Advertisement
ಪಾವಂಜೆಯ ಅರಾಂದ್‌ನ ನದೀ ತೀರದ ಪ್ರದೇಶಕ್ಕೆ ಭೇಟಿ ನೀಡಿದ ಅವರು ಅರಾಂದ್‌ನ ಕಿಂಡಿ ಅಣೆಕಟ್ಟಿನಿಂದ ಕೇವಲ ಒಂದು ಕಿ.ಮೀ. ದೂರದ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕ ಸಿಕ್ಕಲ್ಲಿ ಇಲ್ಲಿನ ಗ್ರಾಮಸ್ಥರ ಅದರಲ್ಲೂ ಕೃಷಿಕರಿಗೆ, ಮೀನುಗಾರರಿಗೆ ಸಂಪರ್ಕದ ಸಹಕಾರ ಸಿಗುತ್ತದೆ. ಖಾಸಗಿ ಜಮೀನು ನಡುವೆ ಇದೆ ಎಂಬ ಮಾಹಿತಿ ಇದ್ದು ಅವರ ಮನವೊಲಿಸಿ ಸಂಪರ್ಕದ ಪ್ರಯತ್ನ ನಡೆಸುತ್ತೇನೆ. ಸಾಧ್ಯವಾಗದಿದ್ದಲ್ಲಿ ಸರಕಾರದಿಂದ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಅಧಿಕಾರಿಗಳಿಂದ ಪರಿಶೀಲಿಸಿ ರಸ್ತೆ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭ ಅರಾಂದ್ ಪ್ರದೇಶದ ನಂದಿನಿ ನದಿ ತೀರದ ರಸ್ತೆಯ ಬಗ್ಗೆ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ, ಮುಂದಿನ ಹಂತದಲ್ಲಿ 300 ಮೀ. ಅಂತರದಲ್ಲಿ ಈ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ, ನದಿ ಬದಿಯ ತಡೆಗೋಡೆಯು ಕುಸಿಯದಂತೆ ಎಚ್ಚರಿಕೆ ವಹಿಸಲು ಮೀನುಗಾರಿಕೆ ಇಲಾಖೆಗೆ ಸೂಚಿಸುತ್ತೇನೆ ಎಂದರು. ಅರಾಂದ್ ಪ್ರದೇಶದ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಶಾಸಕರಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ವಿವರಿಸಿದರು.
Related Articles
Advertisement