Advertisement

ಅಪ್ಪು ಪುಣ್ಯಸ್ಮರಣೆ: 250 ಮಂದಿ ನೇತ್ರದಾನಕೆ ನೋಂದಣಿ 

02:59 PM Dec 06, 2021 | Team Udayavani |

ಕುಣಿಗಲ್‌: ನಟ ದಿ.ಅಪ್ಪು ಅವರ ತಿಂಗಳ ಪುಣ್ಯ ಸ್ಮರಣೆ ಪ್ರಯುಕ್ತ ಪಟ್ಟಣದಲ್ಲಿ ಅಪ್ಪು ಯುವ ಬಿಗ್ರೇಡ್‌ನಿಂದ ನಡೆದ ನೇತ್ರದಾನ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 250ಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

Advertisement

ಪಟ್ಟಣದ ತಾಪಂ ಮುಂಭಾಗದಲ್ಲಿ ಅಪ್ಪು ಯುವಬ್ರಿಗೇಡ್‌ ಹಾಗೂ ಅಪ್ಪು ಅಭಿಮಾನಿಗಳು ಹಮ್ಮಿಕೊಂಡಿದ್ದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್‌ ಇಷ್ಟಪಡುತ್ತಿದ್ದ ರಾಗಿ ಮುದ್ದೆ, ಫಿಶ್‌,ಬಿರಿಯಾನಿ, ಕಾಲ್‌ ಸೂಪ್‌, ಚಿಕನ್‌ ಕಬಾಬ್‌,ಮಟನ್‌ ಕುರ್ಮ ಸೇರಿದಂತೆ ವಿವಿಧ ತಿಂಡಿತಿನ್ನಿಸುಗಳನ್ನು ಎಡೆ ಇಟ್ಟು, ಅವರ ಭಾವ ಚಿತ್ರಕ್ಕೆಪುಷ್ಪ ನಮನ ಸಲ್ಲಿಸುವ ಮೂಲಕ ಪುಣ್ಯ ಸ್ಮರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಣ್ಣುದಾನಕ್ಕೆ ಮುಗಿಬಿದ್ದ ಅಭಿಮಾನಿಗಳು: ಪುನೀತ್‌ ಪುಣ್ಯಸ್ಮರಣೆ ಪ್ರಯುಕ್ತ ನಡೆದ ನೇತ್ರದಾನ ಶಿಬಿರದಲ್ಲಿ ಕಣ್ಣುದಾನ ಮಾಡಲು ಅಭಿಮಾನಿಗಳು ಮುಗಿಬಿದ್ದು, ಕಣ್ಣುದಾನದಫಾರಂಗೆ ಸಹಿ ಹಾಕಿ ನೋಂದಣಿ ಮಾಡಿಸಿದರು.ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಹಾಗೂಪುನೀತ್‌ ಅಭಿಮಾನಿ ಸಂಘದ ಎಲ್ಲಾಪದಾಧಿಕಾರಿಗಳು ಸೇರಿದಂತೆ ಸುಮಾರು 250ಕ್ಕೂಹೆಚ್ಚು ಮಂದಿ ನೇತ್ರದಾನ ನೋಂದಣಿ ಮಾಡಿದರು.

ಅಂಧಕಾರದ ವಿರುದ್ಧ ಸಮರ: ಎಂಎಂ ಆಸ್ಪತ್ರೆಸಂಸ್ಥಾಪಕ, ನೇತ್ರತಜ್ಞ ಡಾ.ರವಿಕುಮಾರ್‌ಮಾತನಾಡಿ, ವಿಶ್ವದಲ್ಲಿ 40 ದಶಲಕ್ಷ ಅಂಧರಿದ್ದಾರೆ.ಭಾರತ ದೇಶದಲ್ಲಿ 9 ದಶಲಕ್ಷ ದೃಷ್ಟಿಹೀನರಿದ್ದಾರೆ.ಪ್ರತಿಯೊಬ್ಬರು ಕಣ್ಣುಗಳನ್ನು ದಾನ ಮಾಡುವಮೂಲಕ ಅಂಧಕಾರದ ವಿರುದ್ಧ ಸಮರದಲ್ಲಿಭಾಗಿಗಳಾಗಿ ಮತ್ತು ಇಬ್ಬರಿಗೆ ಬೆಳಕು ನೀಡುವಮೂಲಕ ಪುಣ್ಯದ ಕೆಲಸದಲ್ಲಿ ಭಾಗಿಯಾಗಿ ಎಂದು ತಿಳಿಸಿದರು.

ಕುಣಿಗಲ್‌ನಲ್ಲಿ ಕಣ್ಣುದಾನ ಮಾಡಿರುವ ವ್ಯಕ್ತಿಗಳಸಂಖ್ಯೆ ವಿರಳ. ಆದರೆ, ಪುನೀತ್‌ ರಾಜ್‌ಕುಮಾರ್‌ನಿಧನದ ನಂತರ ಅವರ ನೇತ್ರದಾನ ಮಾಡಲುಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

Advertisement

ನಾರಾಯಣ್‌ ನೇತ್ರಾಲಯದ ನೇತ್ರತಜ್ಞಡಾ.ಎಂ.ಕೆ.ಕೃಷ್ಣ ಮಾತನಾಡಿದರು. ಪುರಸಭೆ ಅಧ್ಯಕ್ಷನಾಗೇಂದ್ರ, ಪುರಸಭೆ ಸದಸ್ಯರಾದ ರಂಗಸ್ವಾಮಿ,ಆನಂದ್‌ ಕುಮಾರ್‌, ಅರುಣ್‌ ಕುಮಾರ್‌,ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್‌.ಬಲರಾಮ್‌,ಶಿವರಾಜ್‌ ಕುಮಾರ್‌ ಅಭಿಮಾನಿ ಬಳಗದ ಅಧ್ಯಕ್ಷಶಿವಣ್ಣ, ಪುನೀತ್‌ ಅಭಿಮಾನಿ ಸಂಘದ ಯೋಗಿಶ್‌,ಗುರುರಾಜ್‌, ಕೆ.ವಿ.ಆರ್‌.ರಘು, ಮೋಹನ್‌ ಕುಮಾರ್‌, ಶ್ರೀನಿವಾಸ್‌ಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next