Advertisement

Aranthodu: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ

10:11 PM Sep 29, 2023 | Team Udayavani |

ಅರಂತೋಡು: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕಲ್ಲಪಳ್ಳಿ ಸಮೀಪ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.

Advertisement

ಮರ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಕಲ್ಲಪಳ್ಳಿ ಸಮೀಪ ಗಡಿಗುಡ್ಡೆ ಎಂಬಲ್ಲಿ ಲಾರಿ ಮಗುಚಿ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ರಸ್ತೆಗೆ ಅಡ್ಡವಾಗಿ ಲಾರಿ ಬಿದ್ದ ಕಾರಣ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.ಶುಕ್ರವಾರ ಲಾರಿಯನ್ನು ತೆರೆವುಗೊಳಿಸಲಾಯಿತು.

ರಸ್ತೆ ಬದಿ ನಿಲ್ಲಿಸಿದ್ದ ಆಪೆ ರಿಕ್ಷಾಕ್ಕೆ ಕಾರು ಢಿಕ್ಕಿ
ಅರಂತೋಡು:ರಸ್ತೆ ಬದಿಯಲ್ಲಿ ನಿಲ್ಲಿಸಿದ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಅದೃಷ್ಟವಶಾತ್‌ ಪ್ರಯಾಣಿಕರ ಪಾರಾದ ಘಟನೆ ಗೂನಡ್ಕದಿಂದ ಶುಕ್ರವಾರ ವರದಿಯಾಗಿದೆ.

ಗೂನಡ್ಕದ ಸ್ಥಳೀಯ ಹೋಟೆಲೊಂದರ ಮುಂಭಾಗದಲ್ಲಿ ಪಾರ್ಕಿಂಗ್‌ ಮಾಡಿದ ಗೂನಡ್ಕದ ಅಮಿರ್‌ ಎಂಬವರ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ರಿಕ್ಷಾದ ಮುಂಭಾಗಕ್ಕೆ ಹಾನಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next