Advertisement
ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಪೀಠ, ವಿಸ್ತೃತ ಪೀಠದ ಮೂಲಕ ಈ ಕುರಿತು ಪುನರ್‌ಪರಿಶೀಲನೆ ನಡೆಸುವುದಾಗಿ ಘೋಷಿಸಿತು. ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವು ಅಪ ರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸರ್ವೋಚ್ಚ ನ್ಯಾಯಾಲಯವೇ ದಿಲ್ಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧ ವೆಂದು ಘೋಷಿಸಿತ್ತು.
ಸೋಮವಾರ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಅರವಿಂದ್ ದಾತರ್, ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ
9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಖಾಸಗಿತನದ ಹಕ್ಕು ಸಂಬಂಧ ನೀಡಿದ ತೀರ್ಪನ್ನು ಪ್ರಸ್ತಾವಿಸಿ, “ಲೈಂಗಿಕ ಸಂಗಾತಿ ಯನ್ನು ಆಯ್ಕೆ ಮಾಡಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕುಗಳಲ್ಲೊಂದು’ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು. ಜತೆಗೆ, ಸಮ್ಮತಿಯಲ್ಲೇ ನೈಸರ್ಗಿಕವಲ್ಲದ ಲೈಂಗಿಕತೆಯಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಇಬ್ಬರು ವಯಸ್ಕರನ್ನು ಜೈಲಿಗೆ ಹಾಕುವುದು ಸರಿಯಲ್ಲ ಎಂದೂ ಹೇಳಿದರು. ಐಪಿಸಿ ಸೆಕ್ಷನ್ 377 ಹೇಳುವುದೇನು?
ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಯಾರಾದರೂ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿದ್ದು, ಅಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಹಾಗೂ ದಂಡ ವಿಧಿಸ ಬಹುದು ಎಂದು ಈ ಸೆಕ್ಷನ್ ಹೇಳುತ್ತದೆ.
Related Articles
- ಯಾರೂ ತಮ್ಮ ಲೈಂಗಿಕತೆ ಯಿಂದಾಗಿಯೇ ಭಯದಿಂದ ಬದುಕುವಂಥ ಸ್ಥಿತಿ ಇರಬಾರದು
- ಒಬ್ಬರಿಗೆ ನೈಸರ್ಗಿಕ ಎನಿಸಿದ್ದು, ಮತ್ತೂಬ್ಬರಿಗೆ ನೈಸರ್ಗಿಕ ಅಲ್ಲದೇ ಇರಬಹುದು
- ಕಾಲ ಕಳೆದಂತೆ ಸಾಮಾಜಿಕ ನೈತಿಕತೆಯೂ ಬದಲಾಗುತ್ತಾ ಹೋಗು ತ್ತದೆ. ಬದುಕನ್ನು ಕಾನೂನು ತೂಗಿಸಿ ಕೊಂಡು ಹೋಗುತ್ತದೆ. ಅಂತೆಯೇ ಬದುಕಲ್ಲಿ ಬದಲಾವಣೆಗಳೂ ಆಗುತ್ತವೆ.
- ತಮ್ಮ ಆಯ್ಕೆಯೊಂದಿಗೆ ಬದುಕುವ ವರ್ಗದಲ್ಲಿ ಭೀತಿಯ ವಾತಾವರಣ ಮೂಡಬಾರದು. ಹಾಗಂತ, ಆ ಆಯ್ಕೆಯು ಕಾನೂನಿನ ಗಡಿಯನ್ನು ದಾಟಲೂಬಾರದು.
- ಹೀಗಾಗಿ, ವಿಸ್ತೃತ ನ್ಯಾಯಪೀಠವು ಈ ವಿಚಾರದ ಕುರಿತು ಪರಿಶೀಲನೆ ನಡೆಸಲಿದೆ.
Advertisement