Advertisement

ಅರಂತೋಡು-ಅಂಗಡಿ ಮಜಲು ರಸ್ತೆಯ ಡಾಮರು ಮಾಯ!

10:41 PM May 16, 2019 | mahesh |

ಅರಂತೋಡು: ಅರಂತೋಡು- ಕುಕ್ಕುಂಬಳ-ಅಂಗಡಿಮಜಲು ಮರ್ಕಂಜ ರಸ್ತೆ ತೀರ ಹದಗೆಟ್ಟಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಮಾಣಿ-ಮೈಸೂರು ರಸ್ತೆಯ ಅರಂತೋಡು ಪೇಟೆಯಿಂದ ಅರಂತೋಡು- ಕುಕ್ಕುಂಬಳ- ಅಂಗಡಿ ಮಜಲು, ಅಡ್ಕಬಳೆ -ಮರ್ಕಂಜ ರಸ್ತೆ ಕವಲೊಡೆಯುತ್ತದೆ. ಅರಂತೋಡು ಪೇಟೆಯಿಂದ ಸುಮಾರು ಕುಕ್ಕುಂಬಳ ತನಕ ಸುಮಾರು ಒಂದು ಕಿ.ಮೀ. ರಸ್ತೆಯ ಡಾಮರು ಎದ್ದು ಹೋಗಿ ಅಲ್ಲಲ್ಲಿ ಹೊಂಡ-ಗುಂಡಿಯಾಗಿವೆ. ವಾಹನಗಳು ಚಲಿಸುವಾಗ ಜಲ್ಲಿ ಕಲ್ಲುಗಳು ಪಾದಚಾರಿಗಳ ಮೈಮೇಲೆ ಎಸೆಯಲ್ಪಡುತ್ತಿದ್ದು, ಇದರಿಂದ ಅಪಾಯ ಇದೆ. ದ್ವಿಚಕ್ರ ವಾಹನದಲ್ಲಿ ಸಂಚಾರ ಇಲ್ಲಿ ಕಷ್ಟಕರವಾಗಿದೆ. ಈ ರಸ್ತೆಯ ಮೂಲಕ ನೂರಾರು ಪಾದಾಚಾರಿಗಳು, ಶಾಲಾ ಮಕ್ಕಳು ತೆರಳುತ್ತಾರೆ. ರಸ್ತೆಯ ಪಕ್ಕದಲ್ಲಿ ಪ್ರಾಥಮಿಕ ಶಾಲೆ ಇದೆ. ಈ ರಸ್ತೆಯ ಮೂಲಕ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ.

Advertisement

ಅಂತರ್‌ ಗ್ರಾಮ ಸಂಪರ್ಕ ರಸ್ತೆ
ಅರಂತೋಡು-ಕುಕ್ಕುಂಬಳ-ಅಂಗಡಿ ಮಜಲು ರಸ್ತೆ-ಮರ್ಕಂಜ ರಸ್ತೆ ನೆರೆಯ ಗ್ರಾಮವಾದ ಮರ್ಕಂಜವನ್ನು ಅತೀ ಹತ್ತಿರದಿಂದ ಸಂಪರ್ಕಿಸುತ್ತದೆ. ಈ ರಸ್ತೆ ಮರ್ಕಂಜ ಗ್ರಾಮದ ಮಿತ್ತಡ್ಕ, ತೇರ್ಥಮಜಲನ್ನು ಮೊದಲಾಗಿ ಸಂಪರ್ಕಿಸುತ್ತದೆ. ಅಲ್ಲಿಂದ ಸುಳ್ಯ-ಸುಬ್ರಹ್ಮಣ್ಯ ರಸ್ತೆಯ ಮೂಲಕ ಸುಬ್ರಹ್ಮಣ್ಯಕ್ಕೆ ಪ್ರಯಾಣ ಮಾಡಬಹುದು.

ಅಭಿವೃದ್ಧಿ ಅಗತ್ಯ
ಅರಂತೋಡು-ಕುಕ್ಕುಂಬಳ,ಅಡ್ಕಬಳೆ- ಮರ್ಕಂಜ ರಸ್ತೆಯ ಅಭಿವೃದ್ದಿ ಅಗತ್ಯವಾಗಿ ನಡೆಯಬೇಕು. ಕೆಲವೆಡೆ ಅರಂತೋಡು ಕುಕ್ಕುಂಬಳ ಸಮೀಪ ಕೆಲವು ಭಾಗ ರಸ್ತೆ ಕಾಂಕ್ರೀಟ್‌ ಆಗಿದೆ. ಆದರೂ ರಸ್ತೆ ತುಂಬಾ ಇಕ್ಕಟಾಗಿದ್ದು, ಕಿರಿದಾಗಿದೆ. ಭವಿಷ್ಯದ ದೃಷ್ಟಿಯಿಂದ ಈ ರಸ್ತೆ ವಿಸ್ತರಣೆಗೊಂಡು ಅಭಿವೃದ್ಧಿ ಕಾಣಬೇಕಾಗಿದೆ.

ಶಾಸಕರ ಗಮನಕ್ಕೆ ತರುತ್ತೇವೆ
ಅರಂತೋಡು ಕುಕ್ಕುಂಬಳ-ಅಡ್ಕಬಳೆ ರಸ್ತೆ ಹದಗೆಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ರಸ್ತೆ ಅಭಿವೃದ್ಧಿ ಬಗ್ಗೆ ನಾವು ಶಾಸಕರ ಗಮನಕ್ಕೆ ತರುತ್ತೇವೆ.
– ಜಯಪ್ರಕಾಶ್‌, ಅರಂತೋಡು ಗ್ರಾ.ಪಂ. ಪಿಡಿಒ

- ತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next