Advertisement

ಅಮಿತ್ ಶಾ ಬೆಲ್ಲದ್ ಭೇಟಿ ಮರ್ಮವೇನು?

04:32 PM Apr 02, 2022 | Team Udayavani |

ಬೆಂಗಳೂರು : ಮಾಜಿ ಸಿಎಂ ಸಿಎಂ ಬಿ.ಎಸ್.ಯಡಿಯೂರಪ್ಪ ಆಡಳಿತದ ವಿರುದ್ಧ ಬಂಡಾಯ ನಾಯಕರ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ಅರವಿಂದ ಬೆಲ್ಲದ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಧಿಡೀರ್ ಭೇಟಿ‌ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಬೆಲ್ಲದ್ ಬದಲು ಕೊನೆ ಹಂತದಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ಹೈಕಮಾಂಡ್ ಅಂತಿಮಗೊಳಿಸಿತ್ತು.‌ ಇದಾದ ಬಳಿಕ ಪಕ್ಷದ ವಲಯದಲ್ಲಿ ಬಹುತೇಕ ನೇಪಥ್ಯದಲ್ಲಿ ಉಳಿದಿದ್ದ ಬೆಲ್ಲದ್ ಈಗ ಮತ್ತೆ ಚರ್ಚೆಯ ವಲಯಕ್ಕೆ ಬಂದಿದ್ದಾರೆ.

ದಿಲ್ಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಬೆಲ್ಲದ್ ,  ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲೂ ಶಾ ಜತೆ ಕಾಣಿಸಿಕೊಂಡಿದ್ದಾರೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಬೆಲ್ಲದ್ ಗೆ ಆಯಕಟ್ಟಿನ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬೆಲ್ಲದ್, ಆರು ತಿಂಗಳು ಹಿಂದೆಯೇ ನಾನು ಭೇಟಿಗೆ ಕಾಲಾವಕಾಶ ಕೋರಿದ್ದೆ. ಆದರೆ ಈಗ ಭೇಟಿಗೆ ಅವಕಾಶ ನೀಡಿದ್ದರು. ಉತ್ತರ ಕರ್ನಾಟಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next