ಬೆಳಗಾವಿ : ಡ್ರಗ್ಸ್ ಕೇಸ್ ನಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಖಂಡಿತ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರಾಜಕೀಯ ಯಾರು ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್ ನಂತಹ ಪ್ರಕರಣಗಳಲ್ಲಿ ಯಾರೂ ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್ ನಲ್ಲಿ ಬಹಳ ಕಠಿಣ ಕ್ರಮವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಖಡಕ್ ಆಗಿ ಉತ್ತರಿಸಿದರು.
ಇದನ್ನೂ ಓದಿ : ಕೈಗಾರಿಕಾ ವಲಯದ ನೌಕರರಿಗೆ ತಯಾರಾಗುತ್ತಿದೆ ಎಸಿ ಹೆಲ್ಮೆಟ್ | ವಿಶೇಷತೆ ಏನು.?ಇಲ್ಲಿದೆ ಮಾಹಿತಿ
ಡ್ರಗ್ಸ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಆರೋಪಿ ನಟಿ ಅನುಶ್ರೀ ಹೆಸರು ಕೇಳಿ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ. ಎಫ್ ಎಸ್ ಎಲ್ ರಿಪೋರ್ಟ್ ಬಂದಿದ್ದು ಗೊತ್ತಿದೆ. ಕಾನೂನು ಅದರ ದಾರಿಯನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದರು.
ಪೊಲೀಸರ ಮೇಲೆ ಒತ್ತಡ ಇರುವುದು ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಒಳಗಾಗುವುದಿಲ್ಲ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ : ತಾಲಿಬಾನ್ ಉಗ್ರರು ಅಂತ ಕರೆಯಬೇಡಿ…; ಪಾಕ್ ಮಾಧ್ಯಮಕ್ಕೆ ಟಿಟಿಬಿ ಎಚ್ಚರಿಕೆ