Advertisement

ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಗೊಂಡ ಸಮಿತಿಯಿಂದ ಧರಣಿ

10:20 AM Mar 10, 2022 | Team Udayavani |

ಚಿಂಚೋಳಿ: ಸಿಂಧುತ್ವ ಪ್ರಮಾಣಪತ್ರ ಹಾಗೂ ಗೊಂಡ ಜಾತಿಗೆ ಎಸ್‌ಟಿ ಪ್ರಮಾಣ ಪತ್ರ ತಡೆ ಹಿಡಿದಿರುವ ಬಗ್ಗೆ ಸಿಆರ್‌ಎಲ್‌ ಸುತ್ತೋಲೆ ಹೊರಡಿಸಿರುವ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಗೊಂಡ ಸಂಘರ್ಷ ಸಮಿತಿ ತಾಲೂಕು ಮುಖಂಡರು ತಹಶೀಲ್ದಾರ್‌ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಬುಧವಾರದಿಂದ ಆರಂಭಿ ಸಿದ್ದಾರೆ.

Advertisement

ಧರಣಿ ಸತ್ಯಾಗ್ರಹದಲ್ಲಿ ಗೊಂಡ ಸಮಾಜದ ಮುಖಂಡ ರೇವಣಸಿದ್ಧಪ್ಪ ಅಣಕಲ್‌ ಮಾತನಾಡಿ, ರಾಜ್ಯದಲ್ಲಿ ಗೊಂಡ ಸಮಾಜಕ್ಕೆ ಎಸ್‌ಟಿ ಪ್ರಮಾಣ ಪತ್ರ ಕೊಡದೆ ಬಿಜೆಪಿ ಸರ್ಕಾರ ಅನ್ಯಾಯ ಎಸಗುತ್ತಿದೆ. ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿ ಗೊಂಡ ಜನಾಂಗದವರಿದ್ದಾರೆ. ಅನೇಕ ತಲೆಮಾರುಗಳಿಂದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದು ಅನೇಕ ಸರ್ಕಾರಿ ಹುದ್ದೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ, ರಾಜಕೀಯವಾಗಿಯೂ ಇದರ ಲಾಭ ಪಡೆಯುತ್ತಿದ್ದೇವೆ. ಆದರೆ ಬಿಜೆಪಿ ಸರ್ಕಾರ ಕಳೆದ 30 ಆಗಸ್ಟ್‌ 2021ರಂದು ಹೊರಡಿಸಿದ ಆದೇಶದಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಹಣಮಂತ ಪೂಜಾರಿ ಮಾತನಾಡಿ, ಸರ್ಕಾರದ ಈ ಆದೇಶದಿಂದ ಸರ್ಕಾರಿ ನೌಕರಿಗೆ ನೇಮಕವಾಗಿರುವ ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ರವೀಂದ್ರ ಪೂಜಾರ, ಗಂಗಾಧರ ಗಡ್ಡಿಮನಿ, ರಾಮಚಂದ್ರ, ರವಿಕುಮಾರ ಕುಂಚಾವರಂ, ಸಂತೋಷ ಕುಮಾರ ಮಾಳಪ್ಪನೋರ, ಚಿಮ್ಮಾ ಏಇದಲಾಯಿ ಮಹಾದೇವ, ಗೋಪಾಲ ಪೂಜಾರಿ, ಸುರೇಶ ವೈದ್ಯರಾಜ, ಶಿವಕುಮಾರ ಪೋಚಾಲಿ, ರಾಜಕುಮಾರ ಕನಕಪೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next