Advertisement

ಮರಸೂರಿನಲ್ಲಿ ಪಂಚಾಯ್ತಿ ಊಟದ ಮನೆ ಆರಂಭ

01:04 PM Feb 01, 2018 | |

ಆನೇಕಲ್‌: ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕಿನ ಮರಸೂರಿನಲ್ಲಿ ಪಂಚಾಯತಿ ವತಿಯಿಂದ ಪಂಚಾಯ್ತಿ ಊಟದ ಮನೆಯನ್ನು ಇಂದಿರಾ ಕ್ಯಾಂಟಿನ್‌ ಮಾದರಿಯಲ್ಲಿ ಮಾಡಿರು ವುದು ಶ್ಲಾಘನಿಯ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

Advertisement

ಮರಸೂರಿನಲ್ಲಿ ಪಂಚಾಯ್ತಿ ವತಿಯಿಂದ ನಿರ್ಮಾಣ ಮಾಡಲಾಗಿರುವ ಪಂಚಾಯ್ತಿ ಊಟದ ಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲೇ ಇಂಥ ವಿಭಿನ್ನ ಕಾರ್ಯಕ್ರಮಕ್ಕೆ ಕೈಹಾಕಿರುವ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತ ಮರವರ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಸಿದರು. 

34 ಲಕ್ಷ ರೂ. ಮರಸೂರು ಭಾಗದಲ್ಲಿ ಸಾಲ 
ಮನ್ನಾ: ಸ್ತ್ರೀ ಶಕ್ತಿ ಸಂಘಗಳಿಗೆ ಸುತ್ತು ನಿಧಿ ನೀಡಿ, ಮಹಿಳೆಯರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವಂತೆ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, 8,165 ಕೋಟಿ ರೂ.ಗಳ ಸಹಕಾರ ಸಂಘದ ಸಾಲವನ್ನು ಮನ್ನಾ ಮಾಡಿದ್ದಾರೆ. ಬರಗಾಲದ ನಡುವೆಯೂ ಸಾಲ ಮನ್ನಾ ಮಾಡುವ ಮೂಲಕ ತಾಲೂಕಿನ ಮರಸೂರಿನಲ್ಲಿ 34 ಲಕ್ಷ ರೂ.ಗಳು ಮರಸೂರು ಭಾಗದಲ್ಲಿ ಸಾಲ ಮನ್ನಾ ಆಗಿದೆ ಎಂದು ತಿಳಿಸಿದರು.

ಮೂಲ ಸೌಕರ್ಯ ಕಲ್ಪನೆಗೆ ಆದ್ಯತೆ: ಜಿಪಂ ಸದಸ್ಯ ಬಂಡಾಪುರ ರಾಮಚಂದ್ರ ಮಾತನಾಡಿ, ಬಡ ಜನರು ಪ್ರತಿ ದಿನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಅವರಿಗೆ ಪಂಚಾಯತಿಯಲ್ಲಿ ಊಟದ ಮನೆ ಮಾಡಿರುವುದು ಶ್ಲಾಘನೀಯ. ಮರಸೂರು ಭಾಗದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಮೂರು ಘಟಕ ನಿರ್ಮಿಸಲಾಗಿದೆ. ಮರಣ ಹೊಂದಿದರ ಕುಟುಂಬದವರಿಗೆ 10 ಸಾವಿರ ರೂ. ಗಳನ್ನು ನೀಡುವುದು, ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರ ಪಂಚಾಯತಿಯಿಂದ ಮಾಡಲಾಗುತ್ತಿದೆ. ರಸ್ತೆ, ಕುಡಿಯುವ ನೀರು ಮಾತ್ರವಲ್ಲದೇ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷ ಪುರುಷೋತ್ತಮ ರೆಡ್ಡಿ ಮಾತನಾಡಿ, ಊಟದ ಮನೆಯಲ್ಲಿ ಪ್ರತಿ ಊಟಕ್ಕೆ 10 ರೂ.ನಂತೆ ನೀಡಲಾಗುತ್ತದೆ. ಬೆಳಗ್ಗೆ ಮತ್ತು ಮಧ್ಯಾಹ್ನ ನೂರು ಜನಕ್ಕೆ ಊಟ ನೀಡಲಾಗುತ್ತದೆ. ರಾಜ್ಯದಲ್ಲೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕ್ಯಾಂಟಿನ್‌ ಮಾಡಲಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಬಡವರು, ಕಷ್ಟ ಪಡುವ ಕೂಲಿ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಎನ್ನುವುದು ಎಂದರು.

Advertisement

ಕಾರ್ಯಕ್ರಮದಲ್ಲಿ ಪಿಡಿಒ ಶಶಿಕುಮಾರ್‌, ತಾಪಂ ಕಾರ್ಯನಿರ್ವಾಹಣಾಧಿಕಾರಿ ಟಿ.ಕೆ. ರಮೇಶ್‌, ರಾಷ್ಟ್ರ ಪ್ರಶಸ್ತಿ ವಿಜೇತ ಚಿನ್ನಪ್ಪ ವೈ. ಚಿಕ್ಕಹಾಗಡೆ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಶೇಖರರೆಡ್ಡಿ, ಉಪಾಧ್ಯಕ್ಷೆ ಪ್ರೇಮಾ ಕಾವೇರಪ್ಪ, ಸದಸ್ಯರಾದ ಪ್ರಭಾಕರ್‌, ರಾಧಾಮ್ಮ, ಮನು, ಕೃಷ್ಣ, ಆನಂದ್‌, ದೊಡ್ಡಹಾಗಡೆ ಹರೀಶ್‌ ಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next