Advertisement

ಎ. 23ರಿಂದ ಎಸೆಸೆಲ್ಸಿ ಮೌಲ್ಯಮಾಪನ; ಮೇ 3 ರೊಳಗೆ ಪೂರ್ಣ

12:27 AM Apr 21, 2022 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಇದೇ ಎ. 23ರಿಂದ ಆರಂಭಗೊಳ್ಳಲಿದೆ. ಮೇ 3ರೊಳಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Advertisement

ಗುರುವಾರ ಮತ್ತು ಶುಕ್ರವಾರ (ಎ. 21, 22) ಮೌಲ್ಯಮಾಪಕರಿಗೆ ತರಬೇತಿ ನೀಡಲಾಗುತ್ತದೆ. 23ರಿಂದ ಅಧಿಕೃತವಾಗಿ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದ 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.

63,796 ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ನೀಡ ಲಾಗಿದೆ. ಸುಮಾರು 4ರಿಂದ 5 ಸಾವಿರ ಮಂದಿ ಅನಾರೋಗ್ಯ ಇನ್ನಿತರ ಕಾರಣಗಳನ್ನು ನೀಡಿ ಗೈರು ಹಾಜರಾಗುತ್ತಾರೆ. ಸುಮಾರು 50 ಸಾವಿರ ಶಿಕ್ಷಕರು ಹಾಜರಾದರೂ ನಿಗದಿತ ಸಮಯದಲ್ಲಿ ಮೌಲ್ಯಮಾಪನ ಪೂರ್ಣಗೊಳ್ಳಲಿದೆ ಎಂದರು.

ಇದನ್ನೂ ಓದಿ:ಬೆಳಗಾವಿ ವೈದ್ಯಕೀಯ ವಿದ್ಯಾರ್ಥಿಗಳ ವಾಹನ ಪಲ್ಟಿ : ಹಲವರಿಗೆ ಗಾಯ

ಮೇ 2ನೇ ವಾರ ಫ‌ಲಿತಾಂಶ?
ಮೌಲ್ಯಮಾಪನದ ಬಳಿಕ ಉತ್ತರ ಪತ್ರಿಕೆಗಳನ್ನು ವಾಪಸ್‌ ಕಳುಹಿಸುವುದು ಮತ್ತು ಅಂಕಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವುದು ಸೇರಿದಂತೆ ತಾಂತ್ರಿಕ ಕೆಲಸಗಳಿಗೆ ಒಂದು ವಾರಗಳ ಸಮಯ ಬೇಕಾಗುತ್ತದೆ. ಮೇ 2ನೇ ವಾರದಲ್ಲಿ ಫ‌ಲಿತಾಂಶ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Advertisement

1,223 ಶಿಕ್ಷಕರು ಕಪ್ಪು ಪಟ್ಟಿಗೆ
ಮೌಲ್ಯಮಾಪನ ನಿರ್ಲಕ್ಷ್ಯ ವಹಿಸಿದ್ದ 1,223 ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ದಂಡ ಕೂಡ ವಿಧಿಸಲಾಗಿದೆ. ಕನಿಷ್ಠ 6 ಅಂಕಗಳಿಗೆ ಕಡಿಮೆ ಇದ್ದರೆ ದಂಡವಿಲ್ಲ, ಅನಂತರ ವಿವಿಧ ಹಂತಗಳಿದ್ದು, ಅದರ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಈ ವರ್ಷ ತಪ್ಪು ಮುಂದುವರಿದರೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next