Advertisement

ಅಸ್ಸಾಂನಲ್ಲಿ ಎಕ್ಯುಐಎಸ್‌ ಉಗ್ರನ ಬಂಧನ

08:26 PM Aug 26, 2022 | Team Udayavani |

ಗೋಲ್‌ಪಾರಾ: ಅಸ್ಸಾಂನ ಗೋಲ್‌ಪಾರಾದಲ್ಲಿ ನಿಷೇಧಿತ ಅಲ್‌-ಖೈದಾ ಇನ್‌ ಇಂಡಿಯನ್‌ ಸಬ್‌ಕಾಂಟಿನೆಂಟ್‌ ಸಂಘಟನೆಯ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆತನಿಗೆ ಬಾಂಗ್ಲಾದೇಶದ ಅನ್ಸಾರುಲ್‌ ಬಾಂಗ್ಲಾ ಟೀಂ (ಎಬಿಟಿ) ಎಂಬ ಉಗ್ರ ಸಂಘಟನೆಯ ನಂಟು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳ ಅವಧಿಯಲ್ಲಿ 2ನೇ ಬಾರಿಗೆ ಉಗ್ರನನ್ನು ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಆತ ಮದರಸಾ ಒಂದರಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡುವ ಬಗ್ಗೆ ಆತ ಸಕ್ರಿಯನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಸ್ಥಳೀಯ ನ್ಯಾಯಾಲಯ ಆತನನ್ನು 5 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next