ಮುಂಬಯಿ, ಫೆ. 8: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಾಯಿ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 2ರಂದು ಅಪರಾಹ್ನ ವಸಾಯಿ ಪಶ್ಚಿಮದ, 100 ಪೀಟ್ ಅಂಬಾಡಿ ಕ್ರಾಸ್ ರೋಡ್, ಎವೆರ್‌ಶೈನ್ ಕಾಂಪ್ಲೆಕ್ಸ್ ಹಿಂದುಗಡೆ, ಧನ್ ರಾಜ್ ಪ್ಯಾಲೆಸ್‌ನ ತಳಮಹಡಿಯಲ್ಲಿರುವ ಸ್ಥಳೀಯ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಭಾರತ್ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ, ಗೌರವ ಅತಿಥಿಯಾಗಿ ಸೆಂಟ್ರಲ್ ಬಾಂಕಿನ ದೇವಕಿ ಎಸ್. ಕರ್ಕೇರ, ವಸಾಯಿ ಕರ್ನಾಟಕದ ಸಂಘದ ಸಲಹೆಗಾರ ಒ. ಪಿ. ಪೂಜಾರಿ, ಕೇಂದ್ರ ಕಚೇರಿಯ ಜತೆ ಕೋಶಾಧಿಕಾರಿ ಸದಾಶಿವ ಎ. ಕರ್ಕೇರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಲೋಹಿತಾಕ್ಷ ಎಸ್. ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಹಿಳಾ ವಿಭಾಗ ಸದಸ್ಯೆಯರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಸಿಹಿ ತಿಂಡಿ, ಉಡುಗೊರೆಯನ್ನು ವಿನಿಮಯ ಮಾಡಿಕೊಂಡರು. ಗೌರವ ಕಾರ್ಯಾಧ್ಯಕ್ಷ ಡಾ| ಆರ್. ಜಿ. ಕೂಳೂರು, ಗೌರವ ಕೋಶಾಧಿಕಾರಿ ನಾಗೇಶ್ ಎ. ಪೂಜಾರಿ, ಉಪ ಕಾರ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಜತೆ ಕಾರ್ಯ ದರ್ಶಿ ಸುರೇಶ್ ಎಂ. ಪೂಜಾರಿ,
ಗೌರವ ಕೋಶಾಧಿಕಾರಿ ನಾಗೇಶ್ ಎ. ಪೂಜಾರಿ, ಜತೆ ಕೋಶಾಧಿಕಾರಿ ಸುರೇಶ್ ಸಿ. ಪೂಜಾರಿ, ನೈನಾ ಅಂಚನ್, ರಾಘವೇಂದ್ರ ಪಿ. ಸಾಲ್ಯಾನ್, ಕೃಷ್ಣ ಟಿ. ಪೂಜಾರಿ,ಜಗನ್ನಾಥ್ ಅಂಚನ್, ಆನಂದ ಪೂಜಾರಿ, ಅರುಣಾ ಡಿ. ಪೂಜಾರಿ, ನಾರಾಯಣ ಕುಕ್ಯಾನ್, ನಳಿನಿ ಪೂಜಾರಿ, ಆರ್ಚಕರಾದ ಶರತ್ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದವರು ಸಹಕರಿಸಿದರು.
ಚಿತ್ರ-ವರದಿ: ರಮೇಶ ಅಮೀನ್