ಅರಕಲಗೂಡು: ಪಪಂನ 2021-22ನೇ ಸಾಲಿನ 44,39,37,610 ರೂ.ನ ಆಯ-ವ್ಯಯವನ್ನು ಅಧ್ಯಕ್ಷ ಹೂವಣ್ಣ ಮಂಡಿಸಿದರು. ದೊಡ್ಡ ಮೊತ್ತದ ಮೊದಲ ಬಜೆಟ್ ಇದಾಗಿದ್ದು, 44,34,67,840 ರೂ. ಖರ್ಚು, 4,69,770 ರೂ. ಉಳಿತಾಯ ತೋರಿಸಲಾಗಿದೆ. ಬಜೆಟ್ ಮಂಡನೆ ನಂತರ ಮಾತನಾಡಿದ ಪಪಂ ಅಧ್ಯಕ್ಷ ಹೂವಣ್ಣ, ಎಲ್ಲಾ ವಾರ್ಡ್‌ಗಳನ್ನು ಆಧುನೀಕರಣ ಮಾಡುವ ಹಿನ್ನೆಲೆಯಲ್ಲಿ ಈ ಬಾರಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರಿಗಿಲ್ಲ ಆದ್ಯತೆ: ಸಭೆಯಲ್ಲಿ ಸದಸ್ಯ ವಾಟಾಳ್ ರಮೇಶ್ ಮಾತನಾಡಿ, ಇದೇಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ತಯಾರಿಸಿದ್ದು ಸ್ವಾಗತಾರ್ಹ. ಇದರ ಗುರಿಯನ್ನುಮುಟ್ಟಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಪಪಂನ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸುವ ತಳಹದಿ ಆಗಿರುವ ಪೌರಕಾರ್ಮಿಕರಿಗೆ ಆದ್ಯತೆ ನೀಡದಿರುವುದುಬೇಸರದ ಸಂಗತಿ ಎಂದು ಹೇಳಿದರು.
ನೀರಿನ ತೆರಿಗೆ ಮನ್ನಾ ಮಾಡಿ: ಪಪಂ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮೀಣ ಜನರು ಇದ್ದು, ಶೇ.70 ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ಹೀಗಾಗಿ ಕುಡಿಯುವ ನೀರಿನತೆರಿಗೆಯನ್ನು ಮನ್ನಾ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿರುವ ನಾಗರಿಕರಿಗೆ ಸಹಕಾರ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪಪಂ ಅಧ್ಯಕ್ಷ ಹೂವಣ್ಣ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ಹೆಚ್ಚು ಅನುದಾನವನ್ನು ಗಳಿಸುವ ಮೂಲಕ ಇದಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ನಿರ್ಣಯಿಸಿ: ಸಭೆ ಮುಗಿದು 15 ದಿನ ಕಳೆದರೂ ಸಭಾ ನಡಾವಳಿ ಬರೆಯದೇ ಸಭೆಗೆ ಅಗೌರವ ತರುತ್ತಿರುವುದು ಒಳಿತಲ್ಲ ಎಂದು ಪಪಂ ಸಿಬ್ಬಂದಿಯನ್ನು ಎಚ್ಚರಿಸಿದ ಸದಸ್ಯ ಕೃಷ್ಣಯ್ಯ, ಅರಕಲಗೂಡು ಪಪಂನಲ್ಲಿಆಯ್ಕೆಯಾದ ದಿನದಿಂದಲೂ ಅನೇಕ ಸಭೆಗಳು ನಡೆದಿವೆ. ಆ ಸಭೆಯಲ್ಲಿ ನಿರ್ಣಯಿಸುವ ನಿರ್ಣಯಗಳನ್ನು ಸಭೆಯೊಳಗೆ ನಮೂದಿಸದೇ,ಸಭೆಯ ನಂತರದಲ್ಲಿ ಬರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಡಾವಳಿ ಪುಸ್ತಕ ಬರೆಯುತ್ತಿಲ್ಲ: ಇತ್ತೀಚಿನ ದಿನಗಳಲ್ಲಿ ಪಪಂನ ಸಭೆಯ ನಡಾವಳಿಯನ್ನು 15 ದಿನಗಳಾದರೂ ಬರೆಯಲ್ಲಿ ಪಪಂನ ಕಟ್ಟಡ ದಿಂದ ಹೊರಭಾಗಕ್ಕೆ ತೆಗೆದುಕೊಂಡು ಹೋಗಿಬರೆಯುತ್ತಾರೆ. ಇದು ಸರಿಯಾದ ಬೆಳವಣಿಗೆ ಯಲ್ಲ. ಅಧ್ಯಕ್ಷರು ಇತ್ತ ಗಮನ ನೀಡಿ ಸಭೆ ಯಲ್ಲೇ ನಡಾವಳಿ ಪುಸ್ತಕವನ್ನು ಬರೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗವು ನಡೆಯಿತು. ಇವರ ಪ್ರಶ್ನೆಗೆ ಉತ್ತರಿಸದೇ ಅಧಿಕಾರಿಗಳು ಮೌನಕ್ಕೆ ಶರಣಾದರು.