Advertisement
ಈ ಬಗ್ಗೆ ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, 20 ದಿನಗಳಲ್ಲಿ ವಾಡಿಕೆಗಿಂತ ಸಾಕಷ್ಟು ಕಡಿಮೆ ಮಳೆಯಾಗಿದೆ. ಮುಂಬರುವ ದಿನಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ. ಹವಾಮಾನ ವಿಜ್ಞಾನಿಗಳು ಕೂಡ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ವರುಣನ ಅವಕೃಪೆ ಮುಂದುವರಿದರೆ, ಮುಂದಿನ ತಿಂಗಳಿನ ಒಂದನೇ ತಾರೀಕು ಅಥವಾ ಮೊದಲ ವಾರದಲ್ಲಿ ಬರ ಘೋಷಣೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೋಡ ಬಿತ್ತನೆ ಬಗ್ಗೆ ಸದ್ಯ ಚಿಂತಿಸಿಲ್ಲ. ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳ ಪ್ರಕಾರ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಶೇ. 96ರಿಂದ 104ರಷ್ಟು ಆಗುವ ನಿರೀಕ್ಷೆ ಇದೆ. ರವಿವಾರದಿಂದ ಮಳೆ ತುಸು ಬಿರುಸಾಗಿದೆ. ಮುಂದಿನ ಎರಡು ದಿನಗಳಲ್ಲಿ ಕಲ್ಯಾಣ ಕರ್ನಾಟಕದಲ್ಲೂ ಮುಂಗಾರು ವ್ಯಾಪಿಸಲಿದೆ. ಕರಾವಳಿಯ ಉಡುಪಿ, ಮಂಗಳೂರು, ಕಾರವಾರದಲ್ಲಿ ಕಳೆದ 24 ತಾಸುಗಳಲ್ಲಿ ವಾಡಿಕೆಯಂತೆ ಮಳೆ ಸುರಿದಿರುವುದು ಆಶಾಭಾವನೆ ಮೂಡಿಸಿದೆ. ಆದರೂ ನಿರೀಕ್ಷೆ ಹುಸಿಯಾಗಿ ಮಳೆ ಕೊರತೆ ಮುಂದುವರಿದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು. 806 ಕಡೆ ಕುಡಿಯುವ ನೀರಿಗೆ ಬರ
ರಾಜ್ಯದ 806ಕ್ಕೂ ಹೆಚ್ಚು ವಸತಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಲ್ಲೆಲ್ಲ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹಲವೆಡೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಉದಾಸೀನರಾಗಬಾರದು ಎಂದು ಸೂಚಿಸಲಾಗಿದೆ. ಸಮಸ್ಯೆ ಉಂಟಾದ 24 ತಾಸುಗಳ ಒಳಗೆ ನೀರು ಪೂರೈಸಲು ನಿರ್ದೇಶಿಸಿರುವುದಾಗಿ ಹೇಳಿದರು.
Related Articles
Advertisement
ಶೇ. 72ರಷ್ಟು ಮಳೆ ಕೊರತೆರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಜೂ. 1ರಿಂದ 17ರ ವರೆಗೆ ವಾಡಿಕೆಗಿಂತ ಶೇ. 72ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ. ಒಟ್ಟಾರೆ ಶೇ. 72ರಲ್ಲಿ ಮಲೆನಾಡು ಭಾಗದಲ್ಲಿ ಅತೀ ಹೆಚ್ಚು, ಶೇ. 83ರಷ್ಟು ಮಳೆ ಖೋತಾ ಆಗಿದೆ. ಕರಾವಳಿಯಲ್ಲಿ ಶೇ. 77, ದಕ್ಷಿಣ ಒಳನಾಡಿನಲ್ಲಿ ಶೇ. 55, ಉತ್ತರ ಒಳನಾಡಿನಲ್ಲಿ ಶೇ. 69ರಷ್ಟು ಮಳೆ ಕೊರತೆಯಾಗಿದೆ. ಕೆಆರ್‌ಎಸ್: 3.81 ಟಿಎಂಸಿ ನೀರು ಮಾತ್ರ ಬಾಕಿ
ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿತಗೊಂಡಿದೆ. ಜಲಾ ಶ ಯ ದಲ್ಲಿ ಒಟ್ಟು 10.811 ಟಿಎಂಸಿ ನೀರಿದ್ದು, ಈ ಪೈಕಿ 3.811 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಉಳಿದ 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ.