ಹೋರಾಟದಲ್ಲಿ ಸೋತು ನಿರ್ಗಮಿಸಿದ್ದಾರೆ. ಮೊದಲ ಸುತ್ತಿನಲ್ಲಿ ವಿಶ್ವದ 25ನೇ ರ್‍ಯಾಂಕಿನ ವಾಂಗ್‌ ಟಿಝು ವೆಯಿ ಅವರನ್ನು ಸೋಲಿಸಿದ್ದ ಕಿರಣ್‌ ಜಾರ್ಜ್‌ ದ್ವಿತೀಯ ಸುತ್ತಿನಲ್ಲಿ ಇಂಡೋನೇಶ್ಯದ ಜೊನಾಥನ್‌ ಕ್ರಿಸ್ಟಿ ಅವರೆದುರು 17-21, 8-21 ಗೇಮ್‌ಗಳಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next