Advertisement
ಚಿತ್ರದುರ್ಗದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವರ್ ಮತ್ತಿತರೆ ಸಮಸ್ಯೆಗಳಿಗೆ ಅಧಿಕಾರಿಗಳು ಹೆದರಿದ್ದರು. ಸಾಕಷ್ಟು ದೂರು ಬರುತ್ತಿದ್ದವು. ಹಣ ಕೂಡಾ ಬಿಡುಗಡೆಯಾಗುತ್ತಿರಲಿಲ್ಲ. ಈವರೆಗೆ ಶೇ. 62 ರಷ್ಟು ಮಾತ್ರ ಅನುದಾನ ಖರ್ಚಾಗಿತ್ತು. ಇನ್ನೂ ಶೇ. 38 ಖರ್ಚಾಗಬೇಕಿದೆ. ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಮೂರು ತಿಂಗಳ ಕಾಲ ವಿಶಲ್ ಆ್ಯಪ್ ಹಿಂಪಡೆದಿದ್ದೇವೆ. ಈಗ ಜಿಪಿಎಸ್ ಮೂಲಕವೇ ಮನೆಗಳಿಗೆ ಹಣ ನೀಡಲಾಗುವುದು ಎಂದು ತಿಳಿಸಿದರು.
Related Articles
Advertisement
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜನಪ್ರಿಯತೆ ಕುಂದಿದೆ. ಅದಕ್ಕಾಗಿ ಏನೇನೋ ಮಾತಾಡಿ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸೋಮಣ್ಣ ವ್ಯಂಗ್ಯವಾಡಿದರು.
ಈಗಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆಗೆ ನಾನು ಪುಷ್ಠಿ ಕೊಡುತ್ತೇನೆ. ಠಾಕ್ರೆಯ ಉದ್ಧಟತನದ ಪರಮಾವಧಿಗೆ ಸಿಎಂ ಬಿಎಸ್‌ವೈ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಹಾಜನ್ ವರದಿಯೇ ಅಂತಿಮ ತೀರ್ಮಾನ. ನಮ್ಮ ರಾಜ್ಯದಲ್ಲಿರುವುದನ್ನು ಅಭಿವೃದ್ಧಿ ಮಾಡಲು ಯಾರನ್ನೋ ಕೇಳುವ ಅಗತ್ಯವಿಲ್ಲ.
ಒಬ್ಬ ಮುಖ್ಯಮಂತ್ರಿಯಾಗಿ ಆ ಹುದ್ದೆಯ ಗಾಂಭಿರ್ಯತೆ ಅರ್ಥ ಮಾಡಿಕೊಳ್ಳದೆ ಈ ರೀತಿಯಾಗಿ ಜನರನ್ನು ಎತ್ತಿಕಟ್ಟುವುದು ಮೂರ್ಖತನ ಎಂದು ಹೇಳಿದರು.
ಇದನ್ನೂ ಓದಿ: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ ಕಾರು;ಸ್ಥಳದಲ್ಲಿಯೇ ಇಬ್ಬರ ದುರ್ಮರಣ,
ಯುಗಾದಿಯೊಳಗೆ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ನಾವು ಮಾತನಾಡುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಖುದ್ದು ಅಮಿತ್ ಶಾ ಅವರೇ ಬಿ.ಎಸ್. ಯಡಿಯೂರಪ್ಪ ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದಾರೆ ಎಂದರು.
ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ಕುರಿತ ಪ್ರಶ್ನೆಗೆ ಅದು ಮುಗಿದು ಹೋದ ವಿಚಾರ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಇದ್ದರು
ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ ಸಾವು; ತೆಲಂಗಾಣದಲ್ಲಿ 3ನೇ ಪ್ರಕರಣ