Advertisement

ಅನರ್ಹ ಪಡಿತರ ಚೀಟಿ ಮರಳಿಸಲು ಎಪ್ರಿಲ್‌ ಗಡು

09:54 AM Mar 07, 2020 | sudhir |

ಉಡುಪಿ: ಅಕ್ರಮವಾಗಿ ಬಿಪಿಎಲ್‌ ಪಡಿತರ ಚೀಟಿ ಪಡೆದುಕೊಂಡಿರುವವರು ಅದನ್ನು ಸರಕಾರಕ್ಕೆ ಹಿಂದಿರುಗಿಸಲು ಎಪ್ರಿಲ್‌ ಅಂತ್ಯದವರೆಗೆ ಮತ್ತೂಂದು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಅನರ್ಹರು ಬಿಪಿಎಲ್‌ ವರ್ಗದ ಪಡಿತರ ಚೀಟಿಗಳನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ಶಿರಸ್ತೆದಾರ್‌/ಆಹಾರ ನಿರೀಕ್ಷಕರಿಗೆ ಮರಳಿಸಿ ಎಪಿಎಲ್‌ಗೆ ವರ್ಗಾಯಿಸಿಕೊಳ್ಳಲು ಅಥವಾ ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂದಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.

ದಂಡ, ಕ್ರಿಮಿನಲ್‌ ಮೊಕದ್ದಮೆ
ಅವಧಿ ಮುಗಿದ ಅನಂತರ ಇಲಾಖೆಯೇ ಕಾರ್ಯಾಚರಣೆ ನಡೆಸಿ ಅನರ್ಹರು ಹೊಂದಿರುವ ಬಿಪಿಎಲ್‌ ವರ್ಗದ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದಾಗ ಅಂತಹ ಕುಟುಂಬಗಳು ತಾವು ಪಡಿತರ ಚೀಟಿಗಳನ್ನು ಹೊಂದಿದ ದಿನಾಂಕದಿಂದ ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆಯ ಬೆಲೆಯ ಅನುಸಾರ ಹಣವನ್ನು ದಂಡವನ್ನಾಗಿ ಪಾವತಿಸಬೇಕಾಗುವುದು. ಜತೆಗೆ ದಿ ಕರ್ನಾಟಕ ಪ್ರಿವೆನ್ಶನ್‌ ಆಫ್ ಅನ್‌ಅಥರೈಸ್ಡ್ ಪೊಸಿಷನ್‌ ಆಫ್ ರೇಷನ್‌ ಕಾರ್ಡ್‌ ಆರ್ಡರ್‌ -1977ರ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.

ಆದ್ದರಿಂದ ಅನರ್ಹರು ತಾವು ಹೊಂದಿರುವ ಬಿಪಿಎಲ್‌ ವರ್ಗದ ಪಡಿತರ ಚೀಟಿಗಳನ್ನು ತತ್‌ಕ್ಷಣ ಸರಕಾರಕ್ಕೆ ವಾಪಸು ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next