Advertisement

ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯನವರ ಬಟ್ಟೆ ತುಂಬಾ ಬಣ್ಣ ಆಗಿದೆ: ಆರಗ

04:52 PM Aug 17, 2024 | sudhir |

ತೀರ್ಥಹಳ್ಳಿ : ಮೈಸೂರಿನ ಮೂಡಾ ಹಗರಣದಲ್ಲಿ ಆಪಾದಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶನಿವಾರ ಪಟ್ಟಣದ ಪ್ರೇರಣಾ ಬಳಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಕಥೆ ಕಟ್ಟಿ ರಾಜಕಾರಣಕ್ಕಾಗಿ ಮಾಡಿರುವುದು ಎಂದು ಕಾಂಗ್ರೆಸ್ ಹೇಳುತ್ತಿದೆ ಖಂಡಿತವಾಗಿ ಆ ರೀತಿ ಇಲ್ಲ.ಸಿದ್ದರಾಮಯ್ಯನವರನ್ನು ಆ ರೀತಿ ಹೇಳಲು ಬರುವುದಿಲ್ಲ ಏಕೆಂದರೆ ದಾಖಲಾತಿ ಸಮೇತ ಸಿಕ್ಕಿ ಹಾಕಿಕೊಂಡಿದ್ದಾರೆ ಎಲ್ಲದಕ್ಕೂ ಸಹ ದಾಖಲಾತಿ ಇದೆ ಎಂದರು.

1990 ರ ಮೊದಲು ಆ ಜಮೀನು ಏನಾಗಿತ್ತು?ಯಾರ ವಶದಲ್ಲಿತ್ತು? 1994 ರಲ್ಲಿ ಕೃಷಿಯಾಗಿ ಹೇಗೆ ಪರಿವರ್ತನೆ ಆಯ್ತು? ಸೈಟ್ ಆಗಿ ಪರಿವರ್ತನೆ ಮಾಡಿ ಮೂಡಾದವರು ಹಂಚಿದ್ರು,ಆಮೇಲೆ ಕೃಷಿ ಜಮೀನು ಅಂತ ಹೇಳಿದ್ದು, 14 ಸೈಟ್ ಪಡೆದಿದ್ದು,ಇವೆಲ್ಲವೂ ಫ್ರಾಡ್ ದಾಖಲೆಗಳನ್ನು ಸೃಷ್ಟಿ ಮಾಡಿ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯ ಪತ್ನಿ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಒಂದು ಸಾಮಾನ್ಯ ಹಗರಣ ಅಲ್ಲ ಒಬ್ಬ ಮುಖ್ಯಮಂತ್ರಿಯಾದವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ಹೊರಗೆ ಬರಬೇಕಿತ್ತು. ಈ ಬಗ್ಗೆ ಬಿಜೆಪಿ ವಿಶೇಷವಾಗಿ ಪ್ರಸ್ತಾಪ ಮಾಡಿತ್ತು ಈ ವಿಚಾರವನ್ನು ವಿಧಾನಸಭೆಯಲ್ಲೂ ಚರ್ಚೆ ಮಾಡುವುದಕ್ಕೆ ಬಿಟ್ಟಿರಲಿಲ್ಲ. ಸ್ಪೀಕರ್ ಅವರ ಮೇಲೆ ಪ್ರಭಾವ ಬೀರಿ ಬೆನ್ನು ತೋರಿಸಿ ಓಡಿ ಹೋಗಿದ್ದರು . ನಾವು ಹಾಗಾಗಿ ಸಭೆಯಲ್ಲಿ ಧರಣಿಯನ್ನ ಮಾಡಿದ್ವಿ. ಆದರೂ ಕೂಡ ಚರ್ಚೆಗೆ ಅವರು ತಯಾರಿ ಇರಲಿಲ್ಲ ತಮ್ಮ ಒಂದು ಕಡೆಯ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ತಿಳಿಸಲು ಮುಂದಾಗಿದ್ದರು ಎಂದರು.

ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರಭಿವೃದ್ಧಿ ಸಚಿವರ ಕರೆಸಿ ಹೆಲಿಕ್ಯಾಪ್ಟರ್ ನಲ್ಲಿ ಮೂಡದಲ್ಲಿದ್ದಂತಹ ಕಡತಗಳನ್ನು ತುಂಬಿ ತೆಗೆದುಕೊಂಡು ಬಂದರು. ಅದನ್ನ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಬೇಕು

ಈ ವಿಚಾರದಲ್ಲಿ ಗಡಿಬಿಡಿ ಯಾಕೆ? 62 ಕೋಟಿಯ ಪರಿಹಾರ ಕೊಟ್ಟರೆ ನಾನು ಜಾಗವನ್ನು ಬಿಟ್ಟು ಕೊಡೋದಕ್ಕೆ ತಯಾರಿದ್ದೇನೆ ಎಂದು ಹೇಳುತ್ತಿದ್ದಾರೆ. ಮೂರು ಕಾಸಿನ ಜಮೀನಿಗೆ ಹೇಗೆ 62 ಕೋಟಿ ಕೊಡಲು ಸಾಧ್ಯವಾಗುತ್ತದೆ. ಈ ಪ್ರಕರಣ ಹೊರಗೆ ಬರಬೇಕು. ಮೂಡ ಹಗರಣದಲ್ಲಿ ಬಿಜೆಪಿಯ ಒತ್ತಡಕ್ಕೆ ಈ ರೀತಿ ಮಾಡಿಲ್ಲ, ಬಿಜೆಪಿ ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಕಂಪ್ಲೆಂಟನ್ನ ಕೊಟ್ಟಿಲ್ಲ.

Advertisement

ಬೇರೆ ಖಾಸಗಿ ವ್ಯಕ್ತಿಗಳು ದೂರನ್ನ ಆದರದ ಮೇಲೆ ರಾಜಪಾಲರ ಒಪ್ಪಿಗೆ ಪಡೆದಿದ್ದಾರೆ. ಈಗ ರಾಜ್ಯಪಾಲರು ಕೂಲಂಕುಷವಾಗಿ ಯೋಚನೆ ಮಾಡಿ ಒಪ್ಪಿಗೆಯನ್ನ ಕೊಟ್ಟಿದ್ದಾರೆ ಎಂದರು.

ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಇದ್ದಾಗ ಕಾಂಗ್ರೆಸ್ ನವರು ಅದನ್ನು ಕಾಂಗ್ರೆಸ್ ಆಫೀಸ್ ಮಾಡಿಕೊಂಡಿದ್ದರು.ಅದನ್ನು ಅಪವಿತ್ರಗೊಳಿಸಿದ್ದರು. ಇವತ್ತು ದಾಖಲಾತಿ ಸಹಿತ ಸಿಕ್ಕಿ ಹಾಕಿಕೊಂಡಿದ್ದಾರೆ.ಸಿದ್ದರಾಮಯ್ಯನವರು ಆಪಾದನೆಯಿಂದ ಹೊರ ಬರಬೇಕಾದರೆ ನೈತಿಕತೆಯ ಪ್ರೆಶ್ನೆ ಇದು. ತಕ್ಷಣವೇ ಇವತ್ತೇ ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕು . ಅವರ ಮೇಲೆ ತನಿಖೆ ನಡೆಯಲು ಸೂಕ್ತ ವಾತಾವರಣ ಮಾಡಿ ಕೊಡಬೇಕು. ಕರ್ನಾಟಕ ರಾಜ್ಯದಲ್ಲಿ ಒಬ್ಬ ಮುಖ್ಯಮಂತ್ರಿ ದಾಖಲೆ ಸಮೇತ ಸಿಕ್ಕಿ ಹಾಕಿಕೊಂಡಿರುವುದು ಇದು ಪ್ರಥಮ ಬಾರಿ, ಸಿದ್ದರಾಮಯ್ಯನವರು ನನ್ನ ಬಟ್ಟೆ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳುತ್ತಿದ್ದರು ಇವತ್ತು ಬಟ್ಟೆ ತುಂಬಾ ಬಣ್ಣ ಆಗಿದೆ. ಹಾಗಾಗಿ ರಾಜ್ಯಪಾಲರು ತೆಗೆದುಕೊಂಡನಿರ್ಣಯವನ್ನು ಸ್ವಾಗತಿಸುತ್ತೇನೆ ಎಂದರು.

ಇದನ್ನೂ ಓದಿ: Brand Value; ನೀರಜ್‌ ಚೋಪ್ರಾ, ಮನು ಭಾಕರ್‌ ಜಾಹೀರಾತು ಮೌಲ್ಯ ವಿಪರೀತ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next