Advertisement

“ಹೈ’ಸಿಬ್ಬಂದಿಗೆ 2 ತಿಂಗಳ ವೇತನ ಬಿಡುಗಡೆಗೆ ಒಪ್ಪಿಗೆ

06:35 AM May 29, 2018 | |

ಬೆಂಗಳೂರು: ಹೈಕೋರ್ಟ್‌ ಸಿಬ್ಬಂದಿಯ ಏಪ್ರಿಲ್‌ ಹಾಗೂ ಮೇ ತಿಂಗಳ ಪರಿಷ್ಕೃತ ಹಾಗೂ ಬಾಕಿ ವೇತನವನ್ನು ಮಂಗಳವಾರದೊಳಗೆ ನೀಡುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಕೇಂದ್ರ ಸರ್ಕಾರಿ ನೌಕರರ ವೇತನ ಮಾದರಿಯಲ್ಲಿ ಹೈಕೋರ್ಟ್‌ ಸಿಬ್ಬಂದಿಗೂ ವೇತನ ನೀಡಬೇಕೆಂಬ ಸುಪ್ರೀಂ
ತೀರ್ಪು ಉಲ್ಲಂಘಿಸಿದ ಸಲುವಾಗಿ ಹೈಕೋರ್ಟ್‌ ನೌಕರರು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಹಾಜರಿದ್ದ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎನ್‌ಎಸ್‌ ಪ್ರಸಾದ್‌, ನ್ಯಾ. ಬಿ.ಎಸ್‌. ಪಾಟೀಲ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಕುರಿತು ಅμಡವಿಟ್‌ ಸಲ್ಲಿಸಿದರು.

ಪರಿಷ್ಕತ ವೇತನ ಪಾವತಿಗೆ ಎಚ್‌ಆರ್‌ಎಂಎಸ್‌ ನೋಂದಣಿ ಸೇರಿ ತಾಂತ್ರಿಕ ಕಾರಣಗಳಿದ್ದರಿಂದ ವೇತನ ಪಾವತಿ ವಿಳಂಬವಾಗಿದೆ. ಹೀಗಾಗಿ, ಹೈಕೋರ್ಟ್‌ ಸಿಬ್ಬಂದಿಯ ಪರಿಷ್ಕೃತ ವೇತನದ ಟಿಪ್ಪಣಿಗಳನ್ನು ಸ್ವೀಕರಿಸಿ ಏಪ್ರಿಲ್‌ಹಾಗೂ ಮೇ ತಿಂಗಳು ಬಾಕಿ ಉಳಿಸಿಕೊಂಡಿರುವ ವೇತನವನ್ನು ನೀಡಲಾಗುವುದು. ಜತೆಗೆ, ಸುಪ್ರೀಂ ತೀರ್ಪಿನ ಅನ್ವಯ 2004ರ ಅಕ್ಟೋಬರ್‌ ತಿಂಗಳಿ ನಿಂದ ಈ ವರ್ಷದ ಮಾರ್ಚ್‌ ಮಾಸಾಂತ್ಯಕ್ಕೆ ಅನ್ವಯ ವಾಗುವಂತೆ ಬಾಕಿ ಉಳಿಸಿಕೊಂಡಿರುವ ಪರಿಷ್ಕೃತ ಬಾಕಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ಅμಡವಿಟ್‌ ದಾಖಲಿಸಿಕೊಂಡ ನ್ಯಾಯ ಪೀಠ, ವೇತನ ಪಾವತಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ ಮೇ
30ಕ್ಕೆ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಹೈಕೋರ್ಟ್‌ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ ಎಂಬ ಮಾಹಿತಿಯನ್ನು
ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಸರ್ಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯ ಪೀಠ, ಸುಪ್ರೀಂ ಆದೇಶವನ್ನೇ ಉಲ್ಲಂಘನೆ ಮಾಡಲಾಗುತ್ತದೆ ಎಂದರೆ ಏನರ್ಥ. ವೇತನ ನೀಡದಿದ್ದರೆ ಸಿಬ್ಬಂದಿ ಹೇಗೆ ಜೀವನ ನಡೆಸಬೇಕೆಂದು ಆಕ್ರೋಶ ವ್ಯಕ್ತಪಡಿಸಿತು. ಕೂಡಲೇ ಮುಖ್ಯ ಕಾರ್ಯದರ್ಶಿಯವರು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿತ್ತು. ಹೀಗಾಗಿ, ಹಣಕಾಸು ಇಲಾಖೆ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next