Advertisement
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ನೆಡೆದ ವರಮಹಾಲಕ್ಷ್ಮಿ ವ್ರತದ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವರ್ಷವೂ ಕೂಡ ನಮ್ಮ ನಿರೀಕ್ಷೆ ಮೀರಿ ಸೇರಿದ್ದಾರೆ. ಇದ್ದನ್ನು ನೋಡಿದರೆ ಕಳೆದ ಬಾರಿಯ ಟೀಕೆಗೆ ಉತ್ತರ ಸಿಕ್ಕಂತೆ ಇದೆ. ನಮ್ಮಲ್ಲಿ ಕಾರ್ಯಕ್ರಮ ಮಾಡಲು ಸಭಾಂಗಣ ಇಲ್ಲ ಎಂದಾಗ ಯಡಿಯೂರಪ್ಪನವರು ಈ ಸಭಾಂಗಣ ಮಾಡಲು ಸಹಾಯ ಮಾಡಿದ್ದರು ನಮ್ಮ ಬಡ ಆತಿಥ್ಯವನ್ನು ಸ್ವೀಕರಿಸಿ ನನಗೆ ರಾಘಣ್ಣ ನಿಗೆ ಆಶೀರ್ವಾದ ಮಾಡಿ ಎಂದರು.
ನನ್ನ ತಾಯಿ ಈಗಿಲ್ಲ ಆದರೆ ನಿಮಲ್ಲಿ ನನ್ನ ತಾಯಿ ಕಾಣುತ್ತಿದ್ದೇನೆ, ಬಾಳೆಬೈಲಿನಲ್ಲಿ ಕಾಲೇಜು ತರಲು ಹೆಣ್ಣು ಮಕ್ಕಳೇ ಕಾರಣ, ಕಾಲೇಜು ತರದಿದ್ದರೆ ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಇರುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಭಾರತೀಪುರದ ತಿರುವಿನಲ್ಲಿ ಅಪಘಾತದಲ್ಲಿ ನನ್ನ ಮಗಳು ಹಾಗೂ ಅತ್ತೆ ತೀರಿಕೊಂಡರು ಆ ರೀತಿ ಬೇರೆ ಯಾರಿಗೂ ಆಗಬಾರದು ಎಂದು ಫ್ಲೈ ಓವರ್ ನಿರ್ಮಾಣದ ಕೆಲಸ ಆಗುತ್ತಿದೆ. ಕುಡಿಯುವ ನೀರಿಗಾಗಿ ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ತಂದಿದ್ದೇವೆ ಎಂದರು.
Related Articles
Advertisement
ಬಿ ವೈ ರಾಘವೇಂದ್ರ ಮಾತನಾಡಿ ಹತ್ತು ಸಾವಿರಕ್ಕೂ ಜನ ಮಹಿಳೆಯರು ಸೇರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವ್ರತವನ್ನು ವಯಕ್ತಿಕವಾಗಿ ಮಾಡುವುದು ಬೇರೆ ಸಂಘಟನೆ ಮೂಲಕ ಮಾಡುವುದು ಬೇರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಸೇರಿರುವುದು ನೋಡಿದರೆ ಭಾರತ ಕಟ್ಟಲು ಇಷ್ಟು ಸಾಕು ಎಂದರು.
ಜ್ಞಾನೇಂದ್ರ ಸೋತಾಗ ಕ್ಷೇತ್ರದ ಅಭಿವೃದ್ಧಿ ಯಾಕೆ ಎಂದು ನಾನು ಕೇಳಿದ್ದೆ, ನಾನು ಸೋತಿರಬಹುದು ಆದರೆ ನನ್ನ ಜನ ಕ್ಷೇತ್ರ ಸೋಲಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಶ್ರಾವಣ ಮಾಸ ಎಂದರೆ ಹಬ್ಬದ ಸಡಗರ. ಈ ಮಾಸದಲ್ಲಿ ನಾಡಿಗೆ ದೊಡ್ಡ ದೊಡ್ಡ ಹಬ್ಬಗಳನ್ನು ಮಾಡುವ ಸಂದರ್ಭ ಈ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ನೋಡಿದರೆ ಸಂತೋಷವಾಗುತ್ತದೆ ಎಂದರು.
ಭಾಗ್ಯಲಕ್ಷ್ಮಿ ಯೋಜನೆಯನ್ನು ಬಿ ಎಸ್ ಯಡಿಯೂರಪ್ಪ ಮಾಡಿದ್ದರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಮೋದಿ ಎಷ್ಟೋ ಯೋಜನೆ ಮಾಡಿದ್ದಾರೆ. ಆದರೆ ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ ಎನ್ನುತ್ತಾರೆ ಆದರೆ ಈ ಮೊದಲು ಸೌದೆಯನ್ನು ತಂದು ಅಡಿಗೆ ಮಾಡುತ್ತಿದ್ದರು ಆದರೆ ಈಗ ಗ್ಯಾಸ್ ಮನೆ ಬಾಗಿಲಿಗೆ ಬರುತ್ತದೆ. ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷದವರೆಗೆ ಹಣ ಕೊಡುವಂತಹದ್ದು ಹಾಗೂ ಮೋದಿ ಕೇರ್ ನಲ್ಲಿ ಮೆಡಿಸನ್ ಅತೀ ಕಡಿಮೆ ಮೊತ್ತಕ್ಕೆ ಮಾತ್ರೆಗಳು ಸಿಗುತ್ತದೆ ಇಂತಹ ಎಷ್ಟೋ ಕೆಲಸವನ್ನು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಾಡಿದೆ ಎಂದರು.
ಈಗಾಗಲೇ ಚಂದ್ರಯಾನ 3 ಯಶಸ್ವಿಯಲ್ಲಿ ತೀರ್ಥಹಳ್ಳಿಯ ಕೋಣಂದೂರಿನ ಶಿವಾನಿ ಎಂಬ ಮಹಿಳೆ ಕೂಡ ಇದ್ದರು. ಲಕ್ಷ್ಮೀ ಹಾಗೂ ಸರಸ್ವತಿ ಪುತ್ರರನ್ನು ಕೊಟ್ಟಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ರೀತಿಯಾದ ಹಬ್ಬವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.
ತಲೆ ಕೆಟ್ಟ ರಾಜಕಾರಣಿಯೊಬ್ಬ ಸನಾತನ ಧರ್ಮದ ವಿರುದ್ಧ ಮಾತನಾಡುತ್ತಾನೆ. ನಮ್ಮ ಧರ್ಮವನ್ನು ಒಡೆಯಲು ಇಂತಹ ಹೇಳಿಕೆ ನೀಡುತ್ತಾರೆ. ಅಂತಹ ವಿಷಯಗಳನ್ನು ನೀವುಗಳು ಚರ್ಚೆ ಮಾಡದೇ ದೇಶದಲ್ಲಿ ಧರ್ಮ ಸ್ಥಾಪನೆಗೆ ಕೆಲಸಮಾಡಬೇಕು. ಗೋವಿನ ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿ ಗೋ ಹತ್ಯೆ ನಿಷೇದ ಕಾಯ್ದೆ ತಂದರೆ ಅದನ್ನು ವಿರೋಧಿಸುವ ಕೆಲಸವನ್ನು ಕೆಲವರು ಮಾಡುತ್ತಾರೆ ಹಾಗೂ ಈಗಿನ ಸರ್ಕಾರ ಅದನ್ನು ರದ್ದು ಪಡಿಸುತ್ತೆ ಎಂದರು. ಜಿಲ್ಲೆಯಲ್ಲಿ ಏನೆಲ್ಲಾ ಕೆಲಸ ಆಗಬೇಕೋ ಅದನ್ನು ನಾನು ಮಾಡುತ್ತೇನೆ. ವಿಮಾನ ಹಾರಾಟದಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ವಿಮಾನ ನಿಲ್ದಾಣಕ್ಕೆ ತೀರ್ಥಹಳ್ಳಿ ಸಾರಥಿಯಾಗಿರುವ ಕುವೆಂಪು ಅವರ ಹೆಸರು ಇಟ್ಟಿದ್ದೇವೆ ಎಂದರು. ಟಿ ಡಿ ಮೇಘರಾಜ್ ಮಾತನಾಡಿ ಈ ರೀತಿ ದೊಡ್ಡ ಕಾರ್ಯಕ್ರಮ ಮಾಡಿರುವ ಮಹಿಳಾ ಮೋರ್ಚಾ ಕಾರ್ಯಕರ್ತರಿಗೆ ಧನ್ಯವಾದಗಳು. ತೀರ್ಥಹಳ್ಳಿಯಲ್ಲಿ ಲಕ್ಷ್ಮೀ ನೆಲೆಸಲಿ. ಕಳೆದ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಕತ್ತು ಏನು ಎಂದು ತೋರಿಸಿದ್ದೀರಾ. ಭಾಗ್ಯಗಳಿಂದ ಆಚೆ ಈಚೆ ಆದರೂ ತೀರ್ಥಹಳ್ಳಿ ಯಲ್ಲಿ ಮಹಿಳೆಯರಿಂದ ಬದಲಾವಣೆ ಆಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಅತೀ ಹೆಚ್ಚಿನ ಮತ ಬಂದಿತ್ತು. ಮುಂದಿನ ಚುನಾವಣೆ ರಾಘಣ್ಣ ಮೋದಿಯ ಚುನಾವಣೆ ಅಲ್ಲ ಭಾರತದ ಅಸ್ತಿತ್ವದ ಚುನಾವಣೆಯಾಗಲಿದೆ. ಈಗಾಗಲೇ ಚಂದ್ರಯಾನ ಮಾಡುವ ಮೂಲಕ ಭಾರತದ ಶಕ್ತಿ ಏನು ಎಂದು ತೋರಿಸಿದ್ದೇವೆ. ಭಾರತ ಪ್ರಜ್ವಲಿಸಬೇಕು ಎಂದರೆ ಮುಂದಿನ ಚುನಾವಣೆಯಲ್ಲಿ ರಾಘಣ್ಣನಿಗೆ ಆಶೀರ್ವಾದ ಮಾಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಗೀತಾ ಶೆಟ್ಟಿ, ದತ್ತಾತ್ರಿ, ಸವಿತಾ ಉಮೇಶ್, ಸುಮಾ ರಾಮಚಂದ್ರ ಸೇರಿದಂತೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಇದನ್ನೂ ಓದಿ: BJP-JDS Alliance; ಯಡಿಯೂರಪ್ಪರ ಯಾವುದೇ ನಿರ್ಧಾರಕ್ಕೂ ನಮ್ಮ ಸಹಮತವಿದೆ: ಪ್ರತಾಪ್ ಸಿಂಹ