Advertisement

ಪ್ರತಿ ಪಕ್ಷ ನಾಯಕರಿಗೆ ಕೊಡಗಿನಲ್ಲಿ ರಕ್ಷಣೆ ನೀಡಿಲ್ಲ ಎಂಬ ಆಪಾದನೆ ನಿರಾಧಾರ:ಆರಗ ಜ್ಞಾನೇಂದ್ರ

06:47 PM Sep 13, 2022 | Team Udayavani |

ಬೆಂಗಳೂರು:  ಪ್ರತಿಪಕ್ಷ ನಾಯಕ ಶ್ರೀ ಸಿದ್ದರಾಮಯ್ಯ ನವರು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರು ರಕ್ಷಣೆ ನೀಡಲು ವಿಫಲರಾಗಿದ್ದರು ಎಂಬ ಆಪಾದನೆಯಲ್ಲಿ ಹುರುಳಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

Advertisement

ವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಶ್ರೀ ಸಿದ್ದರಾಮಯ್ಯ ನವರು ಮಾತನಾಡುತ್ತಾ, ಕೊಡಗು ಭೇಟಿ ಸಮಯದಲ್ಲಿ ನನ್ನ ಮೇಲೆ ಕೆಲವು ಕಿಡಿಗೇಡಿಗಳು ಮೊಟ್ಟೆ ಹಾಗೂ ಕಲ್ಲು ಎಸೆತ ನಡೆಸಿದರಲ್ಲದೆ, ಕಪ್ಪು ಬಾವುಟ ಸಹ ಪ್ರದರ್ಶಿಸಿದರು. ಆದರೆ ಸ್ಥಳದಲ್ಲಿದ್ದ ಪೋಲೀಸರು ಯಾವುದೇ ರಕ್ಷಣೆಗೆ ಮುಂದಾಗದೆ, ನಿಷ್ಕ್ರಿಯ ರಾಗಿದ್ದರು ಎಂದು ಆಪಾದಿಸಿದರು.

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡವರನ್ನು ಜೆಸಿಬಿಯಲ್ಲಿ ಸಾಗಿಸಿದರು… ವಿಡಿಯೋ ವೈರಲ್‌

“ನಾನು ಕೊಡಗಿಗೆ ಮಳೆಯಿಂದಾಗಿ ಹಾನಿ ಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಲು, ಕೊಡಗಿಗೆ ತೆರಳಿದ್ದೆ”  ಎಂದು ಹೇಳಿದರು.

ಆದರೆ ಇದನ್ನು, ಬಲವಾಗಿ ನಿರಾಕರಿಸಿದ, ಗೃಹ ಸಚಿವರು, ಮೊಟ್ಟೆ ಎಸೆದ ಹಾಗೂ ಕಪ್ಪು ಬಾವುಟ ಪ್ರದರ್ಶಿಸಿ ದವರನ್ನು ಬಂಧಿಸಲಾಗಿದೆ ಹಾಗೂ ಕಾನೂನು ಕ್ರಮ ತೆಗೆದು ಕೊಳ್ಳಲಾಗಿದೆ, ಎಂದು ಮಾರುತ್ತರ ನೀಡಿದರು.

Advertisement

ಆ ಸಂಧರ್ಬದಲ್ಲಿ ಪೊಲೀಸರು ನಿಷ್ಕ್ರಿಯ ರಾಗಿರಲಿಲ್ಲ, ಹಾಗೂ ಸಿದ್ದರಾಮಯ್ಯ ನವರಿಗೆ, ಬೆಂಗಾವಾಗಿಲಿಗಿದ್ದು, ರಕ್ಷಣೆ ನೀಡಿದ್ದಾರೆ, ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next