Advertisement

ಕೋವಿಡ್ ನಿಯಮಗಳ ಉಲ್ಲಂಘನೆ: ಎರಡನೇ ಟೆಸ್ಟ್ ನಿಂದ ಜೋಫ್ರಾ ಆರ್ಚರ್ ಔಟ್

03:14 PM Jul 16, 2020 | keerthan |

ಲಂಡನ್: ಕೋವಿಡ್-19 ಸೋಂಕು ಭೀತಿಯ ನಡುವೆ ನಡೆಯುತ್ತಿರುವ ಇಂಗ್ಲೆಂಡ್- ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಗೆ ಈಗ ವಿಘ್ನ ಉಂಟಾಗಿದೆ. ಮ್ಯಾಂಚೆಸ್ಟರ್ ನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಜೋಫ್ರಾ ಆರ್ಚರ್ ರನ್ನು ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ.

Advertisement

ನಿಯಮ ಉಲ್ಲಂಘಿಸಿದ ಕಾರಣದಕ್ಕೆ ಆರ್ಚರ್ ರನ್ನು ಐದು ದಿನಗಳ ಕಾಲ ಐಸೋಲೇಶನ್ ಗೆ ಒಳಪಡಿಸಲಾಗಿದೆ. ಈ ಸಮಯದಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಲಿದೆ. ಪರೀಕ್ಷೆಯಲ್ಲಿ ನೆಗಟಿವ್ ಬಂದರೆ ಮಾತ್ರ ಇವರ ಐಸೋಲೇಶನ್ ಮುಗಿಯಲಿದೆ.

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ದ್ವಿತೀಯ ಪಂದ್ಯದ 13ರ ಬಳಗದಲ್ಲಿ ಆರ್ಚರ್ ಸ್ಥಾನ ಪಡೆದಿದ್ದರು.

ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ: ಘಟನೆಯ ನಂತರ ಆರ್ಚರ್ ಕ್ಷಮೆ ಕೇಳಿದ್ದು, ನನ್ನ ವರ್ತನೆಯಿಂದ ಸಂಪೂರ್ಣ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೇನೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next