Advertisement

6,601 ಶಾಲೆ, 1,500 ಪಿಯು ಕಾಲೇಜು ಕೊಠಡಿ ನಿರ್ಮಾಣಕ್ಕೆ ಅನುಮೋದನೆ

09:24 PM Jul 23, 2022 | Team Udayavani |

ಬೆಂಗಳೂರು: ರಾಜ್ಯದ 6,601 ಸರಕಾರಿ ಶಾಲೆಗಳು ಹಾಗೂ 1,500 ಪದವಿ ಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

Advertisement

2022-23ನೇ ಸಾಲಿಗೆ ರಾಜ್ಯದ ಸರಕಾರಿ ಶಾಲಾ – ಕಾಲೇಜುಗಳಲ್ಲಿ ತುರ್ತಾಗಿ ಕೊಠಡಿ ನಿರ್ಮಾಣದ ಅಗತ್ಯವಿದ್ದು, ಈ ಕಾಮಗಾರಿಗೆ ತಗಲುವ ವೆಚ್ಚವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಬಂಡವಾಳ ವೆಚ್ಚ, ವಿಶೇಷ ಅಭಿವೃದ್ಧಿ ಯೋಜನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮ ಹಾಗೂ ಜಿಲ್ಲಾ ಖನಿಜ ನಿಗಮಗಳಡಿ ಭರಿಸಲು ಸೂಚಿಸಿದೆ.

ಭರಿಸಲಾದ ವೆಚ್ಚಕ್ಕೆ ಶಾಲಾ ಕಾಮಗಾರಿಗಳಿಗೆ ಸಂಬಂಧಿಸಿ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಕ್ತ ಲೆಕ್ಕಪತ್ರ ನೀಡಬೇಕು. ನಿರ್ಮಾಣದ ಪ್ರಾರಂಭಕ್ಕೆ ಮೊದಲು ಹಾಗೂ ಅನಂತರದ ಫೋಟೋಗಳನ್ನು ಎಸ್‌ಎಟಿಎಸ್‌ನಲ್ಲಿ ಅಪ್‌ಲೋಡ್‌ ಮಾಡಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next