Advertisement
ನಾಲ್ಕು ದಿನಗಳಿಂದ ಅರಂತೋಡು ಪರಿಸರದಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಪರಿಣಾಮವಾಗಿ ಬಿಳಿಯಾರು ಸಮೀಪ ಗುಡ್ಡ ಸಹಿತ ಮುರಕಲ್ಲು ಉರುಳಿ ರಸ್ತೆ ಮೇಲೆ ಬಿತ್ತು. ಇದರಿಂದ ಘನ ಸಂಚಾರಕ್ಕೆ ತೊಡಕಾಗಿ ರಸ್ತೆ ತಡೆಯುಂಟಾಗಿತ್ತು. ವಾಹನಗಳು ಬಹುದೂರ ಸಾಲುಗಟ್ಟಿ ನಿಂತಿದ್ದವು. ಪತ್ರಕರ್ತರು ಈ ಕುರಿತು ಪೊಲೀಸರಿಗೆಮಾಹಿತಿ ನೀಡಿದ ಬಳಿಕ ಧಾರಾಕಾರ ಮಳೆಯಲ್ಲೇ ಸುಳ್ಯ ಠಾಣೆ ಉಪ ನಿರೀಕ್ಷಕ ಮಂಜುನಾಥ್ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರಾದ ತಾಜುದ್ದೀನ್ ಟರ್ಲಿ ಹಾಗೂ ಇತರರ ಸಹಕಾರದಿಂದ ರಸ್ತೆಗೆ ಉರುಳಿ ಬಿದ್ದ ಗುಡ್ಡದ ಮಣ್ಣು, ಮರ, ಕಲ್ಲುಗಳನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.