ಕೊರಟಗೆರೆ: ಕಾಡಿನಲ್ಲಿ ಬೇಟೆ ಮಾಡುತ್ತಿದ್ದ ಕಣ್ಣಪ್ಪನಿಗೆ ಮೊದಲಿಗೆ ಕನಸಿನಲ್ಲಿ ಶಿವ ಬಂದು ಇಲ್ಲಿ ಒಂದು ಲಿಂಗ ಇದೆ ನನಗೆ ಪ್ರತಿನಿತ್ಯ ಪೂಜೆ ಮಾಡಬೇಕು ಎಂದು ಹೇಳುತ್ತಾರೆ ಅದಕ್ಕಾಗಿ ಬೇಡರಕಣ್ಣಪ್ಪ ಕೂಡ ಆಯ್ತು ಎಂದು ಶಿವಲಿಂಗವನ್ನು ಹುಡುಕುತ್ತಾರೆ ನಂತರ ಶಿವಲಿಂಗ ಕಾಣುತ್ತದೆ ಹಾಗೂ ಪ್ರತಿನಿತ್ಯ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ ಆದರೆ ಬೇಡರಕಣ್ಣಪ್ಪ ನಿಗೆ ಯಾವ ರೀತಿ ಶಿವನಿಗೆ ಪೂಜೆ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ ಅದಕ್ಕಾಗಿ ತಾನು ತಿನ್ನುವ ಆಹಾರವನ್ನೇ ಪ್ರತಿದಿನ ನೈವಿದ್ಯ ಮಾಡಿಡುತ್ತಿದ್ದ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ ಎಂದು ಕಣ್ಣಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾದಣ್ಣ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ನಡೆದ 45 ನೇ ವರ್ಷದ ಆರತಿ ಮಹೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದರು.ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕಣಪ್ಪ ದೇವರಿಗೆ ಸಂಪ್ರದಾಯದಂತೆ ಆರತಿ ಹಾಗೂ ವಿಶೇಷ ಪೂಜೆ ಪ್ರತಿವರ್ಷದಂತೆ ಈ ಬಾರಿಯೂ ನಡೆಯುತ್ತಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಅದ್ದೂರಿ ಇಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆರತಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಮುದಾಯದ ಎಲ್ಲಾ ಜನರ ಅಭಿಲಾಷೆಯನ್ನು ಈಡೇರಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಓಬಳೇಶ್ ಮಾತನಾಡಿ ಭಕ್ತಿಯಲ್ಲಿ ಬೇಡರಕಣ್ಣಪ್ಪನನ್ನು ಮೀರಿಸುವಂತ ಬೇರೆಯಾವ ಭಕ್ತನು ಪರಮಶಿವನಿಗೆ ಸಿಗಲಾರ ತಾನು ಸೇವಿಸುವ ಆಹಾರವನ್ನು ಪರಮಶಿವನಿಗೆ ನೈವೇದ್ಯವಾಗಿ ಅರ್ಪಿಸುತಿದ್ದರು ಎಂದು ತಿಳಿಸಿದರು. ಪ್ರತಿದಿನ ಬೇಟೆಯಾಡಿದ ಪ್ರಾಣಿ ಹಾಗೂ ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸು ಮೊದಲು ತಾನು ತಿಂದು ನಂತರ ಶಿವಲಿಂಗ ಮುಂದೆ ನೈವೇದ್ಯ ಮಾಡಿ ಪೂಜಿಸುತ್ತಿದ್ದ ಮಹಾಭಕ್ತ ಬೇಡರ ಕಣ್ಣಪ್ಪ ಅಲ್ಲದೆ ಶಿವನಿಗೆ ಕಣ್ಣು ನೀಡಿದಂತಹ ಪರಮಭಕ್ತ ಕಣ್ಣಪ್ಪ ಅಂತಹ ಭಕ್ತನಾದ ಕಣ್ಣಪ್ಪನವರಿಗೆ ನಾವು ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾಮಂಗಳಾರತಿ ಗ್ರಾಮಗಳ ಪ್ರತಿ ಪ್ರಮುಖ ಬೀದಿಗಳಲ್ಲಿ ಗ್ರಾಮದೇವರ ಮೆರವಣಿಗೆ ಸೇರಿದಂತೆ ವಿಶೇಷ ಪೂಜೆಯನ್ನು ಮಹಾಶಿವರಾತ್ರಿಯ ಹಬ್ಬದ ದಿನದಿಂದ 3-4 ದಿನಗಳು ಈ ಹಬ್ಬದ ವಾತಾವರಣ ಗ್ರಾಮಸ್ಥರಲ್ಲಿ ಮೂಡುತ್ತದೆ.ನಂತರ ದೇವರ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪೂಜೆ, ಪುರಸ್ಕಾರಗಳು ಮುಗಿದ ನಂತರ ಹಬ್ಬದ ರೂಪದಲ್ಲಿ ಗ್ರಾಮದ ಎಲ್ಲಾ ಜನರು ಸೇರುತ್ತಾರೆ ಎಂದರು.
ಇದನ್ನೂ ಓದಿ : 750 ಅಭ್ಯರ್ಥಿಗಳಿಗೆ ಶಿಷ್ಯವೇತನದ ಜತೆಗೆ ಕೆಪಿಎಸ್‌ಸಿ- ಯುಪಿಎಸ್‌ಸಿ ತರಬೇತಿ
ಮುಖಂಡ ನರಸಪ್ಪ ಮಾತನಾಡಿ ನಮ್ಮ ಸೇವಾ ಟ್ರಸ್ಟ್ ನಿಂದ ಹಾಗೂ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಶ್ರೀ ಬೇಡರಕಣ್ಣಪ್ಪ ಸಮುದಾಯ ಭವನ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದರೂ, ಇದಕ್ಕೆ ಇನ್ನೂ ಹಣದ ಅಭಾವ ಇರುವುದರಿಂದ ಕೆಲಸ ಮುಗಿಸಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಹಣ ಬಿಡುಗಡೆ ಮಾಡಿದರೆ ಈ ಕೆಲಸ ಪೂರ್ಣಗೊಳ್ಳುತ್ತದೆ ಅಲ್ಲದೆ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಇದೆಲ್ಲವನ್ನು ನಾವೆಲ್ಲರೂ ಸೇರಿ ಮಾಡಿಕೊಂಡು ಬರುತ್ತಿದ್ದೇವೆ ಎಂದರು
ಕಾರ್ಯಕ್ರಮದಲ್ಲಿ ನರಸಪ್ಪ ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಗಂಗಾಧರಪ್ಪ, ಮೂರ್ತಿ ದೊಡ್ಡಮನೆ ,ರಂಗಶ್ಯಾಮಯ್ಯ ,ಚಂದ್ರಣ್ಣ ,ಅಶ್ವಥಣ್ಣ ,ರಂಗನಾಥ್ ,ಜಯರಾಜ್ ,ಸಿದ್ದರಾಜು ,ಕಿಶೋರ್ ,ನಿರಂಜನ್, ರಮೇಶ್ ,ನಾಗರಾಜ್, ರಾಜಣ್ಣ, ನಾಗರಾಜು ಹಳ್ಳಾಪುರ, ರಂಗನಾಥ್ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಯುವಕರು ಇದ್ದರು.