Advertisement

ಕ್ಯಾಲರಿ ಬರ್ನ್ ಗಾಗಿ ಅಕ್ವಾ ವರ್ಕೌಟ್‌

09:31 PM Dec 09, 2019 | mahesh |

ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ ಇರುತ್ತಾರೆ. ಅಂತಹ ಆರೋಗ್ಯ ಪ್ರಿಯರಿಗೆ ಇತ್ತೀಚೆಗೆ ಜನಪ್ರಿಯವಾಗಿರುವ ಟ್ರೆಂಡ್‌ ಅಂದರೆ ಅಕ್ವಾ ವರ್ಕೌಟ್‌ ಉಪಯುಕ್ತವಾಗಲಿದ್ದು, ಆಕ್ವಾ ಕಿಕ್‌ಬಾಕ್ಸಿಂಗ್‌ ಕೂಡ ಸಖತ್‌ ಥ್ರಿಲ್‌ ನೀಡುವುದರೊಂದಿಗೆ ಕ್ಯಾಲರಿಯನ್ನು ಕರಗಿಸುತ್ತದೆ.

Advertisement

ನೀರಿನಲ್ಲಿ ಟ್ರೇಡಿಂಗ್‌
ಎರಡು ನಿಮಿಷ ಹೈಸ್ಪಿಡ್‌ ರನ್ನಿಂಗ್‌ ನಂತರ ಒಂದು ನಿಮಿಷ ನೀರಿನಲ್ಲಿ ಮಿತವಾಗಿ ಟ್ರೇಡಿಂಗ್‌ ಮಾಡಿ, ಆರಂಭದಲ್ಲಿ 5 ನಿಮಿಷಕ್ಕಿಂತ ಹೆಚ್ಚಿಗೆ ಟ್ರೇಡಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅಭ್ಯಾಸದ ಅನಂತರದ ದಿನಗಳಲ್ಲಿ 20ರಿಂದ 30 ನಿಮಿಷ ಟ್ರೇಡಿಂಗ್‌ ಮಾಡಬಹುದು. ಕಾರ್ಪೊರೇಟ್‌ ಕ್ಷೇತ್ರದಲ್ಲಿ ದಿನ ಪೂರ್ತಿ ಬಳಲಿ ಬೆಂಡಾಗಿ ಬರುವವವರು ಈ ವಕೌìಟ್‌ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದು, ತಮ್ಮ ವ್ಯಾಯಾಮಗಳಲ್ಲಿ ಅಕ್ವಾ ವರ್ಕೌಟ್‌ನಲ್ಲಿ ನಿರತರಾಗಿದ್ದಾರೆ. ಜತೆಗೆ ದಿನದ ಒಂದು ಗಂಟೆ ಈ ವ್ಯಾಯಾಮವನ್ನು ಮಾಡುವುದರಿಂದ 100ಕ್ಕಿಂತ ಹೆಚ್ಚು ಕ್ಯಾಲೋರಿಸ್‌ ಬರ್ನ್ ಆಗುತ್ತದೆ.

ಆಕ್ವಾ ಕಿಕ್‌ ಬಾಕ್ಸಿಂಗ್‌
ಇದು ನೀರಿನಲ್ಲಿ ಪಂಚ್‌ ಮಾಡುವ ವಿಧಾನ. ನೀರಿನಲ್ಲಿ ಕ್ರಾಸ್‌ ಪಂಚ್‌ಗಳು, ಅಪ್ಪರ್ಕಟ್ಸ್‌ ಸ್ನಾಯುಗಳು ಬಲವಾಗುತ್ತವೆ, ಶರೀರ ಟೋನ್‌ ಆಗುತ್ತದೆ. ಮೈದಾನದಲ್ಲಿ ಓಡುವ ರನ್ನರ್‌ಗಳು ಒಂದು ನಿಮಷಕ್ಕೆ 8 ಕ್ಯಾಲೋರಿಸ್‌ ಬರ್ನ್ ಮಾಡುತ್ತಾರೆ. ಆಕ್ವಾ ರನ್ನರ್ಸ್‌ ನಿಮಿಷಕ್ಕೆ 11.5 ಕ್ಯಾಲೋರಿಸ್‌ ಬರ್ನ್ ಮಾಡುತ್ತಾರೆ.

ನೀರಿನಲ್ಲಿ ವರ್ಕೌಟ್‌
ಹಿಟ್‌(ಹೈಇನ್‌ಟೆನ್ಸಿಟಿ ಇಂಟರ್‌ವೆಲ್‌ ಟ್ರೈನಿಂಗ್‌)ವಿಧಾನ ಜಿಮ್‌ಗಳಿಂದ ಪೂಲ್‌ಗ‌ಳಿಗೆ ಶಿಫಾrಗುತ್ತಿದೆ. ನೀರಿನಲ್ಲಿ ಹೈಸ್ಪಿಡ್‌ ಆ್ಯಕ್ಟಿವಿಟಿ ವಿಧಾನ ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು, ವರ್ಕೌಟ್‌ ವಿಧಾನಗಳಲ್ಲಿ ವಿಭಿನ್ನವಾಗಿದೆ.

- ಸುಶ್ಮಿತಾ ಜೈನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next