Advertisement

31ರೊಳಗೆ ಕಾಮಗಾರಿಗೆ ಅನುಮೋದನೆ

03:19 PM Oct 12, 2019 | Team Udayavani |

ಕಾರವಾರ: ಅಕ್ಟೋಬರ್‌ 31ರೊಳಗೆ ವಿವಿಧ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆ ಪಡೆಯುವಂತೆ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಸೂಚಿಸಿದ್ದಾರೆ.

Advertisement

ಶುಕ್ರವಾರ ನಡೆದ ಜಿಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಈಗಾಗಲೇ ಬಹುತೇಕ ಎಲ್ಲ ಇಲಾಖೆಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ಅ.31 ರೊಳಗೆ ಪಂಚಾಯತ್‌ ರಾಜ್‌ ಇಲಾಖೆ ಕಾಮಗಾರಿಗಳು ಹಾಗೂ ಗ್ರಾಮೀಣ ಕುಡಿವ ನೀರಿನ ಯೋಜನೆ ಕಾಮಗಾರಿಗಳಿಗೆ ಅಂದಾಜು ಪಟ್ಟಿ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸೂಚಿಸಿದರು.

ಅಂದಾಜು ಪಟ್ಟಿ ಮಾಡುವುದೇ ವಿಳಂಬವಾದರೆ ಪ್ರಸಕ್ತ ಸಾಲಿನ ಕಾಮಗಾರಿಗಳು ಮುಗಿಯುವುದು ಈ ಆರ್ಥಿಕ ವರ್ಷದಲ್ಲಿ ಮುಗಿಯುವುದು ಕಷ್ಟವಾಗಲಿದೆ. ಅಲ್ಲದೆ ರಸ್ತೆ, ಕುಡಿಯುವ ನೀರಿನ ಕಾಮಗಾರಿಗಳ ಅತಿ ಜರೂರು ಆಗಬೇಕಿರುವುದರಿಂದ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಹೇಳಿದರು.

ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದ ವಿವಿಧ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಜಿಪಂ ಸಿಇಒ ಎಂ.ರೋಷನ್‌, ಎಲ್ಲ ಅನುಮೋದಿತ ಕ್ರಿಯಾ ಯೋಜನೆಗಳನ್ನು ಅಂದಾಜು ಪಟ್ಟಿ ತಯಾರಿಕೆಗೆ ಸಂಬಂಧಿತ ಎಂಜಿನಿಯರಿಂಗ್‌ ವಿಭಾಗಕ್ಕೆ ಸಲ್ಲಿಸಬೇಕು. ಎಂಜಿನೀಯರಿಂಗ್‌ ವಿಭಾಗವೂ ಶೀಘ್ರ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆಯಬೇಕು ಎಂದರು. ಎಲ್ಲ ಇಲಾಖೆಗಳ ಅನುದಾನದಲ್ಲಿ ನಿರ್ದಿಷ್ಟ ಶೇಕಡಾವಾರು ಅನುದಾನವನ್ನು ವಿಕಲಚೇತನ ಕಲ್ಯಾಣಕ್ಕೆ ಮೀಸಲಿಡಬೇಕೆಂಬ ನಿಯಮವಿದ್ದು ಪ್ರಸ್ತುತ ಕೇವಲ ತ್ರಿಚಕ್ರ ವಾಹನ ಮಾತ್ರ ವಿತರಿಸಲಾಗುತ್ತಿದೆ. ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳುವ ಅವಕಾಶವಿದ್ದಲ್ಲಿ ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.

ಅಲ್ಲದೆ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ನಿಯಮಾವಳಿಯಂತೆ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಪ್ರತಿ ಇಲಾಖೆಯ ಶೇ.15 ರಷ್ಟು ಅನುದಾನ ವಿನಿಯೋಗಿಸುವ ಸಂಬಂಧ ನಿಯಮಾನುಸಾರ ಕ್ರಮಕ್ಕೆ ಸಭೆಯಲ್ಲಿ ಸೂಚಿಸಲಾಯಿತು. ವಿಕಲಚೇತನರ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಜಿಲ್ಲಾ ಸರ್ಜನ್‌ ನೇತೃತ್ವದ ಸಮಿತಿಯಿಂದಲೇ ನೀಡಲಾಗುತ್ತಿದೆ. ಅದು ಪ್ರತಿ ಗುರುವಾರ ನಡೆಯುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ಜನಜಂಗುಳಿ ಆಗಲಿದೆ ಮತ್ತು ವಿಕಲಚೇತನರು ದೂರದ ಊರುಗಳಿಂದ ಬರಬೇಕಿರುವುದರಿಂದ ಪರ್ಯಾಯ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಸಲಹೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕ್ರೀಡಾ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜಯ ಮಾರುತಿ ಹಣಬರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next