Advertisement
ಮಾ. 1ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಹೊಟೇಲ್ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ ಮೀರಾರೋಡ್ -ವಿರಾರ್ ಸ್ಥಳೀಯ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು.
Related Articles
Advertisement
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ ಅವರು ಮಾತನಾಡಿ, ಮಹಿಳೆಯರು ಬಹಳ ಮುತುವರ್ಜಿಯಿಂದ ಸ್ಥಳೀಯ ಸಮಿತಿಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರ ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಪುರುಷರು ಮತ್ತು ಮಕ್ಕಳ ಸಹಕಾರ ಅಗತ್ಯವಿದೆ. ಕುಲಾಲ ಸಮಾಜ ಬಾಂಧವರು ಧರ್ಮಿಷ್ಟರು. ಎಲ್ಲಾ ಕ್ಷೇತ್ರಗಳಲ್ಲೂ ಸಂಸ್ಕಾರವಂತರಾಗಿ ಬೆಳೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ದೇವಕಿ ಸುನೀಲ್ ಸಾಲ್ಯಾನ್, ಪುಷ್ಪಾ ಸುಂದರ್ ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಯೋಗೇಶ್ ಬಂಗೇರ, ಉಪ ಕಾರ್ಯಾಧ್ಯಕ್ಷೆ ಚಂದ್ರಾವತಿ ಸಾಲ್ಯಾನ್, ಕಾರ್ಯದರ್ಶಿ ರೇಣುಕಾ ಎಸ್. ಸಾಲ್ಯಾನ್, ಕೋಶಾಧಿಕಾರಿ ಸಾವಿತ್ರಿ ಎಸ್. ಬಂಗೇರ, ಜತೆ ಕಾರ್ಯದರ್ಶಿಗಳಾದ ಪ್ರಮೀಳಾ ಎಂ. ಬಂಜನ್, ಸ್ವಪ್ನಾ ಅಶ್ವಿನಿ
ಮೂಲ್ಯ, ಜತೆ ಕೋಶಾಧಿಕಾರಿ ಜಯಂತಿ ಉಮೇಶ್ ಬಂಗೇರ ಉಪಸ್ಥಿತರಿದ್ದರು. ಗೀತಾ ಯೋಗೇಶ್ ಬಂಗೇರ ಸ್ವಾಗತಿಸಿದರು. ಜಯಂತಿ ಉಮೇಶ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಲತಾ ಯಶೋಧರಾ ಬಂಗೇರ ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದರು. ಅತಿಥಿಗಳನ್ನು ಸುಜಾತಾ ಸಾಲ್ಯಾನ್, ರಸಿಕಾ ಮೂಲ್ಯ, ಲತಾ ಬಂಗೇರ, ಸುರೇಖಾ ಬಂಗೇರ ಪರಿಚಯಿಸಿದರು. ರೇಣುಕಾ ಬಂಗೇರ ವಂದಿಸಿದರು. ಸಭಿಕರ ಪರವಾಗಿ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ, ಅರಸಿನ ಕುಂಕುಮ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ. ಈ ಆಚರಣೆಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಮಹಿಳೆಯರು ಬೇರೆ ಬೇರೆ ಕಾರ್ಯಕ್ರಮದ ಮೂಲಕ ತಮ್ಮ ಸಂಘಟನಾ ಚತುರತೆಯನ್ನು ತೋರಿಸಬೇಕು ಎಂದರು.
ಉದ್ಯಮಿ ಸುನಿಲ್ ಸಾಲ್ಯಾನ್ ಶುಭ ಹಾರೈಸಿದರು. ಸ್ಥಳೀಯ ಸಮಿತಿಯ ಸಲಹೆಗಾರ ನ್ಯಾಯವಾದಿ ಉಮಾನಾಥ ಮೂಲ್ಯ ಮಾತನಾಡಿ, ಈ ಪರಿಸರದಲ್ಲಿ ಜ್ಯೋತಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯಾಲಯವಿದೆ. ಸಮಾಜ ಬಾಂಧವರು ಇದರ ಪ್ರಯೋಜನ ವನ್ನು ಪಡೆಯಬೇಕು ಎಂದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಎಲ್ಲರಿಗೂ ಸಮಿತಿಯ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಗ್ಯಾಲಕ್ಸಿ ಸಭಾಂಗಣದಶಶಿಧರ ಕೆ. ಶೆಟ್ಟಿ ಇನ್ನಂಜೆ ಇವರನ್ನು ಗೌರವಿಸಲಾಯಿತು. ಉಮೇಶ್ ಬಂಗೇರ, ಮೋಹನ್ ಬಂಜನ್, ಚಂದು ಮೂಲ್ಯ, ಸತೀಶ್ ಮೂಲ್ಯ, ಚಂದ್ರಶೇಖರ ಕುಲಾಲ್, ಚಂದ್ರಹಾಸ್ ಮೂಲ್ಯ, ಯಶೋಧರ ಬಂಗೇರ, ಉದಯ ಮೂಲ್ಯ ಮಾಣಿ ಅವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕುಲಾಲ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.