ಅರಕಲಗೂಡು: ಪಟ್ಟಣ ಪಂಚಾಯಿತಿ ಚುನಾವಣೆಗೆ 64 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಅರಕಲಗೂಡು ಪಟ್ಟಣ ಪಂಚಾಯಿತಿ ಚುನಾವಣೆಯು ಮೇ 29ರಂದು ನಡೆಯಲಿದ್ದು ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧೆಗೆ ತಮ್ಮ ಪಕ್ಷದ ನಾಯಕರ ಮುಂದೆ ತಮ್ಮ ಬೆಂಬಲಿಗರೊಂದಿಗೆ ಬಿ ಫಾರಂಗಾಗಿ ಪೈಪೋಟಿ ನಡೆಸಿದರು. ಬಿ ಫಾರಂ ಸಿಕ್ಕದೇ ಇದ್ದವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ ನಾಮಪತ್ರವನ್ನು ಸಲ್ಲಿಸಿದರು.
2ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಸುಮಿತ್ರ, ಜೆಡಿಎಸ್‌ನಿಂದ ಸೌಭಾಗ್ಯ ನಾಮಪತ್ರ ಸಲ್ಲಿಸಿದ್ದಾರೆ.
3ನೇ ವಾರ್ಡ್ ಹಿಂದುಳಿದವರ್ಗ(ಎ)ಗೆ ಮೀಸ ಲಾಗಿದ್ದು, ಬಿಜೆಪಿಯಿಂದ ಪುಟ್ಟರಾಜ, ಕಾಂಗ್ರೆಸ್‌ನಿಂದ ಲಕ್ಷ್ಮಣ, ಜೆಡಿಎಸ್‌ನಿಂದ ಹೂವಣ್ಣ ಹಾಗೂ ಪಕ್ಷೇತರ ರಾಗಿ ಎ.ಆರ್.ನರೇಂದ್ರ ನಾಮಪತ್ರ ಸಲ್ಲಿಸಿದ್ದಾರೆ.
4ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸ ಲಾಗಿದ್ದು, ಬಿಜೆಪಿಯಿಂದ ಎಸ್.ಆರ್ ಹೇಮಾ, ಜೆಡಿಎಸ್‌ನಿಂದ ಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಅರಕಲಗೂಡು ಪಟ್ಟಣ ಪಂಚಾಯಿತಿ ಚುನಾವಣೆಯು ಮೇ 29ರಂದು ನಡೆಯಲಿದ್ದು ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧೆಗೆ ತಮ್ಮ ಪಕ್ಷದ ನಾಯಕರ ಮುಂದೆ ತಮ್ಮ ಬೆಂಬಲಿಗರೊಂದಿಗೆ ಬಿ ಫಾರಂಗಾಗಿ ಪೈಪೋಟಿ ನಡೆಸಿದರು. ಬಿ ಫಾರಂ ಸಿಕ್ಕದೇ ಇದ್ದವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ ನಾಮಪತ್ರವನ್ನು ಸಲ್ಲಿಸಿದರು.
Advertisement
ಪಟ್ಟಣ ಪಂಚಾಯಿತಿ 17 ವಾರ್ಡುಗಳ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ ಎನ್.ಎಂ.ಜಯಮ್ಮ, ಬಿಜೆಪಿಯಿಂದ ನಾಗಮ್ಮ, ಜೆಡಿಎಸ್‌ನಿಂದ ಗೀತ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹರದಮ್ಮ ನಾಮಪತ್ರ ಸಲ್ಲಿಸಿದ್ದಾರೆ.
Related Articles
Advertisement
5ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಬಿ.ರಂಗನಾಥ, ಕಾಂಗ್ರೆಸ್‌ನಿಂದ ಸುಭಾನ್ ಶರೀಫ್, ಜೆಡಿಎಸ್‌ನಿಂದ ನಜುರುಲ್ಲಾ, ಪಕ್ಷೇತರರಾಗಿ ಎ.ಎಸ್.ಸತ್ಯನಾರಾಯಣ, ಕುಶಾಲ ನಾಮಪತ್ರ ಸಲ್ಲಿಸಿದ್ದಾರೆ.
6ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸ ಲಾಗಿದ್ದು, ಬಿಜೆಪಿಯಿಂದ ಎಚ್.ಎಸ್.ರಶ್ಮಿ, ಜೆಡಿಎಸ್‌ನಿಂದ ಡಿ. ಭಾಗ್ಯ, ಕಾಂಗ್ರೆಸ್‌ನಿಂದ ತಬಸುಮ್ ಬಾನು ನಾಮಪತ್ರ ಸಲ್ಲಿಸಿದ್ದಾರೆ.
7 ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ರಮೇಶ್ ವಾಟಾಳ್, ಬಿ) ಕಾಂಗ್ರೆಸ್‌ನಿಂದ ಎ.ಪಿ.ರಮೇಶ್, ಜೆಡಿಎಸ್‌ನಿಂದ ಡಿ.ಟಿ. ಗಣೇಶ್, ಪಕ್ಷೇತರರಾಗಿ ಗೋಪಾಲ ನಾಮಪತ್ರ ಸಲ್ಲಿಸಿದ್ದಾರೆ.
8ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಯೋಗೇಶ್, ಕಾಂಗ್ರೆಸ್‌ನಿಂದ ಸಿ. ಪ್ರದೀಪ್ ಕುಮಾರ್, ಜೆಡಿಎಸ್‌ನಿಂದ ಎ.ಎಸ್. ರಾಜು, ಪಕ್ಷೇತರರಾಗಿ ನಿರಂಜನ ನಾಮಪತ್ರ ಸಲ್ಲಿಸಿದ್ದಾರೆ.
9ನೇ ವಾರ್ಡ್ ಪರಿಶಿಷ್ಟಜಾತಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಎಂ.ಜೆ.ಮೋಹನ್ ಕುಮಾರ್, ಜೆಡಿಎಸ್‌ನಿಂದ ಕೃಷ್ಣಯ್ಯ ನಾಮಪತ್ರ ಸಲ್ಲಿಸಿದ್ದಾರೆ.
10ನೇ ವಾರ್ಡ ಹಿಂದುಳಿದ ವರ್ಗ (ಬಿ)ಗೆ ಮೀಸ ಲಾಗಿದ್ದು,ಬಿಜೆಪಿಯಿಂದ ಎಚ್.ಎಲ್ಲಕ್ಷ್ಮೀ, ಜೆಡಿಎಸ್‌ನಿಂದ ಮಣಿ, ಕಾಂಗ್ರೆಸ್‌ನಿಂದ ಎಚ್.ಆರ್.ಸುನಂದಾ ನಾಮಪತ್ರ ಸಲ್ಲಿಸಿದ್ದಾರೆ.
11ನೇ ವಾರ್ಟ್ ಪರಿಶಿಷ್ಟ ಪಂಗಡಕ್ಕೆ ಮೀಸ ಲಾಗಿದ್ದು, ಬಿಜೆಪಿಯಿಂದ ಆರ್. ಪಲ್ಲವಿ, ಜೆಡಿಎಸ್‌ನಿಂದ ಕುಮಾರ, ಕಾಂಗ್ರೆಸ್‌ನಿಂದ ಸಾಕಮ್ಮ ನಾಮಪತ್ರ ಸಲ್ಲಿಸಿದ್ದಾರೆ.
12ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸ ಲಾಗಿದ್ದು, ಬಿಜೆಪಿಯಿಂದ ಜಯಮ್ಮ, ಕಾಂಗ್ರೆಸ್‌ನಿಂದ ಅಫಿಯಾಬಾನು, ಜೆಡಿಎಸ್‌ನಿಂದ ರಹೀಂಉನ್ನೀಸಾ ನಾಮಪತ್ರ ಸಲ್ಲಿಸಿದ್ದಾರೆ.
13ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸ ಲಾಗಿದ್ದು, ಜೆಡಿಎಸ್‌ನಿಂದ ಖಲೀಲ್ ಅಹಮದ್, ಕಾಂಗ್ರೆಸ್‌ನಿಂದ ಅಬ್ದುಲ್ ಬಶೀರ್, ಪಕ್ಷೇತರರಾಗಿ ಜಬೀಉಲ್ಲಾ, ಯಾಸ್ಮಿನಾಬಾನು ನಾಮಪತ್ರ ಸಲ್ಲಿಸಿದ್ದಾರೆ.
14ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸ ಲಾಗಿದ್ದು,ಬಿಜೆಪಿಯಿಂದ ಮಂಗಳಾ, ಕಾಂಗ್ರೆಸ್‌ನಿಂದಶರೂನ ಜಾಯ್‌ಶಿಬಾ, ಜೆಡಿಎಸ್‌ನಿಂದ ಕೆ.ಎಸ್. ಅನುಷಾ, ಪಕ್ಷೇತರರಾಗಿ ಶಿವಮ್ಮ ,ರಾಜಶ್ರೀ ನಾಮಪತ್ರ ಸಲ್ಲಿಸಿದ್ದಾರೆ.
15ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸ ಲಾಗಿದ್ದು, ಬಿಜೆಪಿಯಿಂದ ರಜನಿ, ಕಾಂಗ್ರೆಸ್‌ನಿಂದ ಶಾರದ, ಜೆಡಿಎಸ್‌ನಿಂದ ಎಚ್.ಬಿ. ಭೈರವಿ, ಬಿಎಸ್‌ಪಿಯಿಂದ ಶೋಭಾ ನಾಮಪತ್ರ ಸಲ್ಲಿಸಿದ್ದಾರೆ.
16ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಬಿಜೆಪಿಯಿಂದ ಚಾಮುಂಡಿ, ಕಾಂಗ್ರೆಸ್‌ನಿಂದ ಅನಿಕೇತನ, ಜೆಡಿಎಸ್‌ನಿಂದ ಎ.ಸಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.
17ನೇ ವಾರ್ಡ್ ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ನಿಖೀಲ್ ಕುಮಾರ್, ಜೆಡಿಎಸ್‌ನಿಂದ ಚಿಕ್ಕಹೊನ್ನೇಗೌಡ ನಾಮಪತ್ರ ಸಲ್ಲಿಸಿದ್ದಾರೆ.