Advertisement

ಸಾಮಾಜಿಕ ನ್ಯಾಯ ಪ್ರತಿಪಾದಿಸಿ ಜಾರಿಗೆ ತಂದವರು ಅರಸು : ಸಿಎಂ ಬೊಮ್ಮಾಯಿ

02:08 PM Aug 20, 2022 | Team Udayavani |

ಬೆಂಗಳೂರು: ಕರ್ನಾಟಕದ ಇವತ್ತಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕದ‌ ಯಶಸ್ಸಿಗೆ ಬಹುಪಾಲು ಅರಸು ಅವರ‌ ದೂರದೃಷ್ಟಿಯೇ ಕಾರಣ,ಮುಖ್ಯಮಂತ್ರಿ ಆದಮೇಲೆ‌ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಒಡೆಯ ಚಳವಳಿಗೆ ಕಾನೂನಿನ ಶಕ್ತಿ ತುಂಬಿದರು.ಕರ್ನಾಟಕದಲ್ಲಿ ಆಹಾರೋತ್ಪಾದನೆ‌ ಗಣನೀಯವಾಗಿ ಹೇರಲು ಭೂ ಸುಧಾರಣೆಯೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಬ್ಯಾಂಕ್ವೆಟ್ ಹಾಲ್ ಬಳಿ ಆಯೋಜಿಸಿದ್ದ ಅರಸು ಅವರ ಜೀವನ – ಸಾಧನೆ ಕುರಿತು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ವೀಕ್ಷಿಸಿದರು.

ಮನುಷ್ಯ ಹೇಳುತ್ತಾನೆ ಭೂಮಿ ನನ್ನದು ನನ್ನದು ಅಂತಾನೆ,ಆದರೆ ಸ್ಮಶಾನ ಕಂಡಾಗ ಅಲ್ಲಿ ಮನುಷ್ಯ ನನ್ನವನು ಅಂತಾ ಭೂಮಿ ಹೇಳುತ್ತದೆ. ಪ್ರಗತಿಪರ ದೂರದೃಷ್ಟಿಗೆ ದೇವರಾಜ ಅರಸು ಅವರ‌ ನಿಲುವುಗಳೇ ಕಾರಣ. ಜನತಾ ಮನೆ, ಪಡಿತರ ವ್ಯವಸ್ಥೆ ಆರಂಭವಾಗಿದ್ದು ಅರಸು ಕಾಲದಲ್ಲಿ. ವ್ಯವಸಾಯದಲ್ಲಿ ಸುಧಾರಣೆ ತಂದಿದ್ದು ಅವರು. ಕಾಳಿ ವಿದ್ಯುತ್ ಯೋಜನೆ ತಂದವರು ಅರಸು. ಸಣ್ಣ ಸಣ್ಣ ಸಮಾಜದಲ್ಲಿನವರನ್ನ‌ ಗುರುತಿ ನಾಯಕತ್ವ ಬೆಳೆಸಿದರು. ಅನೇಕರನ್ನ ಗುರುತಿಸಿ ನಾಯಕತ್ವ ಬೆಳೆಸಿ ರಾಜ್ಯ ನಾಯಕರನ್ನಾಗಿ ಮಾಡಿದ್ದರು. ಇವತ್ತು ಸಾಮಾಜಿಕ ನ್ಯಾಯ ಪ್ರತಿಪಾದನೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಸಾಮಾಜಿಕ ನ್ಯಾಯ ಪ್ರತಿಪಾದಿಸಿ ಜಾರಿಗೆ ತಂದವರು ಅರಸು ಎಂದು ಸಿಎಂ ಹೇಳಿದರು.

ಸಮಾಜದ ಕಟ್ಟಕಡೆಯವರಿಗೆ ನ್ಯಾಯ ಸಿಗಬೇಕಿದೆ. 2439 ಹಾಸ್ಟೆಲ್ ಗಳು ರಾಜ್ಯದಲ್ಲಿವೆ, ಇವುಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ದೇವರಾಜ ಅರಸು ಹೆಸರಲ್ಲಿ ಪಿಹೆಚ್‌ಡಿ ಮಾಡುತ್ತಿರುವವರಿಗೆ ಹೆಚ್ಚಿನ ಅನುದಾನ ಕೊಡಲಾಗುವುದು. ಈವರೆಗೆ ನಿಂತುಹೋಗಿದ್ದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮುಂದುವರಿಸುತ್ತೇವೆ ಎಂದರು.

ಹಿಂದುಳಿದ ವರ್ಗದ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡುತ್ತೇನೆ. 5 ಲಕ್ಷ ಜನರಿಗೆ ಪುನರ್‌ಕೆಲಸ ನೀಡಲು ಕ್ರಮ ಕೈಗೊಳ್ಳುತ್ತೇವೆ. ಅರಸು ಅವರು ನಮಗೆ‌ ಬಹು ದೊಡ್ಡ ಪ್ರೇರೇಪಣೆ. ಅವರ ಮಾರ್ಗದರ್ಶನದಲ್ಲಿ ನಮ್ಮ‌ ಸರ್ಕಾರ ಹೆಜ್ಜೆ ಇಡಲಿದೆ. ಇತ್ತೀಚೆಗೆ ಹಿಂದುಳಿದ ಮಠಗಳು ಉತ್ತಮ ಕೆಲಸ‌ ಮಾಡುತ್ತಿವೆ. ಹಿಂದುಳಿದ ಮಠಗಳಿಗೆ 129 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಸಾಧಕರಿಗೆ ಸಾವು ಅಂತ್ಯವಲ್ಲ
ಸಾವಿನ ನಂತರವೂ ಅರಸು ಅವರು ಪ್ರೇರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ. ಅರಸು ಅವರ ದೂರದೃಷ್ಟಿ ವಿಚಾರಗಳಿಗೆ ಸರ್ಕಾರ ಕಂಕಣಬದ್ದವಾಗಿದೆ ಎಂದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉನ್ನತ ಶಿಕ್ಷಣ, ಐಟಿ ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಪ್ರತಾಪ ಸಿಂಹ ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next