Advertisement
ಅರಸು ಜಾಗೃತಿ ಅಕಾಡೆಮಿ ಗುರುವಾರ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರ 37ನೇ ಪುಣ್ಯಸ್ಮರಣೆ ಮತ್ತು ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅರಸು ಪ್ರೇರಣೆ, ವಾಜಪೇಯಿ ಆದರ್ಶ: ತನ್ನ ರಾಜಕೀಯ ಜೀವನದಲ್ಲಿ ಡಿ. ದೇವರಾಜ ಅರಸು ಪ್ರೇರಣೆಯಾಗಿದ್ದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮುತ್ಸದ್ಧಿಯಾಗಿ ಆದರ್ಶವಾಗಿದ್ದಾರೆ. ಲಾಲ್ ಬಹದ್ಧೂರ್ ಶಾಸ್ತ್ರಿ ಕೂಡ ಸ್ಮರಣೀಯರು. ಮೈಸೂರಿನಲ್ಲಿ ಡಿ.ದೇವರಾಜ ಅರಸರ ಪ್ರತಿಮೆ ಸ್ಥಾಪಿಸಲು ಮೈತ್ರಿ ಸರ್ಕಾರದೊಂದಿಗೆ ಮಾತನಾಡು ತ್ತೇನೆ. ಇದುವರೆಗೆ ಮುಖ್ಯಮಂತ್ರಿಗಳನ್ನು ಭೇಟಿ ಯಾಗುವ ಸಂದರ್ಭ ಬಂದಿಲ್ಲ. ಆದರೆ, ಅರಸರ ಪ್ರತಿಮೆ ಸ್ಥಾಪನೆಗೆ ತಾನೇ ಭೇಟಿಯಾಗುತ್ತೇನೆಂದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಹಿಂದುಳಿದ ವರ್ಗಗಳ ಮೀಸ ಲಾತಿಯು ಇಂದಿಗೂ ಬದಲಾಗಿಲ್ಲ. ಈಗಿನ ಮೀಸ ಲಾತಿ ಅವೈಜ್ಞಾನಿಕವಾಗಿದ್ದು ಈ ಸಂಬಂಧ ರಾಜ್ಯಾದ್ಯಂತ ಹೋರಾಟದ ಅಗತ್ಯವಿದೆ. ದುರಾದೃಷ್ಟವಶಾತ್ ಅರಸು ಜಾರಿಗೆ ತಂದಿದ್ದ ಒಬಿಸಿ ಮೀಸಲಾತಿ ಇಂದಿಗೂ ಜಾರಿಯಾಗದೆ, 1994ರಲ್ಲಿ ಆಗಿನ ಸಿಎಂ ಎಂ.ವೀರಪ್ಪ ಮೊಯ್ಲಿ ಜಾರಿಗೆ ತಂದಿರುವ ಒಂದು ವರ್ಷದ ಮೀಸಲಾತಿ ಇಂದಿಗೂ ಜಾರಿಯಲ್ಲಿದೆ. ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಒಬಿಸಿ ವರ್ಗದವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದರು.
ಡಾ. ಎಂ.ಜಿ.ಆರ್. ಅರಸ್ ಮಾತನಾಡಿ, ಮೈಸೂರಿ ನಿಂದ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಡಿ. ದೇವರಾಜ ಅರಸರ ಪ್ರತಿಮೆ ನಗರದಲ್ಲಿ ಇಲ್ಲದಿರು ವುದು ನೋವಿನ ಸಂಗತಿ ಎಂದರು.
ಅರಸು ಅಭಿವೃದ್ಧಿ ಮಾದರಿಯಿಂದ ಪ್ರೇರಣೆ: ಬಲಿಷ್ಠ ಜಾತಿಗಳ ಹಿಡಿತಕ್ಕೆ ಒಳಗಾಗಿದ್ದ ಕೆಪಿಎಸ್ಸಿಯಲ್ಲಿ ಹಲವು ರೀತಿಯ ಬದಲಾವಣೆ ತಂದು, ಅಲ್ಲಿ ದಲಿತ ಮತ್ತು ಹಿಂದುಳಿದವರಿಗೂ ಅವಕಾಶ ಕಲ್ಪಿಸುವಂತೆ ಮಾಡಿದ್ದು ಅರಸು ಅವರು. 70ರ ದಶಕದಲ್ಲಿ ಇಂದಿರಾಗಾಂಧಿ ಅವರ 20 ಅಂಶಗಳನ್ನು ದೇಶದಲ್ಲೇ ಉತ್ತಮವಾಗಿ ಜಾರಿಗೆ ತಂದ ರಾಜ್ಯ ಕರ್ನಾಟಕ. ಆಗ ಅರಸು ಅವರೇ ಮುಖ್ಯಮಂತ್ರಿಯಾಗಿದ್ದರು. ಈ ವೇಳೆಗೆ ಅರಸು ಅವ ರನ್ನು ಮಹಾಭ್ರಷ್ಟ, ಗೂಂಡಾಗಳನ್ನು ಬೆಳೆಸುತ್ತಿರುವ ಮುಖ್ಯಮಂತ್ರಿ ಎಂದು ಅನೇಕರು ಟೀಕಿಸಿದರು. ಬಲಿಷ್ಠ ಜಾತಿಗಳ ರಾಜಕೀಯ ಕುತಂತ್ರಕ್ಕೆ ಒಳಗಾಗಿ, ಪಕ್ಷಾಂತರ ಮಾಡುವ ಶಾಸಕರನ್ನು ಹಿಡಿದಿಟ್ಟುಕೊಳ್ಳ ಬೇಕಿತ್ತು. ಅವರ ಸ್ವಾರ್ಥಕ್ಕೆ ಎಂದೂ ಭ್ರಷ್ಟ ರಾಜಕೀಯ ಮಾಡಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಂ.ಜಿ.ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ರಂಗಭೂಮಿ ಕಲಾವಿದ ನಾ. ನಾಗಚಂದ್ರ, ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರ ಶೇಖರ್, ಕನ್ನಡ ಪರಿಚಾರಕ ಕೊ.ಸು.ನರಸಿಂಹ ಮೂರ್ತಿ, ಅರಸು ಮಂಡಳಿ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಜಿ.ಅರಸ್, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ಅವರಿಗೆ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಮಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್, ಎಂಸಿಸಿಐ ಅಧ್ಯಕ್ಷ ಎ.ಎಸ್. ಸತೀಶ್, ಅನ್ವೇಷಣಾ ಸೇವಾ ಟ್ರಸ್ಟಿನ ಗೌರವ ಕಾರ್ಯದರ್ಶಿ ಅರಮನಾಥರಾಜೇ ಅರಸ್ ಇದ್ದರು.