ಕೋಲಾರ: ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು 104ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿ ಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.
ಭಾವಚಿತ್ರದ ಮೆರವಣಿಗೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಆ.20ರಂದು ಜಯಂತಿ ಆಚರಣೆ ಮಾಡಲಿದ್ದು, ಬೆಳಗ್ಗೆ 9.30ಕ್ಕೆ ದೇವರಾಜ ಅರಸು ಭವನದ ಸಮೀಪದಿಂದ ಅರಸು ಭಾವಚಿತ್ರದ ಮೆರವಣಿಗೆ ನಡೆಯಲಿದೆ, ಆನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ವಿಜೇತರಿಗೆ ಬಹುಮಾನ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು, ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸುಸಜ್ಜಿತ ರಸ್ತೆ ಇಲ್ಲ: ಮುಖಂಡ ಮಂಜುನಾಥ್ ಸಭೆಯಲ್ಲಿ ಮಾತನಾಡಿ, ದೇವರಾಜು ಅರಸು ಭವನಕ್ಕೆ ಹೋಗಲು ಸುಸಜ್ಜಿತ ರಸ್ತೆಯಿಲ್ಲ. ರಸ್ತೆಗೆ ಬಿಟ್ಟುಕೊಂಡಿದ್ದ ಜಾಗವನ್ನು ಕೆಲ ಪ್ರತಿಷ್ಠಿತ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾರೆ. ಜಾಗ ಒತ್ತುವರಿ ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹಿಂದೆ ಅಧಿಕಾರದಲ್ಲಿದ್ದ ಚುನಾಯಿತ ಆಡಳಿತ ಮಂಡಳಿಯೇ ಒತ್ತುವರಿಗೆ ಕಾರಣ ಎಂದು ದೂರಿದರು.
Advertisement
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇವರಾಜ ಅರಸು ಜಯಂತಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣ್ಯ ವ್ಯಕ್ತಿಗಳ ಜನ್ಮದಿನಾಚರಣೆಯ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದ ಅವರು, ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.
Related Articles
Advertisement
ಪರಿಶೀಲನೆ ಸೂಚನೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮತನಾಡಿ, ಕೆರೆ ಮುಳುಗಡೆ ಜಾಗ ಮತ್ತೂಬ್ಬರಿಗೆ ಯಾವ ಮೂಲದಿಂದ ಮಂಜೂರಾಗಿದೆ ಅಥವಾ ಒತ್ತುವರಿಯಾಗಿರುವುದೋ ಪರಿಶೀಲಿಸಿ ಮಾಹಿತಿ ನೀಡಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಪ್ರಸ್ತುತ ಶಿಷ್ಟಾಚಾರ ಪಾಲನೆಗೆ ಸಂಪುಟ ರಚನೆ ಆಗಿಲ್ಲ. ಆ.20ರಂದು ಕಾರ್ಯಕ್ರಮ ಇರು ವುದರಿಂದ ನೋಡಿಕೊಂಡು ಆಹ್ವಾನ ಪತ್ರಿಕೆಯನ್ನು ಮುದ್ರಿಸುವಂತೆ ಅರಸು ಅಭಿವೃದ್ಧಿ ನಿಗಮದ ವ್ಯವ ಸ್ಥಾಪಕ ಗಣೇಶ್‌ಗೆ ಸೂಚಿಸಿದರು.
ಸಭೆಯಲ್ಲಿ ಬಿಸಿಎಂ ಇಲಾಖೆ ಅಧಿಕಾರಿ ರಾಜಣ್ಣ, ವಿವಿಧ ಸಮುದಾಯದ ಮುಖಂಡರಾದ ರಾಜೇಶ್‌ಸಿಂಗ್, ಪ್ರಸಾದ್‌ಬಾಬು, ಕೃಷ್ಣಮೂರ್ತಿ ಹಾಜರಿದ್ದರು.