Advertisement
ಅರಂತೋಡು: ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
Related Articles
ಬೆಳ್ತಂಗಡಿ: ಶಿಬಾಜೆಯ ಡೆಚ್ಚಾರ್ ಮನೆ ಉಲಹನ್ನನ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಈ ಭಾಗದಲ್ಲಿ 3-4 ವರ್ಷಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Advertisement
ಅಮ್ಚಿನಡ್ಕ: ತೋಟಕ್ಕೆ ನುಗ್ಗಿದ ಕಾಡಾನೆಪುತ್ತೂರು: ಅಮ್ಚಿನಡ್ಕದ ಮುಕಾರಿಮೂಲೆಯಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.
ಆನೆಗುಂಡಿ ರಕ್ಷಿತಾರಣ್ಯ ಮೂಲಕ ಬಂದಿರುವ ಮೂರು ಕಾಡಾನೆಗಳು ಅಬ್ದುಲ್ ರಝಾಕ್ ಮತ್ತು ಶರತ್ ಕುಮಾರ್ ರೈ ಅವರ ತೋಟದಲ್ಲಿ ಹಾನಿ ಮಾಡಿದೆ. ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಬರಡ್ಕ ಮಿತ್ತೂರು: ತೋಟಕ್ಕೆ ಕಾಡಾನೆ ಲಗ್ಗೆ
ಸುಳ್ಯ: ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕೃಷಿ ತೋಟಕ್ಕೆ ಗುರುವಾರ ರಾತ್ರಿ ಕಾಡಾನೆ ನುಗ್ಗಿ ಹಾನಿ ಮಾಡಿದೆ. ಗ್ರಾಮದ ಕೂಟೇಲು ವೆಂಕಪ್ಪ ಗೌಡ, ಎನ್. ಜನಾರ್ದನ ಗೌಡ, ಎಮ್.ಪದ್ಮಯ್ಯ ಗೌಡ, ಎನ್.ಜಾನಕಿ ಅವರ ತೋಟದಲ್ಲಿರುವ ಬಾಳೆ, ಅಡಿಕೆ, ತೆಂಗು ಕೃಷಿಯನ್ನು ಹಾನಿ ಮಾಡಿದೆ. ಅರಂತೋಡಿನ ಅಡ್ಕ ಬಳೆ ಪರಿಸರದ ತೋಟಗಳಲ್ಲೂ ಕಾಡಾನೆ ದಾಂಧಲೆ ನಡೆಸಿದೆ.