Advertisement

ಮಟಾಶ್‌ ಹಿಂದೆ ಬಂದ ಅರವಿಂದ್‌

11:55 AM Aug 16, 2018 | |

“ಜುಗಾರಿ’ ಮತ್ತು “ಲಾಸ್ಟ್‌ ಬಸ್‌’ ಬಳಿಕ ನಿರ್ದೇಶಕ ಅರವಿಂದ್‌ ಅವರು ಸದ್ದಿಲ್ಲದೆಯೇ “ಮಟಾಶ್‌’ ಎಂಬ ಚಿತ್ರ ಮಾಡಿ ಮುಗಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಚಿತ್ರ ಬಿಡುಗಡೆ ತಯಾರಿಯಲ್ಲಿರುವ ಅರವಿಂದ್‌, ಈಗ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 51 ಸೆಕೆಂಡ್‌ ಇರುವ ಆ ಮೋಷನ್‌ ಪೋಸ್ಟರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

Advertisement

ಅಂದಹಾಗೆ, “ಮಟಾಶ್‌’ ಒಂದು ಕಾಮಿಕಲ್‌ ಥ್ರಿಲ್ಲರ್‌. ಅಪನಗಧೀಕರಣ ನಂತರ ಆದಂತಹ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಸಿನಿಮಾವಿದು. ಆ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅನುಕೂಲಕ್ಕೆ ಏನೆಲ್ಲಾ ಮಾಡಿದರು. ಯಾವುದನ್ನೆಲ್ಲಾ ಬಳಸಿಕೊಂಡರು ಎಂಬುದನ್ನು ಒಂದು ಯೂಥ್‌ಫ‌ುಲ್‌ ಸ್ಟೋರಿ ಮೂಲಕ ಹೇಳಹೊರಟಿದ್ದಾರೆ ಅರವಿಂದ್‌.ಅಪನನಗಧೀಕರಣ ವೇಳೆ ಜನರು ಹೇಗೆಲ್ಲಾ ಪ್ರತಿಕ್ರಿಯಿಸಿದರು ಎಂಬುದು ಈ ಚಿತ್ರದ ಸಾರಾಂಶ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾತ್ರಿ 8 ಗಂಟೆಗೆ 500, 1000 ರುಪಾಯಿ ನೋಟುಗಳನ್ನು ಬ್ಯಾನ್‌ ಮಾಡಿದರು. ಆಗ ನೋಟುಗಳೆಲ್ಲವೂ “ಮಟಾಶ್‌’ ಆಗಿಬಿಟ್ಟವು. ಅಲ್ಲಿಂದ ಏನೆಲ್ಲಾ ಆಗಿಹೋಯ್ತು ಎಂಬ ಕಥೆ ಬೆಂಗಳೂರು, ಮೈಸೂರು, ಬಿಜಾಪುರ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾಗುತ್ತದೆ. ಮೂರು ತಂಡ ಹಣದ ಹಿಂದೆ ಬೀಳುವ ಕಾನ್ಸೆಪ್ಟ್ ಇಲ್ಲಿದೆ.

ಅಂದಹಾಗೆ, “ಗೋಲ್ಡ್ಸ್ ಅಂಡ್‌ ಡ್ರೀಮ್ಸ್‌’ ಪ್ರೊಡಕ್ಷನ್‌ ಹೌಸ್‌ ಮೂಲಕ ಶುರುವಾಗಿರುವ ಹೊಸ ಯು ಟ್ಯೂಬ್‌ ಚಾನೆಲ್‌ ಮೂಲಕವೇ “ಮೋಷನ್‌ ಪೋಸ್ಟರ್‌’ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ ನೋಡಿದರೆ, ಥ್ರಿಲ್ಲಿಂಗ್‌ ಎಲಿಮೆಂಟ್ಸ್‌ ಕಾಣಸಿಗುತ್ತೆ. ಚಿತ್ರದಲ್ಲಿ ಸಮರ್ಥ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಜ್‌, ರಾಘು ರಾಮನಕೊಪ್ಪ, ವಿ.ಮನೋಹರ್‌, ನಂದಗೋಪಾಲ್‌, ಸದಾನಂದ ಕಲಿ, ರವಿಕಿರಣ್‌ ರಾಜೇಂದ್ರನ್‌, ಸಿದ್ಧಾಂತ್‌ ಸುಂದರ್‌, ರಂಗಸ್ವಾಮಿ, ಅಮೋಘ್, ಗಣೇಶ್‌ ರಾಜ್‌, ಬಾಲಾಜಿ ಶೆಟ್ಟಿ, ಗೌತಮ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಚಿತ್ರಕ್ಕೆ ಅರವಿಂದ್‌ ನಿರ್ದೇಶನದ ಜೊತೆಗೆ ಆರು ಹಾಡುಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಸತೀಶ್‌ ಪಾಟಕ್‌ ಹಾಗು ಗಿರೀಶ್‌ ಪಾಟೀಲ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವಿನಾಶ್‌ ಇಲ್ಲಿ ಕಲಾನಿರ್ದೇಶನ ಮಾಡುವುದರ ಜತೆಗೆ ಪ್ರೊಡಕ್ಷನ್‌ ಡಿಸೈನ್‌ ಮಾಡಿದ್ದಾರೆ. ರಾನೀ ಚೇರನ್‌ ಅಬ್ರಹಾಂ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next