Advertisement

Aranthodu ಕೋಲ್ಚಾರು: ಕಣಕ್ಕೂರಿನಲ್ಲಿ ಕಾರು ಪಲ್ಟಿ

01:22 AM Jul 02, 2024 | Team Udayavani |

ಅರಂತೋಡು ಕೋಲ್ಚಾರು ಬಂದಡ್ಕ ಸಂಪರ್ಕದ ರಸ್ತೆಯ ಮಧ್ಯೆ ಕಣಕ್ಕೂರು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ ಸಂಭವಿಸಿದೆ.

Advertisement

ಕೇರಳದ ಬಂದಡ್ಕದಿಂದ ಸುಳ್ಯ ಕಡೆಗೆ ಬರುತ್ತಿದ್ದ ವೊಕ್ಸ್‌ವೇಗನ್‌ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಕಾರಿನಲ್ಲಿ ಓರ್ವ ಮಹಿಳೆ ಸಹಿತ ಇಬ್ಬರು ಇದ್ದರೆಂದು ತಿಳಿದು ಬಂದಿದೆ.

ಅಲ್ಪಸ್ವಲ್ಪ ಗಾಯಗೊಂಡ ಅವರಿಗೆ ಸ್ಥಳೀಯರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next