Advertisement
ಪಾವಂಜೆಯ ಅರಾಂದ್‌ನ ನದೀ ತೀರದ ಪ್ರದೇಶಕ್ಕೆ ಭೇಟಿ ನೀಡಿದ ಅವರು ಅರಾಂದ್‌ನ ಕಿಂಡಿ ಅಣೆಕಟ್ಟಿ ನಿಂದ ಕೇವಲ ಒಂದು ಕಿ.ಮೀ. ದೂರದ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕ ಸಿಕ್ಕಲ್ಲಿ ಇಲ್ಲಿನ ಗ್ರಾಮಸ್ಥರ ಅದ ರಲ್ಲೂ ಕೃಷಿಕರಿಗೆ, ಮೀನುಗಾರರಿಗೆ ಸಂಪ ರ್ಕದ ಸಹಕಾರ ಸಿಗುತ್ತದೆ. ಖಾಸಗಿ ಜಮೀನು ನಡುವೆ ಇದೆ ಎಂಬ ಮಾಹಿತಿ ಇದ್ದು ಅವರ ಮನವೊಲಿಸಿ ಸಂಪ ರ್ಕದ ಪ್ರಯತ್ನ ನಡೆಸುತ್ತೇನೆ. ಸಾಧ್ಯವಾಗ ದಿದ್ದಲ್ಲಿ ಸರಕಾರದಿಂದ ಯಾವ ಕ್ರಮಕೈಗೊ ಳ್ಳಬಹುದು ಎಂಬುದನ್ನು ಅಧಿಕಾರಿಗಳಿಂದ ಪರಿಶೀಲಿಸಿ ರಸ್ತೆ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭ ಅರಾಂದ್ ಪ್ರದೇಶದ ನಂದಿನಿ ನದಿ ತೀರದ ರಸ್ತೆಯ ಬಗ್ಗೆ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ, ಮುಂದಿನ ಹಂತದಲ್ಲಿ 300 ಮೀ. ಅಂತರದಲ್ಲಿ ಈ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ, ನದಿ ಬದಿಯ ತಡೆಗೋಡೆಯು ಕುಸಿಯದಂತೆ ಎಚ್ಚರಿಕೆ ವಹಿಸಲು ಮೀನುಗಾರಿಕೆ ಇಲಾಖೆಗೆ ಸೂಚಿಸುತ್ತೇನೆ ಎಂದರು. ಅರಾಂದ್ ಪ್ರದೇಶದ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಶಾಸಕರಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ವಿವರಿಸಿದರು.
ತಾ.ಪಂ.ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ.ಪಂ.ಸದಸ್ಯರಾದ ವಿನೋದ್‌ಕುಮಾರ ಕೊಳು ವೈಲು,ಚಿತ್ರಾ ಸುಕೇಶ್ ಸಸಿಹಿತ್ಲು, ಅಶೋಕ್ ಬಂಗೇರ ಸಸಿಹಿತ್ಲು,ಸುಕೇಶ್ ಪಾವಂಜೆ, ಸುಗಂಧಿ, ಜಯಂತಿ,ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿರ್ದೇ ಶಕ ಹಿಮಕರ್ ಕದಿಕೆ,ಮೀನುಗಾರಿಕೆ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು,
ಅನಂದ ಸುವರ್ಣ ಸಸಿಹಿತ್ಲು, ಸೂರ್ಯ ಕಾಂಚನ್ ಸಸಿಹಿತ್ಲು,ಎಚ್.ರಾಮಚಂದ್ರ ಶೆಣೈ, ಮನೋಜ್‌ಕುಮಾರ್, ಹರೀಶ್,ರಾಜೇಶ್,ಮಹಾಬಲ ಅಂಚನ್,ಕಿರಣ್ ಸಸಿಹಿತ್ಲು ,ಭಾಸ್ಕರ ದೇವಾಡಿಗ, ನರೇಶ್ ದೇವಾಡಿಗ,ರಾಜು ದೇವಾಡಿಗ ಮೊದಲಾದ ವರು ಉಪಸ್ಥಿತರಿದ್ದರು.